ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 108 ನೇ ಮಹಾಸಭೆ

Advt_Headding_Middle

428.64 ಕೋಟಿ ರೂ ವ್ಯವಹಾರ: ರೂ.1.09 ಕೋಟಿ ಲಾಭ

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 108 ನೇ ವಾರ್ಷಿಕ ಮಹಾಸಭೆಯು ಅ.20 ರಂದು ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಳ ರವರ ಸಭಾಧ್ಯಕ್ಷತೆಯಲ್ಲಿ ಜರುಗಿತು. ಸಂಘದ ಹಿರಿಯ ಸದಸ್ಯ ಶಿವರಾಮ ಜೋಯಿಸ ದೀಪ ಬೆಳಗಿಸಿ ಉದ್ಘಾಟಿಸಿದರು.


2020-21 ನೇ ಸಾಲಿನಲ್ಲಿ ಸಂಘವು 5681 ಸದಸ್ಯತನ ಹೊಂದಿರುತ್ತದೆ.7.28 ಕೋಟಿ ಪಾಲು ಬಂಡವಾಳ ಸಂಗ್ರಹವಾಗಿರುತ್ತದೆ. ಒಟ್ಟು ರೂ 42.79 ಕೋಟಿ ಠೇವಣಿ ಇರುತ್ತದೆ. ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನಿಂದ ರೂ. 33.05 ಕೋಟಿ ಸಾಲ ಪಡೆದು ಸಂಘದ ಸದಸ್ಯರಿಗೆ ಕೃಷಿ ಹಾಗೂ ಕೃಷಿಯೇತರ ಸಾಲಗಳಾಗಿ ರೂ 72.13 ಕೋಟಿ ಸಾಲ ವಿತರಿಸಿ ಸದಸ್ಯರ ಆರ್ಥಿಕ ಅವಶ್ಯಕತೆಗಳನ್ನು ಪೂರೈಸಿ,ಸಂಘವು ಜಿಲ್ಲೆಯ ಅಗ್ರಮಾನ್ಯ ಸಂಘಗಳ ಸಾಲಿನಲ್ಲಿ ನಿಂತಿದೆ .ವರದಿ ವರ್ಷದಲ್ಲಿ ಶೇ.97.06 ಸಾಲ ವಸೂಲಾತಿ ಆಗಿರುತ್ತದೆ. ಆಡಿಟ್ ವರ್ಗೀಕರಣ ‘ಎ’ ತರಗತಿ ಹೊಂದಿದೆ.ರೂ.91.64 ಕೋಟಿ ದುಡಿಯುವ ಬಂಡವಾಳ ಹೊಂದಿ 3.59 ಕೋಟಿ ವಾರ್ಷಿಕ ವ್ಯಾಪಾರ ಮತ್ತು ರೂ.428.64 ಕೋಟಿ ವ್ಯವಹಾರ ನಡೆಸಿ ರೂ.1,09,33,319.00 ಲಾಭ ಗಳಿಸಿ ಹೊಸ ದಾಖಲೆಯಾಗಿದೆ. ಶೇ.7.5 ಡಿವಿಡೆಂಡ್ ಹಂಚಲು ಶಿಫಾರಸು ಮಾಡುತ್ತ್ತಿದ್ದೇವೆ. ಸಂಘದ ಸದಸ್ಯರ ಅನುಕೂಲವಾಗುವ ಹಲವಾರು ಯೋಜನೆಗಳನ್ನು ,ಸಾಲ ಸೌಲಭ್ಯಗಳನ್ನು ಕೈಗೊಂಡಿರುತ್ತೇವೆ. ಕೃಷಿಕರ ಕೃಷಿ ಅಭಿವೃದ್ಧಿಗೆ ಕೃಷಿ ಮಾಹಿತಿ ಶಿಬಿರ,ಭೂದೇವಿ ಯೋಜನೆಯಡಿಯಲ್ಲಿ ಹಲವು ಕೃಷಿ ಉಪಕರಣಗಳು ಮತ್ತು ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ನೆಲೆಯಲ್ಲಿ ಒದಗಿಸುತ್ತಿದ್ದೇವೆ.ಸಾರ್ವಜನಿಕ ಆರೋಗ್ಯದ ಹಿತದೃಷ್ಥಿಯಿಂದ ಪ್ರಧಾನ ಮಂತ್ರಿ ಭಾರತೀಯ ಜನಜೌಷಧಿ ಕೇಂದ್ರವನ್ನು ಸಂಘದ ವಾಣಿಜ್ಯ ಸಂಕೀರ್ಣದಲ್ಲಿ ತೆರೆಯಲಾಗಿದೆ.ಬೀದಿಗುಡ್ಡೆಯಲ್ಲಿ ೩೯ ಲಕ್ಷ ರೂ.ಅಂದಾಜು ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಎಂದು ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಳ ಹೇಳಿದರು.

