ಭೂದಾಖಲೆಗಳ ಸಮಸ್ಯೆ ಪರಿಹಾರಕ್ಕೆ ಸರಕಾರ ಪ್ರಯತ್ನ : ಸಚಿವ ಅಂಗಾರ

Advt_Headding_Middle

” ಒಂದು ಸರ್ವೆ ನಂಬರ್ ನಲ್ಲಿ ಹತ್ತಾರು ಜನರಿಗೆ ಭೂಮಾಲಕತ್ವ ಕೊಡಲ್ಪಟ್ಟಿದ್ದಾಗ ಆ ಸರ್ವೆ ನಂಬರ್ ನ ವಿಸ್ತೀರ್ಣ ನಿಗದಿತ ಅಳತೆಗಿಂತ ಹೆಚ್ಚು ಅಥವಾ ಕಡಿಮೆ ಬಂದಾಗ ಅವರಿಗೆ ದಾಖಲೆ ಸಿದ್ಧಗೊಳ್ಳದಿರುವಂತಹ ಸಮಸ್ಯೆ ಇದ್ದು ಅದನ್ನು ನಿವಾರಿಸುವುದಕ್ಕೆ, ಡೀಮ್ಡ್ ಅರಣ್ಯ ಸಮಸ್ಯೆ, ಭಾಗಶ: ಅರಣ್ಯ ಪ್ರದೇಶ ಸಮಸ್ಯೆ ಇದೆಲ್ಲವನ್ನು ಪರಿಹರಿಸಲು ಸರಕಾರ ಸೂಕ್ತ ಕ್ರಮ ಕೈಗೊಳ್ಳುತ್ತದೆ ” ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ ಹೇಳಿದರು.
ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಇಂದು ಅಮರ ಮುಡ್ನೂರು ಗ್ರಾಮದಲ್ಲಿ ಉದ್ಘಾಟನೆಗೊಳಿಸಿ ಅವರು ಮಾತನಾಡಿದರು.
ದ ಕ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ರವರು ಮಾತನಾಡಿ ” ನಾವು ಇಂದು ಸಂಜೆಯವರೆಗೆ ಅಮರಮುಡ್ನೂರು ಗ್ರಾಮದಲ್ಲಿದ್ದು ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಪ್ರಯತ್ನಿಸುತ್ತೇವೆ. ಇಂದು ಪರಿಹಾರವಾಗದ ಸಮಸ್ಯೆಗಳನ್ನು ಅಕ್ಟೋಬರ್ 29 ರಂದು ಇದೇ ಗ್ರಾಮಕ್ಕೆ ಮತ್ತೆ ಬಂದು ಪರಿಹರಿಸುತ್ತೇವೆ ” ಎಂದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.