ತಾಲೂಕಿನಲ್ಲಿ ಅಡಿಕೆ ಎಲೆ ಹಳದಿ ರೋಗದಿಂದ ಕಂಗೆಟ್ಟಿರುವ ರೈತರು

Advt_Headding_Middle

 

ಬಜೆಟ್‌ನಲ್ಲಿ ಘೋಷಣೆಯಾಗಿರುವ ರೂ.25  ಕೋಟಿ ಹಣ ರೈತರ ಆರ್ಥಿಕ ಪುನಶ್ಚೇತನಕ್ಕೆ ನೀಡಬೇಕು

ಸುಳ್ಯದ ಅಡಿಕೆ ಬೆಳೆ ಹಿತರಕ್ಷಣಾ ವೇದಿಕೆ ಒತ್ತಾಯ

ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪರವರು ಬಜೆಟ್‌ನಲ್ಲಿ ಅಡಿಕೆ ಹಳದಿ ಎಲೆ ರೋಗ ಸಂಶೋಧನೆಗೆಂದು ಘೋಷಿಸಿರುವ ರೂ.೨೫ ಕೋಟಿ ಮೊತ್ತವನ್ನು ರೈತರ ಆರ್ಥಿಕ ಪುನಶ್ಚೇತನಕ್ಕೆ ನೀಡಬೇಕು ಎಂದು ಸುಳ್ಯದ ಅಡಿಕೆ ಬೆಳೆ ಹಿತರಕ್ಷಣಾ ವೇದಿಕೆ ಆಗ್ರಹಿಸಿದೆ.
ಇಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವೇದಿಕೆಯ ಸಂಚಾಲಕ ಶಿವಾನಂದ ಕುಕ್ಕುಂಬಳ, `’ಅಡಿಕೆ ಕೃಷಿಗೆ ಹಳದಿ ಎಲೆ ರೋಗ ಬಂದುದರಿಂದ ಈ ಭಾಗದ ರೈತರು ಸಂಕಷ್ಟಕ್ಕೊಳಗಾಗಿ ರೈತರ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ಈ ಬಗ್ಗೆ ಜನಜಾಗೃತಿಗಾಗಿ ಕಾರ್ಯಕ್ರಮಗಳು ನಡೆದಿದೆ.
ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಬಜೆಟ್‌ನಲ್ಲಿ ಅಡಿಕೆ ಹಳದಿ ಎಲೆ ರೋಗಕ್ಕೆ ೨೫ ಕೋಟಿ ರೂ ಮೀಸಲಿಟ್ಟಿದ್ದರು. ಘೋಷಣೆಯಗಿರುವ ಮೊತ್ತ ಸಂತ್ರಸ್ಥ ರೈತರ ಆರ್ಥಿಕ ಪುನಶ್ಚೇತನಕ್ಕೆ ದೊರೆಯಬಹುದೆಂಬ ನಿರೀಕ್ಷೆಯಿಂದ ನಾವೆಲ್ಲ ರೈತರು ಇದ್ದೆವು. ಬಳಿಕ ಅದು ಸಂಶೋಧನೆಗೆ ಮೀಸಲಿಟ್ಟದ್ದೆಂದು ವರದಿಯಾದಾಗ ಅದು ರೈತರ ಭಾವನೆಗೆ ಪೂರಕವಾಗಿಲ್ಲ ಎಂದು ಗೊತ್ತಾಗಿ ಬೇಸರವಾಗಿತ್ತು. ಆರಂಭದಿಂದಲೇ ನಮ್ಮ ಪ್ರಮುಖ ಬೇಡಿಕೆ ಇದ್ದುದು ಅಡಿಕೆ ಹಳದಿ ಎಲೆ ರೋಗದಿಂದ ಸಂತ್ರಸ್ಥರಾಗಿರುವ ರೈತರಿಗೆ ಆರ್ಥಿಕ ಪುನಶ್ಚೇತನ ಮಾಡಬೇಕೆನ್ನುವುದು. ಆದ್ದರಿಂದ ಈಗ ಸಂಶೋಧನೆಗೆಂದು ಇಟ್ಟಿರುವ ಹಣವನ್ನು ಆರ್ಥಿಕ ಪುನಶ್ಚೇತನಕ್ಕೆ ನೀಡಬೇಕು ಎಂದು ನಾವು ಸರಕಾರ ಮತ್ತು ಅಧಿಕಾರಿಗಳನ್ನು ವಿನಮತಿಸುವುದಾಗಿ ಹೇಳಿದರು.
