ಸುಣ್ಣಮೂಲೆ ಬದ್ರಿಯಾ ಜುಮಾ ಮಸೀದಿಯಲ್ಲಿ ಸಂಭ್ರಮದ ಈದ್ ಮೀಲಾದ್ ಆಚರಣೆ

Advt_Headding_Middle
ಕನಕಮಜಲು ಗ್ರಾಮದ ಸುಣ್ಣಮೂಲೆ ಬದ್ರಿಯಾ ಜುಮಾ ಮಸೀದಿಯಲ್ಲಿ ಲೋಕ ಪ್ರವಾದಿ ಮೊಹಮ್ಮದ್ ಪೈಗಂಬರ್ ರವರ ಹುಟ್ಟು ಹಬ್ಬದ ಅಂಗವಾದ ಮೀಲಾದ್ ಹಬ್ಬವನ್ನು ಅ.19ರಂದು ಸಂಭ್ರಮದಿಂದ ಆಚರಿಸಲಾಯಿತು.
 ಮಗ್ರಿಬ್ ನಮಾಝಿನ ಬಳಿಕ ಖತೀಬರಾದ ಸಯ್ಯದ್ ಅಲಿ ಮನ್ನಾನಿ ಮುಂಡೋಳೆರವರ ದುವಾ ಮೂಲಕ ಕಾರ್ಯಕ್ರಮ ಚಾಲನೆ ನೀಡಿದರು.  ಬಳಿಕ  ನೂರುಲ್ ಇಸ್ಲಾಂ ಮದರಸ ಹಾಗೂ ಸಿರಾಜುಲ್ ಇಸ್ಲಾಂ ಮದರಸದ  ವಿದ್ಯಾರ್ಥಿಗಳಿಂದ ಸ್ಪರ್ಧಾತ್ಮಕ ಪ್ರವಾದಿ ಮಹಮ್ಮದ್  ಗೀತೆಗಳು,  ಹಾಡು , ಭಾಷಣ ಸೇರಿದಂತೆ ಆಕರ್ಷಕ ಬುರ್ದಾ ಮಜ್ಲಿಸ್ ಜನರನ್ನು ಮನಸೊರೆಗೊಳಿಸಿತು. 
 
ಕ್ರೀಡಾ ಹಾಗೂ ಇಸ್ಲಾಮಿಕ್ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದ ಹಾಗೂ ವಿಜೇತ  ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ಮೀಲಾದ್ ಸಮಿತಿ ಅಧ್ಯಕ್ಷ ಶಾಕಿರ್ ಕಂಚಿಲ್ಪಾಡಿ, ಪಂಚಾಯತ್ ಸದಸ್ಯ ಇಬ್ರಾಹಿಂ ಕಾಸಿಂ, ಅಡ್ವಕೆಟ್ ಫವಾಝ್ ವಿತರಿಸಿದರು.
 ಈ ಸಂದರ್ಭದಲ್ಲಿ ತಿರುವನಂತಪುರದಲ್ಲಿ ಅರೇಬಿಕ್ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ ಮನ್ನಾನಿ ಬಿರುದುದಾರಿಯಾಗಿ ಆಯ್ಕೆ ಅದ ಖತೀಬರನ್ನು ಹಾಗೂ ಮೀಲಾದ್ ಶ್ರಮದಾನದಲ್ಲಿ ಬಾಗಿಯಾದ ಎಲ್ಲರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
 ಬೆಳಿಗ್ಗೆ ಧ್ವಜಾರೋಹಣ ಕಾರ್ಯಕ್ರಮವನ್ನು ಮದ್ರಸ ಸಮಿತಿ ಅಧ್ಯಕ್ಷ  ಅಬ್ದುಲ್ಲಾ ತೋಟುಂಗೆರೆ  ನೆರವೇರಿಸಿದರು.
 ಮೌಲೂದ್ ಪಾರಾಯಣವು ಖತೀಬರಾದ ಸಯ್ಯದ್ ಅಲಿ ಮನ್ನಾನಿ ನೇತೃತ್ವದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಜಮಾಅತ್ ಸಮಿತಿ ಅಧ್ಯಕ್ಷ ಹಸೈನಇಕ್ಬಾಲ್ಸಿ, . ಕಾರ್ಯದರ್ಶಿ ಇಕ್ಬಾಲ್,  ಅಬ್ದುಲ್ ರಹಿಮಾನ್,  ಹಾಗೂ ಶಿಕ್ಷಕರಾದ ಅಶ್ರಫ್ ಮೌಲವಿ, ಅಬ್ದುಲ್ಲಾ ಫೈಝಿ, ಅಬ್ದುಲ್ ಖಾದರ್ ಮುಸ್ಲಿಯಾರ್ ದೇಲಂಪಾಡಿ, ಸ್ವಾಲಿಹ್ ಹನಿಫಿ, ಹಸನ್ ಮುಸ್ಲಿಯಾರ್ ಹಾಗೂ ಜಮಾಅತ್ ಸಮಿತಿ ಮತ್ತು ಮೀಲಾದ್ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಜಮಾಅತ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.