ಸನ್ಮಾನ-ಸಹಾಯ ಧನ : 2020-21 ನೇ ಸಾಲಿನಲ್ಲಿ ಅತ್ಯಧಿಕ ವ್ಯವಹಾರ ಮಾಡಿರುವ ಸದಸ್ಯರುಗಳನ್ನು ಗುರುತಿಸಿ ಸನ್ಮಾನಿಸಲಾಯಿತು. ಅತ್ಯಧಿಕ ಅಡಿಕೆ ಮಾರಾಟ ಸುಬ್ರಾಯ ಕೆ. ಎಸ್., ತ್ಯಾಂಪಣ್ಣ ಗೌಡ ನಡುಮನೆ, ಅತ್ಯಧಿಕ ಕೊಕ್ಕ ಮಾರಾಟ ಪದ್ಮನಾಭ ಬೊಳ್ಳಾಜೆ, ಹನೀಫ್ ಪೊಳೆಂಜ, ಅತ್ಯಧಿಕ ರಬ್ಬರ್ ಮಾರಾಟ ಪದ್ಮನಾಭ ಬೊಳ್ಳಾಜೆ ಸತ್ಯದೀಪ್ ಎಂ ಆರ್, ಅತ್ಯಧಿಕ ಗೊಬ್ಬರ ಖರೀದಿ ದಯಾಪ್ರಸಾದ್ ಚೀಮುಳ್ಳು, ಭೀಮ ಶಾಸ್ತ್ರಿ ಗಟ್ಟಿಗಾರು, ಅತ್ಯಧಿಕ ಪೈಪು ಮತ್ತು ಬಿಡಿ ಭಾಗಗಳ ಖರೀದಿ ರವೀಂದ್ರ ರೈ ಹೊಸಮನೆ ಗುತ್ತು, ಯಶವಂತ ಸಿ ಅಡ್ಡತೋಡು, ಅತ್ಯಧಿಕ ಗೃಹಬಳಕೆ ಸಾಮಾಗ್ರಿಗಳ ಖರೀದಿ ದಯಾನಂದ ಕಿನ್ನಿಕುಮೇರಿ, ರಾಧಕೃಷ್ಣ ಎಣ್ಣೆಮಜಲು, ಅತ್ಯುತ್ತಮ ಗ್ರಾಹಕರಾಗಿ ಚಂದ್ರಶೇಖರ ಶಾಸ್ತ್ರಿ ಸಿ, ಶ್ರೀಮತಿ ಕೋಮಲ ಪಿ ನೆಕ್ಕಿಲ, ನಿವೃತ್ತ ಸಿಬ್ಬಂದಿ ಆನಂದ ಗೌಡ,ನಿವೃತ್ತ ಪ್ರೇರಕ ಯಶವಂತ ಎ ಕೆ, ಲೆಕ್ಕಪರಿಶೋಧಕ ದೀಪಕ್ ಅವರನ್ನು ಸನ್ಮಾನಿಸಲಾಯಿತು.

