ಶ್ರೀ ಸುಬ್ರಹ್ಮಣ್ಯೇಶ್ವರ ಪಿಯು ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಸಾವಿತ್ರಿ ಕೆ. ರವರು ಇಂದು ಸೇವಾ ನಿವೃತ್ತಿ ಹೊಂದಿದರು.
1986 ರಲ್ಲಿ ವಾಣಿಜ್ಯ ವಿಭಾಗ ಆರಂಭಗೊಂಡಾಗ ಇಲ್ಲಿಗೆ ಉಪನ್ಯಾಸಕರಾಗಿ ಸೇರ್ಪಡೆಯಾದ ಇವರು ಸುಧೀರ್ಘ 35 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 2016 ಡಿ.03 ರಿಂದ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತಿದ್ದಾರೆ. ದ.ಕ. ಜಿಲ್ಲಾ ಪಿಯು ಪ್ರಿನ್ಸಿಪಾಲ್ ಆಸೋಸಿಯನ್ ಸುಳ್ಯ ತಾಲೂಕು ಪ್ರತಿನಿಧಿಯಾಗಿರುವ ಇವರು, ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಲೆಕ್ಕಶಾಸ್ತ್ರ ಪ್ರಶ್ನೆಪತ್ರಿಕೆ ಮಾಡಿರುತ್ತಾರೆ. ಹಲವಾರು ತರಭೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಪ್ರಸ್ತುತ ಪುತ್ತೂರಿನ ದರ್ಭೆ ಬಳಿ ವಾಸವಿರುವ ಇವರು ಪುತ್ತೂರು ತಾಲೂಕು ಪಡ್ನೂರಿನ ದಿ. ಭೀಮ ಜೋಯಿಸ ಮತ್ತು ದಿ. ಗೌರಿ ಯವರ ಪುತ್ರಿ.