ಗೌಡರ ಯುವ ಸೇವಾ ಸಂಘದ ಮಹಾಸಭೆ

Advt_Headding_Middle

 

ನೂತನ ಅಧ್ಯಕ್ಷರಾಗಿ ಚಂದ್ರಕೋಲ್ಚಾರ್, ಕಾರ್ಯದರ್ಶಿಯಾಗಿ ಬೆಳ್ಯಪ್ಪ ಗೌಡ, ಖಜಾಂಚಿ ಚಂದ್ರಶೇಖರ ಮೇರ್ಕಜೆ
ಎಂ.ಜಿ.ಎಂ. ಪ್ರೌಢಶಾಲಾ ಸಂಚಾಲಕರಾಗಿ ದೊಡ್ಡಣ್ಣ ಬರಮೇಲು ಆಯ್ಕೆ
ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘದ ಮಹಾಸಭೆಯು ಸೆ.26 ರಂದು ಸುಳ್ಯದ ಕೊಡಿಯಾಲಬೈಲಿನಲ್ಲಿರುವ ಗೌಡ ಸಮುದಾಯ ಭವನದಲ್ಲಿ ನಡೆಯಿತು. ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಮೋಹನ್ ರಾಂ ಸುಳ್ಳಿ ಸಭಾಧ್ಯಕ್ಷತೆ ವಹಿಸಿದ್ದರು.
ಸಭಾಧ್ಯಕ್ಷರು ಸ್ವಾಗತ ಮಾಡಿದ ಬಳಿಕ ಸಂಘದ ಪ್ರಧಾನ ಕಾರ್ಯದರ್ಶಿ ದೊಡ್ಡಣ್ಣ ಬರಮೇಲು ವರದಿ ವಾಚನ ಗೈದರು. ಖಜಾಂಚಿ ತೇಜಪ್ರಸಾದ್ ಅಮಚೂರು ಲೆಕ್ಕಪತ್ರ ಮಂಡಿಸಿದರು. ಎಂ.ಜಿ.ಎಂ. ಶಾಲಾ ಸಂಚಾಲಕ ಪಿ.ಎಸ್.ಗಂಗಾಧರ್ ಶಾಲೆಯ ವರದಿಯನ್ನು ಮಂಡಿಸಿದರು.
ಬಳಿಕ ಗೌಡರ ಯುವ ಸೇವಾ ಸಂಘದ ಸ್ಥಾಪಕ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮತ್ತು ಸ್ಥಾಪಕ ಕಾರ್ಯದರ್ಶಿ ಎ.ವಿ.ತೀರ್ಥರಾಮರವರು ಮಾತನಾಡಿ ಗೌಡರ ಯುವ ಸೇವಾ ಸಂಘ 1995 ರಲ್ಲಿ ಸ್ಥಾಪನೆಯಾಗಿ 26 ವರ್ಷಗಳಲ್ಲಿ ಮಾಡಿದ ಸಾಧನೆಗಳನ್ನು ಮೆಲುಕು ಹಾಕಿದರು. ಗೌಡರ ಯುವ ಸೇವಾ ಸಂಘದ ಮೂಲಕ ಪ್ರವರ್ತಿತ ಗೊಂಡ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ರಾಜ್ಯ ಮಟ್ಟದ ಸಹಕಾರಿ ಸಂಸ್ಥೆಯಾಗಿ ಬೆಳೆದಿದ್ದು ಎಂಜಿಎಂ ಪ್ರೌಢ ಶಾಲೆಯ ಬೆಳವಣಿಗೆಗೆ ಸಮಾಜ ಬಾಂಧವರು ಇನ್ನಷ್ಟು ಸಹಕಾರ ನೀಡಬೇಕು ಎಂದು ಅವರು ಕೇಳಿಕೊಂಡರು. ಜತೆಗೆ ಸಮಾಜದ ಹೆಮ್ಮೆಯಾಗಿ ತಲೆ ಎತ್ತಿರುವ ಗೌಡ ಸಮುದಾಯ ಭವನದ ಬಾಕಿ ಉಳಿದಿರುವ ಕಾಮಗಾರಿಗಳು ಪೂರ್ಣಗೊಳ್ಳಲು ಸಮಾಜ ಬಾಂಧವರು ಸಹಕಾರ ನೀಡಬೇಕು ” ಎಂದರು.
ಗೌಡರ ಯುವ ಸೇವಾ ಸಂಘದ ಖಜಾಂಚಿ ಹಾಗೂ ಶ್ರೀ ವೆಂಕಟರಮಣ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಅಧ್ಯಕ್ಷ ಪಿ.ಸಿ.ಜಯರಾಮ್ ರವರು ಮಾತನಾಡಿ ” ವೆಂಕಟ್ರಮಣ ಸೊಸೈಟಿ ಈಗಾಗಲೇ ಹದಿನೈದು ಶಾಖೆಗಳನ್ನು ಸ್ಥಾಪಿಸಿ ರಾಜ್ಯ ಮಟ್ಟದ ಸಹಕಾರಿ ಸಂಘವಾಗಿ ಬೆಳೆದಿವೆ. ಈ ಆರ್ಥಿಕ ವರ್ಷದ ಅಂತ್ಯದೊಳಗೆ ಪುನಹ 5 ಶಾಖೆಗಳು ಸ್ಥಾಪನೆಯಾಗಲಿವೆ. ಎಂ.ಜಿ.ಎಂ. ಕನ್ನಡ ಮಾಧ್ಯಮ ಪ್ರೌಢ ಶಾಲೆಗೆ ವಿದ್ಯಾರ್ಥಿಗಳ ಕೊರತೆ ಇರುವ ಕಾರಣ ವೆಂಕಟರಮಣ ಸೊಸೈಟಿಯೇ ಅಲ್ಲಿಯ ಖರ್ಚನ್ನು ಭರಿಸುತ್ತಿದೆ ” ಎಂದು ಹೇಳಿದರು.

