ಗುತ್ರಿಗಾರು, ಕಮಿಲ, ಮೊಗ್ರ ಬೂತ್ ಅಧ್ಯಕ್ಷರ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಂದ ನಾಮ ಫಲಕ ಅಳವಡಿಕೆ

Advt_Headding_Middle

 

 

ಗುತ್ರಿಗಾರು ಕಮಿಲ ಮೊಗ್ರ ಬೂತ್ ಅಧ್ಯಕ್ಷ ಕೇಶವ ಕಾಂತಿಲ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಂದ ನಾಮ ಫಲಕ ಅಳವಡಿಕೆ ಕಾರ್ಯಕ್ರಮ ಅ.7 ರಂದು ನಡೆಯಿತು.
ಈ ಸಂದರ್ಭ ಮಾತನಾಡಿದ ನಳಿನ್ ಅವರು ಬಿಜೆಪಿ ಯ ರಾಷ್ಟ್ರೀಯ ಅಧ್ಯಕ್ಷ ಬೂತ್ ಸಮಿತಿ ಮನೆಯ ಅಧ್ಯಕ್ಷ ನ ಮನೆಗೆ ಬರ್ತಾರೆ. ಆದರೆ ಕಾಂಗ್ರೆಸ್ ನ ರಾಜ್ಯಾಧ್ಯಕ್ಷ ಅಧ್ಯಕ್ಷ ಜೈಲಿಗೆ ಮಾತ್ರ ಹೋಗ್ತಾರೆ ಮತ್ತೆ ಬೂತ್ ಗೆ ಹೇಗೆ ಬರ್ತಾರೆ. ಬಿಜೆಪಿ ಪಕ್ಷದಲ್ಲಿ ಪೇಜ್ ಗೆ 6 ಜನ ಪ್ರಮುಖ್ ಇರ್ತಾರೆ, ಆದರೆ ಕಾಂಗ್ರೆಸ್ ನಲ್ಲಿ ಪುಸ್ತಕಕ್ಕೆ ಒಬ್ಬರು ಸಿಗುವುದು ಕಷ್ಟ ಎಂದರು. ನಮ್ಮ ದೇಶ ಪ್ರಪಂಚಕ್ಕೆ ಕೋವಿಡ್ ಕಿಟ್ ಕೊಟ್ಟಿದೆ ಇದು ಸಾದ್ಯವಾಗಿದ್ದು ಭಾರತದಿಂದ ಮಾತ್ರ. ಯಾವ ಜನ ಟೀಕೆ ಮಾಡಿದ್ರಾ ಅವರೆಲ್ಲಾ ಲಸಿಕೆ ತಕೊಂಡ್ರು. ಆದರೆ ಮೋದಿ ದೇಶದ ಎಲ್ಲಾ ಆಸ್ಪತ್ರೆಗೆ ವೆಂಟಿಲೇಟರ್ ಕೊಟ್ಟಿದ್ದಾರೆ , ಈ ಹಿಂದೆ ಯಾವುದೇ ಸರ್ಕಾರ ಕೊಡದಷ್ಟು ಮೋದಿ ಸರ್ಕಾರ ಆರೋಗ್ಯ ವ್ಯವಸ್ಥೆ ಕೊಟ್ಟಿದೆ ಎಂದರು.

ಸುಳ್ಯ ತಾಲೂಕು ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಕಾರ್ಯದರ್ಶಿ ಮುಳಿಯ ಕೇಶವ ಭಟ್, ಮಾಜಿ ಜಿ.ಪಂ ಸದಸ್ಯ ವೆಂಕಟ್ ದಂಬೆಕೋಡಿ, ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ ವಿ ತೀರ್ಥರಾಮ ನಗರ ಪಂಚಾಯತ್ ಅಧ್ಯಕ್ಷ ವಿನಯ ಕಂದಡ್ಕ, ವಿನಯಮುಳುಗಾಡು, , ಸಬೋದ್ ಶೆಟ್ಟಿ ಮೇನಾಲ, ಅಚ್ಚುತ ಗುತ್ತಿಗಾರು, ಕೇಶವ ಕಾಂತಿಲ ವೇದಿಕೆಯಲ್ಲಿದ್ದರು.
ಉಮೇಶ್ ಮಕ್ಕಿ ಪ್ರಸ್ತಾವಿಕವಾಗಿ ಮಾತನಾಡಿದರು. ಲೊಕೇಶ್ ಕಮಿಲ ಸ್ವಾಗತಿಸಿ, ಜಗದೀಶ ಚಿಕ್ಮುಳಿ ವಂದಿಸಿದರು. ಕಿಶೋರ್ ಕುಮಾರ್ ಬೊಮ್ಮದರೆ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.