ಹಾಗಂದ ಮಾತ್ರಕ್ಕೆ ಸಂಶೋಧನೆಗೆ ನಮ್ಮ ವಿರೋಧವಿಲ್ಲ. ಸಂಪೂರ್ಣ ಸಂಶೋಧನೆ ಆಗಿ ಪರಿಹಾರ ದೊರಕಬೇಕು. ಸಂಶೋಧನೆಗೆ ಬಜೆಟ್‌ನಲ್ಲಿ ಕೃಷಿ ಅಭಿವೃದ್ಧಿಗೆ ಇಟ್ಟ ಹಣವನ್ನು ಬಳಸಿಕೊಳ್ಳಬೇಕು ಎಂದು ಹೇಳಿದ ಅವರು ಹಿಂದೆ ಸಿಪಿಸಿಆರ್‌ಐ ನವರು ತುಂಬಾ ಸಲ ಸಂಶೋಧನೆ ನಡೆಸಿದ್ದಾರೆ. ವಿಷಾದ ಎಂದರೆ ಆ ಸಂಶೋಧನೆಯಿಂದ ಪ್ರಾಯೋಗಿಕ ಫಲಿತಾಂಶ ಬಂದಿಲ್ಲ. ಆ ಸಂದರ್ಭದಲ್ಲಿ ಸಿಪಿಸಿಆರ್‌ಐ ಜತೆಗೆ ಇತರೇ ಸಂಶೋಧನೆ ನಡೆಸುವವರನ್ನು ಕರೆಸಿ ಜತೆಯಾಗಿ ಸಂಶೋಧನೆ ನಡೆಸಿ ಪರಿಹಾರ ಕಂಡು ಕೊಳ್ಳುವ ಬಗ್ಗೆಯೂ ನಾವು ಒತ್ತಾಯಿಸಿದೆವು.
ಈಗ ಸಂಶೋಧನೆಗಿಂತ ಮೊದಲು ಸಂತ್ರಸ್ಥರ ರೈತರ ಆರ್ಥಿಕ ಪುನಶ್ಚೇತನದ ಅಗತ್ಯವಿದೆ. ಅದಕ್ಕಾಗಿ ನಮ್ಮ ಈ ಒತ್ತಾಯ. ಈ ನಿಟ್ಟಿನಲ್ಲಿ ಸಂಬಂಧ ಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳನ್ನು ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.
ವೇದಿಕೆಯ ಸದಸ್ಯ ಅನೂಪ್ ಬಿಳಿಮಲೆ ಮಾತನಾಡಿ, ಈಗಾಗಲೇ ಅಡಿಕೆ ಹಳದಿ ಎಲೆ ರೋಗ ಬಂದಿರುವ ತೋಟಗಳ ಸಮೀಕ್ಷೆ ನಡೆದಿದೆ. ಆದರೆ ತಾಲೂಕಿನ ಎಲ್ಲ ಭಾಗದಲ್ಲಿಯೂ ಈ ರೋಗ ಹರಡಿದೆ ಎಂಬ ಮಾಹಿತಿ ಇರುವುದರಿಂದ ಪ್ರತೀ ಗ್ರಾಮವನ್ನು ಮತ್ತೊಮ್ಮೆ ಸಮೀಕ್ಷೆ ನಡೆಸಬೇಕೆಂದು ನಾವು ಅಧಿಕಾರಿಗಳನ್ನು ಒತ್ತಾಯಿಸುತ್ತೇವೆ. ಜತೆಗೆ ಕೇಂದ್ರ ಕೃಷಿ ಸಚಿವರನ್ನೂ ಒತ್ತಾಯಿಸಿ ಅವರಿಗೆ ಮನವಿ ಸಲ್ಲಿಸಲಿzವೆ ಎಂದು ಹೇಳಿದರು.
ವೇದಿಕೆಯ ಸದಸ್ಯರುಗಳಾದ ಸುದರ್ಶನ್ ಪಾತಿಕಲ್ಲು, ಮನುದೇವ್ ಪರಮಲೆ ಇದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.