ಕಿಸೆಯಲ್ಲಿ ದುಡ್ಡಿದ್ದು ಹೋದರೆ ಮಾತ್ರ ನ.ಪಂ.ನಲ್ಲಿ ಕೆಲಸ : ಎಸ್.ಡಿ.ಪಿ.ಐ. ಆರೋಪ

Advt_Headding_Middle

ಅಭಿವೃದ್ಧಿಯಲ್ಲಿ ಆಡಳಿತ ಸಂಪೂರ್ಣ ನಿಷ್ಕ್ರೀಯ : ವಿಪಕ್ಷ ಮೌನ

ನ.ಪಂ.ನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ಹೋರಾಟದ ಎಚ್ಚರಿಕೆ

ಸುಳ್ಯ ನಗರ ಪಂಚಾಯತ್ ಆಡಳಿತ ಸಂಪೂರ್ಣ ನಿಷ್ಕ್ರೀಯವಾಗಿದೆ. ನಗರದ ಅಭಿವೃದ್ಧಿ ನಡೆಯುತ್ತಿಲ್ಲ. ನ.ಪಂ. ನಲ್ಲಿ ಕಿಸೆಯಲ್ಲಿ ದುಡ್ಡಿದ್ದು ಹೋದವನ ಕೆಲಸಗಳು ಮಾತ್ರ ಆಗುತ್ತಿದೆ. ಅಲ್ಲಿ ಭ್ರಷ್ಟಾಚಾರ ನಿಲ್ಲಬೇಕು. ಅದಕ್ಕಾಗಿ ಎಸ್.ಡಿ.ಪಿ.ಐ. ಹೋರಾಟ ನಡೆಸಲಿದೆ ಎಂದು ಎಸ್.ಡಿ.ಪಿ.ಐ. ಸುಳ್ಯ ವಿಧಾನ ಸಭಾ ಕ್ಷೇತ್ರಾಧ್ಯಕ್ಷ ಇಕ್ಬಾಲ್ ಬೆಳ್ಳಾರೆ ಹೇಳಿದರು.

ಇಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, “ ನಗರ ಪಂಚಾಯತ್ ಚುನಾವಣೆ ನಡೆದು ಎರಡೂವರೆ ವರ್ಷ ಕಳೆದಿದೆ. ಅಲ್ಲಿ ಬಿಜೆಪಿ ಆಡಳಿತ ನಡೆಸುವುದು ಒಂದು ವರ್ಷ ಆಗುತ್ತಿದೆ. ನಗರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಆಡಳಿತ ಸಂಪೂರ್ಣ ನಿಷ್ಕ್ರೀಯವಾಗಿದೆ. ಆಡಳಿತ ವೈಫಲ್ಯದೊಂದಿಗೆ ಭ್ರಷ್ಟಾಚಾರ ಎಗ್ಗಿಲ್ಲದೆ ನಡೆಯುತ್ತಿದೆ. ಸುಳ್ಯ ಕ್ಷೇತ್ರಕ್ಕೆ ಒಳ್ಳೆ ಹೆಸರಿದೆ. ಆದರೆ ನಗರ ಆಡಳಿತ ಮಾತ್ರ ಹದಗೆಟ್ಟಿದೆ. ಪಂಚಾಯತ್‌ನಲ್ಲಿ ಬಡವರ ಕೆಲಸ ಆಗುತ್ತಿಲ್ಲ. ಕಿಸೆಯಲ್ಲಿ ಯಾರೂ ದುಡ್ಡು ಇಟ್ಟುಕೊಂಡು ಹೋಗುತ್ತಾನೋ ಅವನ ಕೆಲಸ ಆಗುತ್ತಿದೆ. ಬಡವರು ಹೋಗಿ ಅಧಿಕಾರಿಗಳ ಜತೆಯಲ್ಲಿ ಮಾತನಾಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ಅಲ್ಲಿ ಹೋದರೆ ಯಾರೂ ಮಾತನಾಡಿಸುವವರೇ ಇಲ್ಲ. ನಗರದ ಆಡಳಿತ ಕೆಲಸ ಮಾಡುತ್ತಿಲ್ಲ. ಇದು ವಿರೋಧ ಪಕ್ಷ ದ ಗಮನದಲ್ಲಿದ್ದರೂ ಅವರು ಮೌನವಾಗಿ ಕುಳಿತಿದ್ದಾರೆ. ನ.ಪಂ. ನಲ್ಲಿ ಅಧ್ಯಕ್ಷರು ಸದಸ್ಯನ ಕೆಲಸವೊಂದರ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದರೆ ಸದಸ್ಯ ಅದಕ್ಕೆ ಪ್ರತ್ಯುತ್ತರ ನೀಡಿ ಅವರ ಅಕ್ರಮವನ್ನು ನಾವು ಬಯಲಿಗೆಳೆಯುತ್ತೇವೆ ಎಂದು ಹೇಳಿಕೆ ನೀಡಿ ಅವರ ಬಾಯಿ ಮುಚ್ಚಿಸುತ್ತಿದ್ದಾರೆ. ಇದೆಲ್ಲವನ್ನು ಜನರು ಗಮನಿಸುತ್ತಿದ್ದು ಮುಂದೆ ಆಡಳಿತ ವಿರುದ್ಧ ತಿರುಗಿ ಬೀಳುವ ಸಾಧ್ಯತೆ ಇದೆ ಎಂದು ಹೇಳಿದರು.