ಸಭಾಧ್ಯಕ್ಷತೆ ವಹಿಸಿದ್ದ ಮೋಹನ್ ರಾಂ ಸುಳ್ಳಿಯವರು ಮಾತನಾಡಿ, ” ಗೌಡ ಸಮುದಾಯ ಭವನದ ಕೆಲಸ ಸಂಪೂರ್ಣಗೊಳ್ಳಬೇಕಾದರೆ ಇನ್ನಷ್ಟು ಆರ್ಥಿಕ ಸಹಕಾರ ಬೇಕಾಗುತ್ತದೆ. ಈಗ ನಾವು 2 ಸಾವಿರದಷ್ಟು ಸಮಾಜ ಬಾಂಧವರ ಮನೆಯನ್ನಷ್ಟೆ ತಲುಪಿದ್ದೇವೆ. ಇನ್ನೂ ಸುಮಾರು 8 ಸಾವಿರ ಸಮಾಜ ಬಾಂಧವರ ಮನೆ ಬಾಕಿಯಿದೆ. ನಾವು ಅವರನ್ನು ಸಂಪರ್ಕಿಸಿದರೆ ಹಣ ಕೊಡಲು ಅವರು ಸಿದ್ಧರಿದ್ದಾರೆ ” ಎಂದರು.
” ಸುಳ್ಯ ನಗರದಿಂದ ಕೊಡಿಯಾಲಬೈಲಿನಲ್ಲಿರುವ ಸಮುದಾಯ ಭವನದ ವರೆಗೆ ಬರಲು ದೂರವಾಗುತ್ತದೆ ಎಂದು ಕೆಲವರು ಹೇಳುತ್ತಾರೆ. ನಾವು ಅದಕ್ಕಾಗಿ ಸಮುದಾಯ ಭವನದ ಬಾಡಿಗೆಯನ್ನು ತುಂಬಾ ಕಡಿಮೆಗೊಳಿಸಿದ್ದೇವೆ. ಸುಳ್ಯ ಕೊಡಿಯಾಲಬೈಲು ದುಗಲಡ್ಕ ರಸ್ತೆಯನ್ನು ಅಗಲಗೊಳಿಸಿ ಅಭಿವೃದ್ಧಿಪಡಿಸುವ ಪ್ರಸ್ತಾಪ ಸರಕಾರದ ಮುಂದಿದೆ. ಈಗಾಗಲೇ ಕೊಡಿಯಾಲಬೈಲು ಸೇತುವೆಗೆ ಹನ್ನೊಂದು ಕೋಟಿ ರೂ. ಮಂಜೂರಾಗಿದೆ. ನಮ್ಮ ಸಮುದಾಯ ಭವನದ ಇನ್ನೊಂದು ಬದಿಯಲ್ಲಿ ಅರೆಭಾಷೆ ಅಕಾಡೆಮಿ ನೇತೃತ್ವದಲ್ಲಿ ಬೃಹತ್ ಸಂಸ್ಕೃತಿ ಗ್ರಾಮ ನಿರ್ಮಾಣವಾಗುತ್ತದೆ. ಈ ರಸ್ತೆ ನಿರ್ಮಾಣ ಮತ್ತು ಸಂಸ್ಕೃತಿ ಗ್ರಾಮ ನಿರ್ಮಾಣ ಆದಾಗ ಈ ಗೌಡ ಸಮುದಾಯ ಭವನ ಕೇಂದ್ರಸ್ಥಾನವಾಗುತ್ತದೆ. ನಾವು ಸಮುದಾಯ ಭವನದ ಉತ್ತಮ ವ್ಯವಸ್ಥೆಯ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು ” ಎಂದರು.
ಆ ಬಳಿಕ ಮುಂದಿನ 3 ವರ್ಷದ ಅವಧಿಯ ಆಡಳಿತ ಮಂಡಳಿಗೆ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು. ದೊಡ್ಡಣ್ಣ ಬರೆಮೇಲು ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.