ಸಾಲ ನೀಡುವುದಾಗಿ ಹಳ್ಳಿಗರಿಗೆ ದೋಖಾ

Advt_Headding_Middle

 

ಕಾಲನಿಗಳು ಇವರ ಟಾರ್ಗೆಟ್

ಸಾಲ ನೀಡುವುದಾಗಿ ಅಮಾಯಕರಿಂದ 970 ರೂ. ಪಡೆದು ಹಲವರನ್ನು ಮರಳು ಮಾಡಿ ಲಕ್ಷಾಂತರ ಹಣ ಲಪಟಾಯಿಸಿದ ಘಟನೆ ವರದಿಯಾಗಿದೆ.

ಎರಡು ವಾರಗಳ ಹಿಂದೆ ಗುತ್ತಿಗಾರಿನ ಕೆಲ ಕಾಲನಿಗಳಿಗೆ ಶಬರಿ ಫೈನಾನ್ಸ್‌ನವರು ಎಂದು ಹೇಳಿಕೊಂಡು ಕೇರಳದವರೆನ್ನಲಾದ ಇಬ್ವರು ವ್ಯಕ್ತಿಗಳು ಗುತ್ತಿಗಾರಿನ ಆಚಳ್ಳಿ, ಮೆಟ್ಟಿನಡ್ಕ, ಹಾಲೆಮಜಲು, ಚತ್ರಪ್ಪಾಡಿ, ಬಾಕಿಲ ಮುಂತಾದೆಡೆ ಕೆಲ ಮನೆಗಳಿಗೆ ಬಂದು ”ತಾವು ಶಬರಿ ಪೈನಾನ್ಸ್‌ನವರು ನೀವು 970 ರೂ. ನೀಡಿದರೆ ನಾವು ನಿಮಗೆ ಯಾವುದೇ ದಾಖಲೆ ಪಡೆಯದೆ 1 ಲಕ್ಷ ರೂ. ಸಾಲ ನೀಡುವುದಾಗಿ” ತಿಳಿಸಿದರು. ಅದರಂತೆ ಕೆಲ ಮನೆಯಿಂದ ಹಣ ಪಡೆದಿರುವುದಾಗಿ ತಿಳಿದು ಬಂದಿದೆ. ಇದಾಗಿ ಎರಡು ದಿವಸ ಕಳೆದು ಅವರು ನೀಡಿರುವ ನಂಬರ್ ಗೆ ಕಾಲ್ ಮಾಡಿದರೆ ಆ ನಂಬರ್ ಸ್ವಿಚ್ ಆಫ್ ಆಗಿದೆ ಎಂದು ತಿಳಿದು ಬಂದಿದೆ. ಇದೇ ರೀತಿ ಬೇರೆ ಕೆಲ ಗ್ರಾಮಗಳಲ್ಲಿ ಹೀಗೆ ಮೋಸ ಮಾಡಿರುವುದಾಗಿ ತಿಳಿದು ಬಂದಿದೆ.

“ಇತ್ತೀಚೆಗೆ ಇಬ್ಬರು ಕೇರಳದವರು ಬಂದು ನಮ್ಮಲ್ಲಿ ‘ ನಾವು ಶಬರಿ ಫೈನಾನ್ಸ್‌ ನವರು. ನೀವು ಒಂದು ಸಾವಿರ ಹಣ ನೀಡಿದರೆ, ಎರಡು ದಿವಸದೊಳಗೆ ಒಂದು ಲಕ್ಷ ರೂ. ಸಾಲ ನೀಡುವುದಾಗಿ’ ತಿಳಿಸಿದರು. ಅದರಂತೆ ನಾನು ಒಂದು ಸಾವಿರ ಕೊಟ್ಟಿದ್ದೇನೆ. ನಮ್ಮ ಆಚಳ್ಳಿ ಭಾಗದ ಕೆಲ ಮನೆಗಳಿಂದ ಹಣ ಸಂಗ್ರಹಿಸಿದ್ದಾರೆ.  ಎರಡು ದಿವಸ ಕಳೆದು ಅವರು ಬರದಿದ್ದಾಗ ಫೋನ್ ಮಾಡಬೇಕಾದರೆ ಅದು ಸ್ವಿಚ್ಚ್ ಆಫ್ ಬರುತ್ತಿದೆ. ಹೀಗೆ ಗುತ್ತಿಗಾರಿನ ಇತರ ಭಾಗದಲ್ಲೂ  ಹಣ ಪಡೆದು ಮೋಸಮಾಡಿದ್ದಾರೆ”.
– ಗುರುವ ಆಚಳ್ಳಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.