ಸುಳ್ಯ: ರೋಟರಿ ವಿದ್ಯಾ ಸಂಸ್ಥೆಯಲ್ಲಿ ಎಸ್. ಎಸ್.ಎಲ್.ಸಿ. ಸಾಧಕರಿಗೆ ಸನ್ಮಾನ ಸಮಾರಂಭ

Advt_Headding_Middle

2020-21ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಸೆ. 25ರಂದು ನಡೆಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಸುಳ್ಯದ ಅಧ್ಯಕ್ಷ ರೋ.ಪ್ರಭಾಕರನ್ ನಾಯರ್ ತಮ್ಮ ಅಧ್ಯಕ್ಷೀಯ ನುಡಿಗಳಿಂದ ಮಕ್ಕಳಿಗೆ ಶುಭ ಹಾರೈಸಿದರು.
ಶಾಲಾ ಸಂಚಾಲಕರಾದ ರೊ. ಗಿರಿಜಾಶಂಕರ್ ತುದಿಯಡ್ಕ ಶುಭ ಹಾರೈಸುತ್ತಾ ಮಕ್ಕಳು ಶಿಕ್ಷಣದ ಜೊತೆ ಸಂಸ್ಕಾರವನ್ನೂ ಅಳವಡಿಸಿಕೊಳ್ಳಬೇಕೆಂದರು.ರೋಟರಿ ವಿದ್ಯಾಸಂಸ್ಥೆಗಳ ಸ್ಥಾಪಕಾಧ್ಯಕ್ಷರಾಗಿರುವ ರೊ. ರಾಮಚಂದ್ರ ಪಿ. ಶಾಲೆಯ ಸಮಸ್ತ ಚಟುವಟಿಕೆಗಳ ಬಗ್ಗೆ ನೆನಪಿಸಿ, ಉನ್ನತ ವ್ಯಾಸಂಗಕ್ಕಿರುವ ಬೇರೆ ಬೇರೆ ಸಾಧ್ಯತೆಗಳನ್ನು ತಿಳಿಸಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಶೇಡಿಕಜೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕರಾದ ಅಚ್ಚ್ಯುತ ಅಟ್ಲೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಅತೀ ಹೆಚ್ಚು ಅಂಕ ಗಳಿಸಿದ ಪ್ರಜ್ಞ . ಕೆ.ಸಿ (617/625) ಹಾಗೂ ಅಮರ್ ಕೆ.ಪಿ.(615/625)ಯವರನ್ನು ಶಾಲು, ಫಲ-ಪುಷ್ಪ, ಸ್ಮರಣಿಕೆ ಹಾಗೂ ಹಾರಾರ್ಪಣೆ ಮೂಲಕ ಗೌರವಿಸಲಾಯಿತು.


ಡಿಸ್ಟಿಂಕ್ಷನ್ ಗಳಿಸಿದ ಕೌಶಿಕ್ ರೈ , ರಚಿತಾ, ಅಮೃತ್ ಕಿರಣ್, ಸಮೀಕ್ಷ ಜಿ, ವಾಗ್ದೇವಿ ಎಂ.ಡಿ, ಕನ್ನಿಕಾ ಡಿ. ಅಂಬೆಕಲ್ಲು, ಫಾತಿಮತ್ ಇಝ, ಜ್ಯೋತಿಕಾ ಜಿ, ಪಂಚಮಿ ಎಸ್.ಆರ್., ಶ್ರದ್ಧಾ ಎನ್.ಎಸ್, ಧೃತಿ ಕೆ.ಹೆಚ್, ಪ್ರಜ್ವಲ್ ಪಿ.ಎಸ್ , ಶ್ರೀಶ ವಿ.ಎಸ್, ಗಗನ ಎಂ.ಆರ್, ಧೀರಜ್ ಪಿ.ಡಿ , ಅಸಿಯಾ ಇಫ ಕೆ.ಹೆಚ್ , ಮುಶ್ಫಿಕಾ ಎಂ.ಎಂ , ಭುವನಶ್ರೀ , ರಿತೇಶ್ ಎನ್.ಡಿ , ಅಶ್ಲೇಷ್ ಹೆಚ್.ಎಸ್ ಇವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶ್ರೀಮತಿ ದಮಯಂತಿ ಪೋಷಕರ ನೆಲೆಯಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ವಿದ್ಯಾರ್ಥಿನಿ ಸನಿಹ ಶೆಟ್ಟಿ ಸ್ವಾಗತಿಸಿ, ತುಷಾರ್ ಕಾರ್ತಿಕ್ ವಂದಿಸಿದರು. ವಿದ್ಯಾರ್ಥಿನಿಯರಾದ ಪ್ರಣಮ್ಯ, ಕೀರ್ತನ, ಅವನಿ ಮತ್ತು ವೈಷ್ಣವಿ ಪ್ರಾರ್ಥಿಸಿದರು.
ಕು. ರಮ್ಯ ಪಾರ್ವತಿ ಹಾಗೂ ಆತ್ಮಿಕ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಶ್ರೀಮತಿ ಉಷಾ ಕೆ. ಹಾಗೂ ಸಂಜೀವಿ. ಪಿ. ಆರ್. ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.