ಮರ್ಕಂಜ : ಫೋನ್ ನೆಟ್ ವರ್ಕ್ ನ ಪತ್ರ ಚಳುವಳಿ ಗೆ ಸ್ಪಂದಿಸಿದ ಪ್ರಧಾನ ಮಂತ್ರಿಗಳ ಕಚೇರಿ

Advt_Headding_Middle

 

ಮರ್ಕಂಜ ಬಿಎಸ್ ಎನ್ ಎಲ್ ಟವರ್ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು

ರೆಂಜಾಳ ಮತ್ತು ಮರ್ಕಂಜ ಟವರ್ ಕಾರ್ಯಾರಂಭದ ಭರವಸೆ

ಮರ್ಕಂಜ ದಲ್ಲಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದ್ದ ದೂರವಾಣಿ ಸಂಪರ್ಕಕ್ಕೆ ಮರ್ಕಂಜ ಗ್ರಾಮ ಪಂಚಾಯತ್ ಸದಸ್ಯರೊಬ್ಬರ ಮುಂದಾಲೋಚನೆಯಿಂದ ಬಹುದಿನದ ಸಮಸ್ಯೆಯೊಂದು ಪರಿಹಾರವಾಗುವ ಭರವಸೆ ಪ್ರಧಾನ ಮಂತ್ರಿಗಳ ಕಚೇರಿಯಿಂದ ದೊರೆತಿರುವ ಬಗ್ಗೆ ವರದಿಯಾಗಿದೆ.

