ಕಲ್ಲುಗುಂಡಿಯ ಸಂಪತ್ ಕೊಲೆ ಪ್ರಕರಣ : ನಾಲ್ಕನೇ ಆರೋಪಿಗೆ ಜಾಮೀನು ಮಂಜೂರು

Advt_Headding_Middle

ಕಲ್ಲುಗುಂಡಿಯ ಸಂಪತ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಗಳಲ್ಲಿ ನಾಲ್ಕನೇ ಆರೋಪಿಯಾಗಿ ಗುರುತಿಸಿಕೊಂಡಿದ್ದ ಕಾರ್ತಿಕ್ ಎ.ವಿ.ಯವರಿಗೆ ನ್ಯಾಯಾಲಯ ಜಾಮೀನು ಮಂಜೂರು ಗೊಳಿಸಿದೆ.

ಕಲ್ಲುಗುಂಡಿಯ ಸಂಪತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಅವರಲ್ಲಿ ಈಗಾಗಲೇ ಮೂವರಿಗೆ ಜಾಮೀನು ದೊರೆತಿದ್ದರೆ, ಐದು ಮಂದಿ ಜೈಲಿನಲ್ಲಿ ಇದ್ದರು. ಈ ಐದು ಮಂದಿಯಲ್ಲಿ ನಾಲ್ಕನೇ ಆರೋಪಿಯಾಗಿದ್ದ ಕಾರ್ತಿಕ್ ಎ.ವಿ.ಗೆ 5ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಮತ್ತು ಸತ್ರ ನ್ಯಾಯಾಲಯ ಪುತ್ತೂರು ಹೈಕೋರ್ಟ್ ಆದೇಶದಂತೆ ಎರಡು ಜನ ಜಮೀನುದಾರರನ್ನು ಪಡೆದುಕೊಂಡು ಅಕ್ಟೋಬರ್ 13ರಂದು ಆರೋಪಿಗೆ ಜಾಮೀನು ಮಂಜೂರು ಗೊಳಿಸಿದೆ.

ಆರೋಪಿ ಕಾರ್ತಿಕ್ ಎ.ಬಿ. ಯವರ ಪರವಾಗಿ ಬೆಂಗಳೂರಿನ ನ್ಯಾಯವಾದಿಗಳಾದ ರಾಜೇಶ್ ರೈ ಹಾಗೂ ಪುತ್ತೂರಿನ ನ್ಯಾಯವಾದಿ ವಿನಯ್ ಎನ್.ಕೆ. ಸೋಣಂಗೇರಿ ವಾದಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.