ಪೈಲಾರು: ಅರೆಭಾಷೆ ಸಂಸ್ಕೃತಿ ಶಿಬಿರ ಸಮಾರೋಪ ಸಮಾರಂಭ

Advt_Headding_Middle

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಶೌರ್ಯ ಯುವತಿ ಮಂಡಲ ಪೈಲಾರು ಮತ್ತು ಚೊಕ್ಕಾಡಿ ಮುನ್ನೂರು ಒಕ್ಲು ಗೌಡ ಬಾಂಧವರ ಸಮಿತಿ ಇದರ ಸಹಯೋಗದಲ್ಲಿ ನಡೆದ 3ದಿನಗಳ ಕಾಲ ನಡೆದ ಅರೆಭಾಷೆ ಸಂಸ್ಕೃತಿ ಶಿಬಿರದ ಸಮಾರೋಪ ಸಮಾರಂಭವು ಅ.೧೭ ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೈಲಾರಿನಲಿ ನಡೆಯಿತು .ಮುಖ್ಯ ಅತಿಥಿ ಸೀತಾರಾಮ ಕೆವಳ ರವರು ಮಾತನಾಡಿ ಅರೆಭಾಷೆ ಸಂಸ್ಕೃತಿಯ ಆಚರಣೆಯು ಯಾವುದೇ ರೀತಿಯ ಶೋಕಿಗಾಗಿ ನಡೆಯಬಾರದು. ನಮ್ಮ ಸಂಸ್ಕೃತಿಯನ್ನು ಪ್ರೀತಿಸಬೇಕು ನಮ್ಮ ಭಾಷೆಯನ್ನ ಮೆರೆಸಬೇಕು ಎಂದು ಅವರು ಹೇಳಿದರು .
ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಲಕ್ಷ್ಮೀನಾರಾಯಣ ಕಜೆಗದ್ದೆ ಮಾತನಾಡಿ ಯುವಜನತೆಗೆ ಅರೆಭಾಷೆ ಸಂಸ್ಕೃತಿಯ ಅರಿವನ್ನು ಮೂಡಿಸುವ ಕಾರ್ಯವಾಗಿದೆ. .ಮೊದಲ ಬಾರಿಗೆ ಯುವತಿ ಮಂಡಲದವರು ಜವಾಬ್ದಾರಿ ವಹಿಸಿಕೊಂಡಿರುವುದು ಪ್ರಥಮ ವಾಗಿದೆ ಎಂದು ಅವರು ಹೇಳಿದರು.

ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಬೊಳ್ಳೂರು ,ಇದು ಅಮರಮುಡ್ನೂರು ಪಂಚಾಯತ್ ಸದಸ್ಯರಾದ ಕೃಷ್ಣಪ್ರಸಾದ್ ಮಾಡ ಬಾಕಿಲು, ಆನಂದ ಗೌಡ ಪರ್ಲ, ಸದಾಶಿವಗೌಡ ಮೂಕಮಲೆ, ಪುಟ್ಟಣ್ಣ ಗೌಡ ನಾಯರ್ ಕಲ್ಲು ,ಪದ್ಮಾನಂದ ಕೊರತ್ಯಡ್ಕ , ಶಿವಪ್ರಸಾದ್ ಮೋಂಟಡ್ಕ ಅಕಾಡೆಮಿಯ ಸದಸ್ಯರುಗಳಾದ ಜಯಪ್ರಕಾಶ್ ಮೋಂಟಡ್ಕ ಡಾ। ಪುರುಷೋತ್ತಮ ಕೆ ವಿ, ಧನಂಜಯ ಅಗೋಳಿ ಕಜೆ, ಕುಸುಮಾಧರ ಎಟಿ, ಯುವತಿ ಮಂಡಲದ ಅಧ್ಯಕ್ಷೆ ಚರಿಷ್ಮಾ ಕಡಪಳ ಉಪಸ್ಥಿತರಿದ್ದರು .ಕು। ಅನುಜ್ಞಾ ಸಂಕೇಶ ಪ್ರಾರ್ಥಿಸಿದರು ಕು। ಜಯಶ್ರೀ ಕುಳ್ಳಂಪಾಡಿ ಸ್ವಾಗತಿಸಿದರು. ಕು। ಚರಿಷ್ಮಾ ಕಡಪಳ ವಂದಿಸಿದರು .ಪಂ. ಸದಸ್ಯ ಅಶೋಕ್ ಚೂಂತಾರು ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.