ಡಾ. ಮುರಲೀ ಮೋಹನ್ ಚೂಂತಾರುರವರಿಗೆ ಹುಟ್ಟೂರು ಚೊಕ್ಕಾಡಿಯಲ್ಲಿ ಸನ್ಮಾನ ಸನ್ಮಾನದಿಂದ ಹೊಣೆಗಾರಿಕೆ ಹೆಚ್ಚಿದೆ – ಡಾ|| ಚೂಂತಾರು

Advt_Headding_Middle

ನಿಸ್ವಾರ್ಥ ಮತ್ತು ನಿಷ್ಕಾಮ ಸೇವೆಗೆ ಪ್ರತಿಫಲ ಖಂಡಿತವಾಗಿಯೂ ದೊರಕುತ್ತದೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುವ ಸೇವೆಯನ್ನು ಜನರು ಗಮನಿಸುತ್ತಾರೆ ಮತ್ತು ಗುರುತಿಸುತ್ತಾರೆ. ಇಂತಹ ಗುರುತಿಸುವಿಕೆ ಮತ್ತು ಗೌರವಿಸುವಿಕೆಯಿಂದ ಸನ್ಮಾನಿತರ ಸಾಮಾಜಿಕ ಹೊಣೆಗಾರಿಕೆ ಮತ್ತು ಸಾಮಾಜಿಕ ಬದ್ಧತೆ ಇನ್ನಷ್ಟು ಹೆಚ್ಚಾಗುತ್ತದೆ. ಮುಖ್ಯಮಂತ್ರಿಗಳಿಂದ ಚಿನ್ನದ ಪದಕವನ್ನು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಪಡೆದಿರುವದಕ್ಕಿಂತಲೂ ಹೆಚ್ಚಿನ ಸಂತಸ, ಸಾರ್ಥಕತೆ, ಊರಿನ ಜನರಿಂದ ಗುರುತಿಸಿಕೊಂಡಾಗ ಆಗುತ್ತದೆ. ಸನ್ಮಾನವನ್ನು ಅತ್ಯಂತ ವಿನಮ್ರನಾಗಿ, ಗ್ರಾಮದೇವತೆ ಶ್ರೀರಾಮಚಂದ್ರನ ಸನ್ನಿಧಿಯಲ್ಲಿ ಪಡೆದು ಧನ್ಯತಾ ಭಾವದಲ್ಲಿ ಕೃತಾರ್ಥನಾಗಿದ್ದೇನೆ ಎಂದು ದಕ್ಷಿಣಕನ್ನಡ ಜಿಲ್ಲಾ ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟ ಮತ್ತು ಪೌರರಕ್ಷಣಾ ತಂಡದ ಮುಖ್ಯಪಾಲಕರಾದ ಡಾ. ಮುರಲೀಮೋಹನ್ ಚೂಂತಾರು ನುಡಿದರು. ಅವರು ಅ. 10ರಂದು ಚೊಕ್ಕಾಡಿಯ ಶ್ರೀರಾಮ ದೇವಳದ ದೇಸೀ ಭವನದಲ್ಲಿ ಅಮರಮುಡ್ನೂರು ಗ್ರಾಮ ಪಂಚಾಯತ್, ಸುಳ್ಯ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಜೇಸಿಐ ಸುಳ್ಯ ಪಯಸ್ವಿನಿ ಸುಳ್ಯ, ಇದರ ಆಶ್ರಯದಲ್ಲಿ ನಡೆದ ಹುಟ್ಟೂರ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಗೃಹರಕ್ಷಕ ದಳದಲ್ಲಿ ನೀಡಿದ ನಿಷ್ಕಾಮ ಸೇವೆಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದ ಡಾ. ಮುರಲೀ ಮೋಹನ್ ಚೂಂತಾರು ಇವರಿಗೆ ಹುಟ್ಟೂರ ಪೌರ ಸನ್ಮಾನ ಕಾರ್ಯಕ್ರಮ ಇದಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಸುಳ್ಯದ ಗುರುರಾಜ್ ಅಜ್ಜಾವರ ವಹಿಸಿ ಕಾರ್ಯಕ್ರಮ ನಿರೂಪಿದರು. ಸನ್ಮಾನ ಕಾರ್ಯಕ್ರಮ ನೆರವೇರಿಸಿದ ಜೇಸಿಐ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಜೆಸಿಐ ಪಿಪಿಪಿ ಮುರಳೀ ಶ್ಯಾಮ್ ಮಾತನಾಡಿ ಒಬ್ಬ ವೈದ್ಯರಾಗಿ, ವೈದ್ಯ ಸಾಹಿತಿಯಾಗಿ ಸಮಾಜಮುಖಿ ಚಿಂತನೆಗಳನ್ನು ಬೆಳೆಸಿಕೊಂಡು, ರೋಗಿಗಳನ್ನು ಗುಣಪಡಿಸುವುದರ ಜೊತೆಗೆ ಸಮಾಜದ ಸ್ವಾಸ್ಥ್ಯ ವನ್ನು ಕಾಪಾಡುವ ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟರಾಗಿ, ಒಳ್ಳೆಯ ನಾಯಕತ್ವ ಗುಣ ಹೊಂದಿರುವ ಡಾ. ಚೂಂತಾರು ಅವರಿಗೆ ಅರ್ಹವಾಗಿಯೇ ಮುಖ್ಯಮಂತ್ರಿಗಳ ಚಿನ್ನದ ಪದಕ ದೊರಕಿದೆ. ಅವರಿಗೆ ಇನ್ನಷ್ಟು ಹುಮ್ಮಸ್ಸು, ಹುರುಪಿನಿಂದ ಜನ ಸೇವೆ ಮಾಡುವ ಭಾಗ್ಯ ಭಗವಂತ ಕರುಣಿಸಲಿ ಎಂದು ಶುಭ ಹಾರೈಸಿದರು. ವಿಶ್ರಾಂತ ಶಿಕ್ಷಕರಾದ, ಕೆ.ಬಿ.ನಾಯ್ಕ, ಪೊನಡ್ಕ ಅಭಿನಂದನಾ ಮಾತುಗಳನ್ನು ಆಡಿದರು. ಪ್ರಶಾಂತ್ ನೇಣಾರು ಅಭಿನಂದನಾ ಪತ್ರ ವಾಚಿಸಿದರು. ಮುಖ್ಯ ಅತಿಥಿಗಳಾಗಿದ್ದ ಅಮರಮಡ್ನೂರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಪದ್ಮಪ್ರಿಯ ಶುಭ ಹಾರೈಸಿದರು. ಪಂಚಾಯತ್ ಅಭಿವೃಧ್ದಿ ಅಧಿಕಾರಿ ಆಕಾಶ್, ಜಿಸಿಐ ವಲಯ ಸಂಯೋಜಕ ಜೆ ಎಫ್‌ಎಂ ದೇವರಾಜ್ ಕುದ್ಪಾಜೆ, ಜಿಸಿಐ ಕಾರ್ಯಕ್ರಮ ನಿರ್ದೇಶಕರಾದ ಶ್ರೀಮತಿ ತಾರಾ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕರಾದ ಅಮರಪಡ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಜಿಸಿಐ ಪಿಪಿಪಿ ಅಶೋಕ್ ಚೂಂತಾರು ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ ಊರಿನ ಸಾಧಕರನ್ನು ಗುರುತಿಸಿ ಗೌರವಿಸುವುದು ನಮ್ಮ ಊರಿನ ಕರ್ತವ್ಯವಾಗಿರುತ್ತದೆ. ಈ ಗೌರವದಿಂದ ಇತರರಿಗೂ ಸ್ಪೂರ್ತಿ ದೊರೆತು ನಮ್ಮೂರಿನ ಯುವಕ, ಯುವತಿಯರು ಹೆಚ್ಚಿನ ಸಾಧನೆ ಮಾಡುವಂತಾಗಲಿ ಎಂದು ಹಾರೈಸಿದರು. ಇನ್ನೋರ್ವ ಅತಿಥಿ ಆನೆಕಾರ ಗಣಪಯ್ಯನವರು ಮಾತನಾಡಿ ಚೊಕ್ಕಾಡಿಯ ಪುಣ್ಯಭೂಮಿಯಲ್ಲಿ ಹಲವಾರು ಸಾಧಕರು ಮೂಡಿಬಂದಿದ್ದಾರೆ. ಈ ಮಣ್ಣಿನ ಗುಣವೇ ಹಾಗಿದೆ. ಡಾ. ಚೂಂತಾರು ಅವರ ಸಾಧನೆ ಮತ್ತು ಜನಾನುರಾಗಿ ಕೆಲಸಗಳಿಂದಾಗಿ ಪ್ರಶಸ್ತಿ ಅವರಿಗೆ ಒಲಿದು ಬಂದಿದೆ. ಅವರ ಸಾಧನೆ ಇತರರಿಗೆ ಮಾದರಿಯಾಗಲಿ ಎಂದು ಶುಭ ನುಡಿದರು. ಜಿಸಿ ರವಿಕುಮಾರ್ ಅಕ್ಕೋಜಿಪಾಲ್ ವಂದನಾರ್ಪಣೆ ಮಾಡಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.