ಅತ್ಯುತ್ತಮ ನವೋದಯ, ಸ್ವ ಸಹಾಯ ಗುಂಪಗಳಾದ ಶ್ರೀ ದೀಪ ಮಹಿಳಾ ನವೋದಯ ಸ್ವ ಸಹಾಯ ಗುಂಪು ಚಿಂಗಾಣಿಗುಡ್ಡೆ, ಶ್ರೀ ನವಶಕ್ತಿ ಪುರುಷ ನವೋದಯ ಸ್ವ ಸಹಾಯ ಗುಂಪು ಕುಂಜತ್ತಾಡಿ, ಶ್ರೀ ಸ್ವಪ್ನ ಮಹಿಳಾ ನವೋದಯ ಸ್ವ ಸಹಾಯ ಗುಂಪು ನಾಗತೀರ್ಥ, ಶ್ರೀ ಮಹಾಲಕ್ಷ್ಮಿ ಮಹಿಳಾ ನವೋದಯ ಸ್ವ ಸಹಾಯ ಗುಂಪು ಕೇನ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕ್ಲಪ್ತ ಸಮಯಕ್ಕೆ ಸಾಲ ಮರುಪಾವತಿಸಿದ ಎಲ್ಲಾ ಸದಸ್ಯರ ಪೈಕಿ ಸ್ಥಳದಲ್ಲೇ ಅದೃಷ್ಟ ಚೀಟಿ ತೆಗೆದು ಅವರಿಗೆ ಬಹುಮಾನ ನೀಡಲಾಯಿತು. ವಿದ್ಯಾನಿಧಿಯೊಂದನ್ನು ಸ್ಥಾಪಿಸಲಾಗಿದ್ದು ಮೊರಾರ್ಜಿ ದೇಸಾಯಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ನಿರೀಕ್ಷಾ ಕೆ,ದೀಕ್ಷಿತ್ ಕೆ , ಪಂಜ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ರಾಹಿಲ್ ಎನ್, ಶ್ವೇತಾ ಬಿ, ಸರಕಾರಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಫಾತಿಮತ್ ಸಜ್ಮೀನ, ಫಾತೀಮತ್ ಹನ್ನತ್ ಸರಕಾರಿ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿಗಳಾದ ತುಳಸಿ,ರೂಪಾ ಇವರನ್ನು ಗೌರವಿಸಲಾಯಿತು.
ಆನಂದ ಗೌಡ ಕಂಬಳ ರವರ ಪ್ರಯೋಜಕತ್ವದಲ್ಲಿ ಸದಸ್ಯರ ಹಾಜರಾತಿಯಲ್ಲಿ ಅದೃಷ್ಟ ಬಹುಮಾನ ಯೋಜನೆ ಮಾಡಲಾಗಿತ್ತು. ೫ ವಿಜೇತರಿಗೆ ಸುಬ್ರಹ್ಮಣ್ಯ ಕುಕ್ಕೆ ಸಿಲ್ಕ್ ಮಳಿಗೆಯ ಸೀರೆ ವಿತರಿಸಿದರು.

ವೇದಿಕೆಯಲ್ಲಿ ಉಪಾಧ್ಯಕ್ಷ ಲಿಗೋಧರ ಆಚಾರ್ಯ, ನಿರ್ದೇಶಕರಾದ ಚಂದ್ರಶೇಖರ ಶಾಸ್ತ್ರಿ, ಶ್ರೀಕೃಷ್ಣ ಭಟ್ ಪಟೋಳಿ , ಕೆ.ರಘುನಾಥ ರೈ ಕೆರೆಕ್ಕೋಡಿ, ವಾಚಣ್ಣ ಕೆರೆಮೂಲೆ, ಗಣೇಶ್ ಪೈ, ಚಿನ್ನಪ್ಪ ಚೊಟ್ಟೆಮಜಲು ಕಿಟ್ಟಣ್ಣ ಪೂಜಾರಿ ಕೆ ,ಮುದರ , ಶ್ರೀಮತಿ ಮೋಹಿನಿ ಬಿ.ಎಲ್ ಬೊಳ್ಮಲೆ, ಶ್ರೀಮತಿ ಹೇಮಾಲತಾ ಚಿದ್ಗಲ್ಲು, ಲೆಕ್ಕಪರಿಶೋಧಕ ದೀಪಕ್ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ್ ಪಲ್ಲೋಡಿ ಉಪಸ್ಥಿತರಿದ್ದರು.
ಕಾರ್‍ಯಕ್ರಮದಲ್ಲಿ ಶ್ರೀಮತಿ ರಮ್ಯಾ ದಿಲೀಪ್ ಬಾಬ್ಲುಬೆಟ್ಟು ಪ್ರಾರ್ಥಿಸಿದರು ಮತ್ತು ರೈತ ಗೀತೆ ಹಾಡಿದರು.ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಳ ಸ್ವಾಗತಿಸಿದರು. ಕಾರ್ಯನಿರ್ವಹಣಾಧಿಕಾರಿ ನೇಮಿರಾಜ್ ಪಲ್ಲೋಡಿ ವರದಿ ಮಂಡಿಸಿದರು.ಚಂದ್ರಶೇಖರ ಇಟ್ಯಡ್ಕ ನಿರೂಪಿಸಿದರು.ಉಪಾಧ್ಯಕ್ಷ ಲಿಗೋಧರ ಆಚಾರ್ಯ ವಂದಿಸಿದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.