ಮರ್ಕಂಜ ದಲ್ಲಿ ತಲೆದೋರಿರುವ ದೂರವಾಣಿ ಸಂಪರ್ಕ ಸಮಸ್ಯೆ ಯ ಬಗ್ಗೆ ಮರ್ಕಂಜ ಗ್ರಾಮ ಪಂಚಾಯತ್ ಸದಸ್ಯ ಚಿತ್ತರಂಜನ್ ಕೋಡಿಯವರು *ಸೆಂಡ್ ಮೈಲ್ ಟು ಪಿ.ಎಂ.* ಎಂಬ ಪತ್ರ ಚಳುವಳಿ ಮಾಡುವ ಬಗ್ಗೆ ನಿರ್ಧರಿಸಿ ಗ್ರಾಮದಲ್ಲಿ ದೂರವಾಣಿ ಸಂಪರ್ಕವಿಲ್ಲದೇ ಗ್ರಾಮಸ್ಥರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ದೂರು ಅರ್ಜಿ ತಯಾರಿಸಿದ್ದರು. ಇದಕ್ಕೆ ರೆಂಜಾಳ ಶ್ರೀ ಶಾಸ್ತಾವು ಯುವಕ ಮಂಡಲದ ಅಧ್ಯಕ್ಷ ಮನೋಹರ ರೈ ಹೈದಂಗೂರು, ಶಿವರಂಜನ್ ದಾಸರಬೈಲು, ಶಶಿಕಾಂತ ಗುಳಿಗಮೂಲೆ ಹಾಗೂ ಯು.ಮಂಡಲದ ಸದಸ್ಯರು ಜತೆಗೂಡಿ ಪ್ರಧಾನ ಮಂತ್ರಿಗಳ ಕಚೇರಿಗೆ ಪತ್ರ ಇಮೈಲ್ ಮಾಡುವ ವ್ಯವಸ್ಥೆ ಮಾಡಿದರು.‌ ನೂರಾರು ಗ್ರಾಮಸ್ಥರು ವಿದ್ಯಾರ್ಥಿಗಳು ಪತ್ರ ಚಳುವಳಿಯಲ್ಲಿ ಇ ಮೈಲ್ ಮಾಡತೊಡಗಿದರು.
ಇದಕ್ಕೆ ಸ್ಪಂಧಿಸಿದ ಪ್ರಧಾನ ಮಂತ್ರಿಗಳ ಕಚೇರಿ, ಬಿಎಸ್ ಎನ್ ಎಲ್ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿದೆಯಲ್ಲದೇ, ದೂರವಾಣಿ ಸಂಪರ್ಕ ಸಮಸ್ಯೆಯ ಬಗ್ಗೆ ವಿವರ ಕೇಳಿ ಪರಿಹಾರ ಒದಗಿಸುವಂತೆ ಸೂಚಿಸಿದೆ.
ಅದರಂತೆ ಬಿಎಸ್ ಎನ್ ಎಲ್ ಅಧಿಕಾರಿಗಳು ಸೆ.11ರಂದು ಮರ್ಕಂಜಕ್ಕೆ ಭೇಟಿ ನೀಡಿದ್ದಾರೆ.
ಅದಲ್ಲದೇ ಪ್ರಧಾನ‌ ಮಂತ್ರಿಗಳ ಕಚೇರಿಯಿಂದ ಇ ಮೈಲ್ ಮಾಡಿದವರಿಗೆ ಹಿಂಬರಹ ವಾಗಿ ” ಸುಳ್ಯ ಡಿವಿಷನ್ ನ ಗ್ರಾಮೀಣ ಮಾನವರಹಿತ ನಿಲ್ದಾಣವಾಗಿದೆ. ಮತ್ತು ಈ ನಿಲ್ದಾಣದ ಬ್ಯಾಟರಿ ಬ್ಯಾಕ್ಅಪ್ NIL (600AH ಅನ್ನು 10.09.2012 ರಂದು ಸ್ಥಾಪಿಸಲಾಗಿದೆ). ಆದ್ದರಿಂದ ಮೆಸ್ಕಾಂ ವಿದ್ಯುತ್ ವಿಫಲವಾದಾಗಲೆಲ್ಲ ಈ ನಿಲ್ದಾಣದ ವಿನಿಮಯ ಹಾಗೂ ಬಿಟಿಎಸ್ ಕಡಿಮೆಯಾಗುತ್ತದೆ. ಆದಾಗ್ಯೂ ಈ ನಿಲ್ದಾಣಕ್ಕೆ ಡೀಸೆಲ್ ಅನ್ನು ಈಗಾಗಲೇ ಸರಬರಾಜು ಮಾಡಲಾಗಿದೆ ಮತ್ತು ಸುದೀರ್ಘ ವಿದ್ಯುತ್ ವೈಫಲ್ಯದ ಸಮಯದಲ್ಲಿ ಇಂಜಿನ್ ಆಲ್ಟರ್ನೇಟರ್ ಅನ್ನು ಪ್ರಾರಂಭಿಸಲು ಮೊಬೈಲ್ ಇನ್ಫ್ರಾ ನಿರ್ವಹಣೆ ಮಾಡಲು ಸಿಬ್ಬಂದಿಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ಈ ನಿಲ್ದಾಣಕ್ಕೆ ಹೊಸ ಬ್ಯಾಟರಿ ಸೆಟ್ ಅನ್ನು ಶೀಘ್ರದಲ್ಲೇ ಹಂಚಿಕೆ ಮಾಡಲಾಗುವುದು. ಮತ್ತು ರೆಂಜಾಳದಲ್ಲಿ ಪ್ರಸ್ತಾವಿತ ಹೊಸ ಟವರ್‌ಗೆ ಸಂಬಂಧಿಸಿದಂತೆ, ಸಿವಿಲ್ ಕೆಲಸಗಳು ಈಗಾಗಲೇ ಪೂರ್ಣಗೊಂಡಿವೆ ಮತ್ತು ಬಿಎಸ್‌ಎನ್‌ಎಲ್ ನೀತಿಯ ಕಾರಣದಿಂದ ಕಾರ್ಯಾರಂಭ ವಿಳಂಬವಾಗಿದೆ (ಬಂಡವಾಳ ಕೆಲಸಗಳಿಗೆ ನಿಧಿಯನ್ನು ಹಂಚಿಕೆ ಮಾಡಲಾಗಲಿಲ್ಲ). ಈಗಾಗಲೆ ಹೊಸ ಮೆಸ್ಕಾಂ ವಿದ್ಯುತ್ ಪೂರೈಕೆಗಾಗಿ ಠೇವಣಿ ಪಾವತಿಸಲಾಗಿದೆ ಮತ್ತು ಎಲೆಕ್ಟ್ರಿಕಲ್ ಕೆಲಸಗಳು ಮತ್ತು ಬಾಕಿ ಉಳಿದಿರುವ ಕೆಲಸಗಳು ಶೀಘ್ರದಲ್ಲೇ ಪೂರ್ಣಗೊಳ್ಳುತ್ತವೆ ಮತ್ತು ಈ ಹೊಸ ರೆಂಜಾಳ ಬಿಟಿಎಸ್ ಶೀಘ್ರದಲ್ಲೇ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ ಎಂಬ ಹಿಂಬರಹ ಬರತೊಡಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.