ಕಾರಿನೊಳಗೆ ಬೆಂಕಿ ಅವಘಡ

Advt_Headding_Middle

ಅಜ್ಜಾವರ ಗ್ರಾಮದ ಮಾವಿನಪಳ್ಳ ಎಂಬಲ್ಲಿ ಭುವನ್ ಅತ್ಯಾಡಿಯವರು ಚಲಾಯಿಸುತ್ತಿದ್ದ ವ್ಯಾಗನರ್ ಕಾರಿನೊಳಗೆ ಬೆಂಕಿ ಅವಘಡ ಸಂಭವಿಸಿದ ಘಟನೆ ನಿನ್ನೆ ರಾತ್ರಿ ವರದಿಯಾಗಿದೆ.

ಅತ್ಯಾಡಿಯ ಭುವನ್‌ರವರು ರಾತ್ರಿ ಕಾರ್ಯಕ್ರಮವೊಂದಕ್ಕೆ ಹೋಗಲು ಮನೆಯಿಂದ ಹೊರಟು ಮಾವಿನಪಳ್ಳ ರಸ್ತೆಯಲ್ಲಿ ಬರುತ್ತಿದ್ದಾಗ ಕಾರಿನ ಬೋನೆಟ್‌ನಿಂದ ಹೊಗೆ ಬರಲಾರಂಭಿಸಿತು.

ಇದನ್ನು ಗಮನಿಸಿದ ಭುವನ್ ಕಾರನ್ನು ಬದಿಗೆ ಸರಿಸಿದರು. ಆ ವೇಳೆಗೆ ಕಾರ್ ಏಕಾಏಕಿ ಲಾಕ್ ಆಯಿತು. ಎದುರು ಬೆಂಕಿ ಎದ್ದಿತು.

ಭುವನ್‌ರವರ ಪ್ರಯತ್ನದಿಂದ ಕಾರಿನ ಡೋರ್ ತೆರೆದು ಅವರು ಹೊರಗಿಳಿದರು. ಅಲ್ಲೇ ರಸ್ತೆ ಬದಿಯಲ್ಲಿದ್ದ ಮನೆಯವರಿಗೆ ವಿಷಯ ತಿಳಿಸಿದರು.

ಅವರು ಬಂದು ನೀರನ್ನು ಹಾಕಿ ದೊಡ್ಡ ಅನಾಹುತವನ್ನು ತಪ್ಪಿಸಿದರಾದರೂ ಕಾರಿನ ಇಂಜಿನ್ ಸಂಪೂರ್ಣ ಉರಿದಿದೆಯೆಂದು ತಿಳಿದು ಬಂದಿದೆ.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.