ರಸ್ತೆ ದಾಟುತ್ತಿದ್ದ ವೃದ್ಧರೊಬ್ಬರಿಗೆ ಗುದ್ದಿದ ರಿಕ್ಷಾ

Advt_Headding_Middle

 

ಗುದ್ದಿ ಹೋದ ರಿಕ್ಷಾವನ್ನು ಹಿಡಿದು ತಂದ ಸ್ಥಳೀಯರು

ಸುಳ್ಯದ ಬಾಳೆಮಕ್ಕಿಯಲ್ಲಿ ರಸ್ತೆ ದಾಟುತ್ತಿದ್ದ ವೃದ್ಧರೋರ್ವರಿಗೆ ಆಟೋ ರಿಕ್ಷಾವೊಂದು ಢಿಕ್ಕಿ ಹೊಡೆದು ನಿಲ್ಲಿಸದೆ ಹೋದ ಘಟನೆ ವರದಿಯಾಗಿದ್ದು, ಅವರನ್ನುಜನರೇ ಪತ್ತೆಹಚ್ಚಿ ಕರೆತಂದಿರುವ ಘಟನೆ ವರದಿಯಾಗಿದೆ.
ಬಾಳೆಮಕ್ಕಿ ಜೀಪು ನಿಲ್ದಾಣದ ಬದಿಯಿಂದ ರಸ್ತೆ ದಾಟುತ್ತಿದ್ದ ಕೊಯಿಂಗಾಜೆಯ ಕೃಷ್ಣಪ್ಪ ಎಂಬವರು ಆಟೋ ಡಿಕ್ಕಿಯಾಗಿ ಗಾಯಗೊಂಡ ವ್ಯಕ್ತಿ. ಘಟನೆ ನಡೆದ ಸಮಯ ಸ್ಥಳೀಯರು ಅವರನ್ನು ಆಟೋದಲ್ಲಿ ಕುಳ್ಳಿರಿಸಿ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆಯನ್ನು ಮಾಡಿದರು. ಕೃಷ್ಣಪ್ಪ ರವರ ಮನೆಯವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದಾಗ ಮಗ ಮತ್ತು ಸೊಸೆ ಘಟನಾ ಸ್ಥಳಕ್ಕೆ ಬಂದು ಗಾಯಾಳುವನ್ನು ಆಸ್ಪತ್ರೆಗೆ ಚಿಕಿತ್ಸೆಗೆ ಕೊಂಡೊಯ್ದಿದ್ದಾರೆ. ಅಪಘಾತದಿಂದ ಕೃಷ್ಣಪ್ಪ ರವರ ತುಟಿಯ ಭಾಗಕ್ಕೆ ಗಾಯವಾಗಿದೆ.
ಗಾಯಾಳುವನ್ನು ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಂದರ ಪಾಟಾಜೆ ಹಾಗೂ ಕಾರ್ಯದರ್ಶಿ ರಾಜೇಶ್ ಕಜೆ ರಸ್ತೆಯಿಂದ ಮೇಲೆತ್ತಲು ಸಹಕರಿಸಿದರು.
ಪೈಚಾರು ಮೂಲದ ಅಸೈನ್, ಹಾಗೂ ತಯಿಬ್ ಎಂಬುವವರು ಆಟೋವನ್ನು ಹಿಂಬಾಲಿಸಿ ಆಟೋ ಚಾಲಕನನ್ನು ರಾಮ ಬಾರ್ ಬಳಿಯಿಂದ ಕರೆದುಕೊಂಡು ಬಂದರು.
ತನ್ನ ರಿಕ್ಷಾದಲ್ಲಿ ಬಾಡಿಗೆ ಪಾರ್ಟಿ ಇದ್ದುದರಿಂದ, ತಾನು ನಿಲ್ಲಿಸದೆ ಹೋದೆ ಎಂದು ರಿಕ್ಷಾ ಚಾಲಕ ಕರಿಯಮೂಲೆಯ ಭಾಸ್ಕರರವರು ಸುದ್ದಿಗೆ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.