ಕಲ್ಲಪಳ್ಳಿ ಗಡಿಪ್ರದೇಶದದಲ್ಲಿ “ಕರ್ನಾಟಕಕ್ಕೆ ಸ್ವಾಗತ” ನಾಮಫಲಕ ಮತ್ತೆ ಅಳವಡಿಕೆ

Advt_Headding_Middle

ಕರ್ನಾಟಕ ಕೇರಳ ಗಡಿಭಾಗವಾದ ಕಲ್ಲಪಳ್ಳಿಯ ಬಾಟೋಳಿ ಎಂಬಲ್ಲಿ ಆಲೆಟ್ಟಿ ಗ್ರಾಮ ಪಂಚಾಯತ್ ವತಿಯಿಂದ “ಕರ್ನಾಟಕಕ್ಕೆ ಸ್ವಾಗತ” ಎಂಬ ಬರಹದ ನಾಮಫಲಕವನ್ನು ಅಳವಡಿಸಿ ಅನಾವರಣಗೊಳಿಸಲಾಯಿತು.


ಈ ಹಿಂದೆ ಇದೇ ಸ್ಥಳದಲ್ಲಿ ಅಳವಡಿಸಿದ ನಾಮಫಲಕವನ್ನು
ಕಿಡಿಗೇಡಿಗಳು ಕಿತ್ತುಕೊಂಡು ಹೋಗಿರುವುದಲ್ಲದೆ ಗಡಿಪ್ರದೇಶದಲ್ಲಿರಿಸಿದ ಪೋಲೀಸ್ ಬ್ಯಾರಿಕೇಡ್ ನ್ನು ಹಾನಿಗೊಳಿಸಿರುತ್ತಾರೆ. ಈ ಬಗ್ಗೆ ಪೋಲಿಸ್ ದೂರು ನೀಡಲಾಗಿತ್ತು. ಘಟನೆಯ ಕುರಿತು
ಸುಳ್ಯ ತಹಶೀಲ್ದಾರ್ ಮತ್ತು ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಮತ್ತು ಗ್ರಾಮ ಪಂಚಾಯತಿಯವರು ಭೇಟಿ ನೀಡಿ ಪರಿಶೀಲಿಸಿ ಮತ್ತೆ ನಾಮಫಲಕ ಅಳವಡಿಸುವುದಾಗಿ ಸ್ಥಳೀಯರಲ್ಲಿ ಭರವಸೆ ನೀಡಿದ್ದರು. ಅದರಂತೆ ಆಲೆಟ್ಟಿ ಪಂಚಾಯತ್ ಮುತುವರ್ಜಿ ವಹಿಸಿ ಸ್ವಾಗತ ನಾಮಫಲಕ ಅಳವಡಿಸುವ ಕಾರ್ಯ ಕೈಗೊಂಡಿರುತ್ತಾರೆ. ಸ್ಥಳೀಯ ನಾಗರೀಕರು ಆಲೆಟ್ಟಿ ಪಂಚಾಯತ್ ನಡೆಯನ್ನು ಶ್ಲಾಘಿಸಿರುತ್ತಾರೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.