ಸುಳ್ಯ ಲಯನ್ಸ್ ಕ್ಲಬ್ ಗೆ ಪ್ರಾಂತೀಯ ಅಧ್ಯಕ್ಷ ಲ|ಹೇಮನಾಥ ಶೆಟ್ಟಿ ಅಧಿಕೃತ ಭೇಟಿ

Advt_Headding_Middle

 

ಸುಳ್ಯ ಲಯನ್ಸ್ ಕ್ಲಬ್ ಗೆ ಪ್ರಾಂತೀಯ ಅಧ್ಯಕ್ಷ ಲ| ಹೇಮನಾಥ ಶೆಟ್ಟಿ ಯವರ ಅಧಿಕೃತ ಭೇಟಿಯು ಸೆ.30 ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ಲ| ಆನಂದ ಪೂಜಾರಿ ಯವರು ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಗವರ್ನರ್ ಲ|ಎಂ.ಬಿ.ಸದಾಶಿವ,ಲ| ಜಯಪ್ರಕಾಶ್ ರೈ, ಲ| ಅನಿತಾಹೇಮನಾಥ ಶೆಟ್ಟಿ, ವಲಯಾಧ್ಯಕ್ಷ ಲ| ವೆಂಕಪ್ಪ ಗೌಡ ಕೇನಾಜೆ, ಲ| ಗಂಗಾಧರ ರೈ, ಕೋಶಾಧಿಕಾರಿ ಲ|ರಾಮಚಂದ್ರ ಎಂ, ಕಾರ್ಯದರ್ಶಿ ಲ| ರಮಿತಜಯರಾಮ ಉಪಸ್ಥಿತರಿದ್ದರು.


ಲ| ಆನಂದ ಪೂಜಾರಿ ಸ್ವಾಗತಿಸಿದರು.
ಕಾರ್ಯದರ್ಶಿ ಲ|ರಮಿತಜಯರಾಮ ದೇರಪ್ಪಜ್ಜನಮನೆ ವರದಿ ವಾಚಿಸಿದರು. ಲ| ರಾಧಾಕೃಷ್ಣ ಮಾಣಿಬೆಟ್ಟು ಪ್ರಾಂತೀಯ ಅಧ್ಯಕ್ಷ ರನ್ನು ಪರಿಚಯಿಸಿದರು. ಲ|ತೇಜಸ್ವಿನಿ ಶಿಕ್ಷಕರನ್ನು ಪರಿಚಯಿಸಿದರು. ಲ| ರಾಮಚಂದ್ರ ಎಂ.ವಂದಿಸಿದರು.
ಲ|ರೂಪಾಶ್ರೀ ಜಯಂತ್ ರೈ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿ ಲ|ಜಯರಾಮ ದೇರಪ್ಪಜ್ಜನಮನೆ ಸಹಕರಿಸಿದರು. ಪ್ರಾಂತೀಯ ಮತ್ತು ವಲಯದ ಕ್ಲಬ್ಬಿನ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.

ಈ ಸಂದರ್ಭ 2021-22 ನೇ ಸಾಲಿನ ಜಿಲ್ಲಾ ಮತ್ತು ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಶಿಕ್ಷಕರಾದ ಅಚ್ಚುತ ಅಟ್ಲೂರು, ಕೆಂಚವೀರಪ್ಪ, ವಿಶ್ವನಾಥ ನಡುತೋಟ, ಶ್ರೀಮತಿ ಸುನಂದ, ಶ್ರೀಮತಿ ಶ್ವೇತಾವೇಣುಗೋಪಾಲ್ ರವರನ್ನು ಕ್ಲಬ್ ವತಿಯಿಂದ ಲ| ಹೇಮನಾಥ ಶೆಟ್ಟಿ ಯವರು ಗೌರವಿಸಿ ಸನ್ಮಾನಿಸಿದರು.
ಸುಳ್ಯ ಲಯನ್ಸ್ ಕ್ಲಬ್ಬಿನ ಶಿಕ್ಷಕ ವೃತ್ತಿಯ ಸದಸ್ಯರನ್ನು ಹಾಗೂ ಪ್ರಾಂತೀಯ ವಲಯ ಇತರ ಕ್ಲಬ್ಬಿನ ಶಿಕ್ಷಕ ಸದಸ್ಯ ರನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭ “ಸಿಂಹಾನಂದ ” ಲಯನ್ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಸಂಪಾದಕ ಕೆ.ಆರ್. ಗಂಗಾಧರ ರವರು ಮಾತನಾಡಿ ಸುಳ್ಯ ಲಯನ್ಸ್ ಕ್ಲಬ್ಬಿನ ಇತಿಹಾಸ ದಲ್ಲಿ ಪ್ರಥಮವಾಗಿ ಸಂಚಿಕೆಯು ಸಂಪೂರ್ಣ ಡಿಜಿಟಲ್ ಕಲರ್ ಪ್ರಿಂಟ್ ನಲ್ಲಿ ಮುದ್ರಣಗೊಂಡಿದೆ ಎಂದು ಹೇಳಿದರು. ಈ ಸಂದರ್ಭ ಸಂಪಾದಕ ಮಂಡಳಿಯವರನ್ನು ಉಪಸಂಪಾದಕರನ್ನು ಹಾಗೂ ಲೇಖಕರನ್ನು ಕ್ಲಬ್ ಅಧ್ಯಕ್ಷರು ಸ್ಮರಣಿಕೆ ನೀಡಿ ಅಭಿನಂದಿಸಿದರು.
ಚಿತ್ರ ಕಲಾ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಸೇವಾ ವಿಭಾಗದಲ್ಲಿ ದೇಹದಾನ ಮಾಡಲು ಮುಂದಾದ ಸೀತಾರಾಮ ಗೌಡ ಹಾಗೂ ಅಂಗಾಂಗ ದಾನ ಮಾಡಲು ಮುಂದಾದ ಶ್ರೀಮತಿ ವೇದಾವತಿಚಂದ್ರ ರವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ
ಪ್ರಾಂತೀಯ ಅಧ್ಯಕ್ಷ ಲ |ಹೇಮನಾಥ ಶೆಟ್ಟಿ ಮತ್ತು ಶ್ರೀಮತಿಅನಿತಾಹೇಮನಾಥ ಶೆಟ್ಟಿ ದಂಪತಿಯನ್ನು ಲ|ಆನಂದ ಪೂಜಾರಿಯವರು ಸನ್ಮಾನಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.