ಎಲ್ಲ ಕಡೆಯೂ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಯಬೇಕೆಂಬುದು ಎಸ್.ಡಿ.ಪಿ.ಐ. ಬಯಕೆ. ಆದರೆ ಇಲ್ಲಿ ಹಾಗೆ ಆಗುತ್ತಿಲ್ಲ. ಅಕ್ರಮ ಕಟ್ಟಡ ಕಟ್ಟುತ್ತಿರುವಾಗ ಅದರ ಬಗ್ಗೆ ೫ ಸಲ ಮನವಿ ನೀಡಿದರೂ ನ.ಪಂ. ಕ್ರಮ ಕೈಗೊಳ್ಳುತ್ತಿಲ್ಲ. ಅಧಿಕಾರಿಗಳನ್ನು ಕೇಳಿದರೆ ನಾವು ಪರವಾನಿಗೆ ಕೊಟ್ಟಿಲ್ಲ ಎಂದು ಉತ್ತರ ಹೇಳುತ್ತಾರೆ. ಹೀಗೆ ಹೇಳುವವರಿಗೆ ಪರವಾನಿಗೆ ಪಡೆಯದೇ ಕಟ್ಟಡ ಕಟ್ಟುವವರ ವಿರುದ್ಧ ಕ್ರಮ ಕೈಗೊಳ್ಳಲು ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಇಕ್ಬಾಲ್ ಪ್ರಶ್ನಿಸಿದರು.
ಫಾರಂ ೩ ಯೂ ಕಾನೂನು ಪ್ರಕಾರ ಸಿಗುತ್ತಿಲ್ಲ. ಅದಕ್ಕೂ ದುಡ್ಡು ಕೊಡಬೇಕಾಗುತ್ತದೆ. ಮುಖ್ಯಾಧಿಕಾರಿಗಳಿಂದ ಹಿಡಿದು ಎಲ್ಲರೂ ಭ್ರಷ್ಟರೆ ಎಂದು ಹೇಳಿದ ಅವರು, ಬೀದಿ ಬದಿಯ ವ್ಯಾಪಾರಸ್ಥರನ್ನು ತೆರವು ಮಾಡುವಾಗ ಎಲ್ಲರಿಗೂ ಸಮಾನ ಕಾನೂನು ಪಾಲಿಸಬೇಕಿತ್ತು. ಆದರೆ ನ.ಪಂ.ಗೆ ಯಾರೂ ಫೇವರಿಟ್ ಇದ್ದಾರೊ ಅವರನ್ನು ಎಬ್ಬಿಸದೇ ಬಡವರನ್ನು ಎಬ್ಬಿಸಲಾಗಿದೆ. ಎಬ್ಬಿಸುವ ಮೊದಲು ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕಿತ್ತು ಎಂದು ಹೇಳಿದರು.
ಸರಕಾರದಿಂದ ಬರುವ ೧೫ನೇ ಹಣಕಾಸು ಮಾತ್ರವಲ್ಲದೇ, ನ.ಪಂ. ತೆರಿಗೆ ನಿಧಿಯಿಂದ ಅಭಿವೃದ್ಧಿ ಮಾಡಬಹುದು. ಆದರೆ ನ.ಪಂ. ಯಾವುದೇ ಯೋಜನೆ ರೂಪಿಸುವುದೇ ಇಲ್ಲ ಎಂದು ಇಕ್ಬಾಲ್ ಹೇಳಿದರು.

