ಸಿಸಿಆರ್ ಟಿ ಬಳಗದ ಗೌರವ ಸಲಹೆಗಾರರಾಗಿ ಸೇರ ಕೋಟಿಯಪ್ಪ ಆಯ್ಕೆ

Advt_Headding_Middle

ಸಿಸಿಆರ್ ಟಿ (ಸಾಂಸ್ಕೃತಿಕ ಸಂಪನ್ಮೂಲ ತರಬೇತಿ ಕೇಂದ್ರ) ಬಳಗ ಸುಳ್ಯ ಇದರ ಗೌರವ ಸಲಹೆಗಾರರಾಗಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಸೇರ ಕೋಟಿಯಪ್ಪ ರವರನ್ನು ಆಯ್ಕೆ ಮಾಡಲಾಗಿದೆ. ಸಾಂಸ್ಕೃತಿಕ ಸಂಪನ್ಮೂಲ ತರಬೇತಿ ಕೇಂದ್ರ, ಭಾರತ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಹಾಗೂ ಸಾಂಸ್ಕೃತಿಕ ಇಲಾಖೆ ನವದೆಹಲಿಯಲ್ಲಿ ನಡೆಸಿದ ವಿಶೇಷ ಸಾಂಸ್ಕೃತಿಕ ಶೈಕ್ಷಣಿಕ ತರಬೇತಿ ಕಾರ್ಯಾಗಾರದಲ್ಲಿ ಸಿಸಿಆರ್ ಟಿ ಸಂಪನ್ಮೂಲ ವ್ಯಕ್ತಿಯಾಗಿ ಇವರು ಕೆಲಸ ನಿರ್ವಹಿಸಿದ್ದಾರೆ.

ಸಿಸಿಆರ್ ಟಿ ಪ್ರಸ್ತುತಪಡಿಸುವ ಭಾರತ ದರ್ಶನ ಎನ್ನುವ ವಿನೂತನ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಪ್ರಾಚೀನ ಚಿತ್ರಕಲೆ, ಇತಿಹಾಸ, ರಾಜಕೀಯ, ಸಂಸ್ಕೃತಿಗೆ ಸಂಬಂಧಿಸಿದ ದೃಕ್ ಶ್ರವಣ ಸ್ಲೈಡ್ ಗಳ ಮೂಲಕ ಶೈಕ್ಷಣಿಕ ವಿಚಾರಗಳನ್ನು ಶಿಕ್ಷಕರಿಗೆ, ಪ್ರಾಥಮಿಕ, ಪ್ರೌಢ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುವ ಸೇರ ಕೋಟಿಯಪ್ಪ ಪೂಜಾರಿ ಯವರು ಲೇಖಕ, ಕವನಗಾರ, ಬರಹಗಾರ ಹಾಗೂ ಸಂಘಟಕರಾಗಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.