ಸಮಸ್ಯೆ ಬಗೆ ಹರಿಸಿಲ್ಲ : ಕಲಾಂ
ಎಸ್.ಡಿ.ಪಿ.ಐ. ಮಾಜಿ ಸುಳ್ಯ ವಿಧಾನಸಭಾ ಕ್ಷೇತ್ರಾಧ್ಯಕ್ಷ ಅಬ್ದುಲ್ ಕಲಾಂ ಮಾತನಾಡಿ, “ಗುರುಂಪಿನಲ್ಲಿ ನೀರು ಪೋಲಾಗುವುದನ್ನು ತಡೆಯಬೇಕೆಂದು ನಾವು ಪ್ರತಿಭಟನೆ ನಡೆಸಿದೆವು. ವಾರದೊಳಗೆ ಸಮಸ್ಯೆ ಬಗೆ ಹರಿಸುವ ಭರವಸೆ ಸ್ಥಳಕ್ಕೆ ಬಂದ ಅಧಿಕಾರಿಗಳು ನೀಡಿದರೂ ಇನ್ನೂ ಕೆಲಸ ಮಾಡಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಹೀಗೆ ಮುಂದುವರಿದರೆ ನಾವು ಹೋರಾಟ ನಡೆಸುತ್ತೇವೆ. ಬೆಟ್ಟಂಪಾಡಿಯಲ್ಲಿ ನೀರು ಸೀಮೆ ಎಣ್ಣೆ ವಾಸನೆ ಬರುತ್ತಿದ್ದರೂ ಅದಕ್ಕೆ ವ್ಯವಸ್ಥೆ ಮಾಡಿಲ್ಲ. ನಗರದಲ್ಲಿ ನಿವೇಶನ ರಹಿತರು ನಿವೇಶನಕ್ಕಾಗಿ ಅರ್ಜಿ ನೀಡಿದ್ದರೂ ಅವರಿಗೆ ನಿವೇಶನ ಕೊಡಿಸುವಲ್ಲಿ ಆಡಳಿತ ಮುಂದಾಗುತ್ತಿಲ್ಲ. ಒಳ ಚರಂಡಿ ವ್ಯವಸ್ಥೆಯೂ ಅವ್ಯವಸ್ಥೆಯಾಗಿದೆ. ಇದೆಲ್ಲದರ ವಿರುದ್ಧ ಹಂತ ಹಂತವಾಗಿ ನಮ್ಮ ಹೋರಾಟವಿದೆ ಎಂದು ಹೇಳಿದರು.

ನಗರಾಧ್ಯಕ್ಷ ಅತ್ತಾವುಲ್ಲ ಮಾತನಾಡಿ “ನಗರ ಪಂಚಾಯತ್‌ಗೆ ಬಡವರು ಹೋಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ದುಡ್ಡು ಇದ್ದರೆ ಮಾತ್ರ ಹೋಗಬಹುದೆಂಬ ನಿಯಮ ನಿಲ್ಲಬೇಕು. ಅಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ಸಿಗಬೇಕು ಅದಕ್ಕಾಗಿ ನಮ್ಮದು ಮೊದಲ ಆದ್ಯತೆ. ಉಳಿದಂತೆ ಎಲ್ಲವನ್ನು ಹಂತ ಹಂತವಾಗಿ ನಡೆಸುತ್ತೇವೆ ಎಂದು ಹೇಳಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.