ಮಡಪ್ಪಾಡಿ; ರಾಜ್ಯ ರೈತ ಸಂಘದ ಗ್ರಾಮ ಘಟಕದ ಪುನರ್ ರಚನೆ ಮತ್ತು ಸಭಾ ಕಾರ್ಯಕ್ರಮ

Advt_Headding_Middle

ಕರ್ನಾಟಕ ರಾಜ್ಯ ರೈತ ಸಂಘ ಮಡಪ್ಪಾಡಿ ಗ್ರಾಮ ಘಟಕದ ಪುನರ್ ರಚನೆ ಹಾಗೂ ಸಭಾ ಕಾರ್ಯಕ್ರಮ ಮಡಪ್ಪಾಡಿ ಯುವಕ ಮಂಡಲ ಸಭಾಂಗಣದಲ್ಲಿ ಅ.20 ರಂದು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ವಸಂತ ಬಳ್ಳಡ್ಕ ರವರು ವಹಿಸಿದ್ದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ ಪುಣಚ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ವೇದಿಕೆಯಲ್ಲಿ ತಾಲೂಕು ಉಪಾಧ್ಯಕ್ಷ ತೀರ್ಥರಾಮ ಉಳುವಾರು, ಜಿಲ್ಲಾಧ್ಯಕ್ಷ ಒಸ್ವಾಲ್ಡ್ ಪ್ರಕಾಶ್ ಫರ್ನಾಂಡಿಸ್ ಹಾಗೂ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮನಾಥ ಶೆಟ್ಟಿ, ಲೋಲಜಾಕ್ಷ ಭೂತಕಲ್ಲು ಸೆಬಾಸ್ಟಿನ್ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಮಡಪ್ಪಾಡಿ ಗ್ರಾಮ ಘಟಕವನ್ನು ಪುನರ್ ರಚಿಸಲಾಯಿತು. ಗೌರವಾಧ್ಯಕ್ಷರಾಗಿ ವಸಂತ ಬಳ್ಳಡ್ಕ, ಅಧ್ಯಕ್ಷರಾಗಿ ಗಂಗಯ್ಯ ಗೌಡ ಪೂಂಬಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಕುಸುಮಾಧರ ಕುತ್ಯಾಳ, ಉಪಾಧ್ಯಕ್ಷರಾಗಿ ಶಿವಪ್ರಸಾದ್ ದೇರ್ ಮಜಲು, ಸಂಘಟನಾ ಕಾರ್ಯದರ್ಶಿಯಾಗಿ ರಾಜಕುಮಾರ್ ಪೂಂಬಾಡಿ, ಕೋಶಾಧಿಕಾರಿಯಾಗಿ ಕುಸುಮಾಧರ ಕಡ್ಯ ರವರನ್ನು ಆಯ್ಕೆ ಮಾಡಲಾಯಿತು. ನೂತನ ಪದಾಧಿಕಾರಿಗಳಿಗೆ ರಾಜ್ಯ ಕಾರ್ಯದರ್ಶಿ ಧ್ವಜ ನೀಡಿ ಅಧಿಕಾರ ಹಸ್ತಾಂತರಿಸಿದರು. ಜಿಲ್ಲಾ ಕಾರ್ಯದರ್ಶಿ ಪ್ರಮಾಣವಚನ ಬೋಧಿಸಿದರು. ತಾಲ್ಲೂಕು ಕಾರ್ಯದರ್ಶಿ ಭರತ್ ಕುಮಾರ್ ಕಾರ್ಯಕ್ರಮ ನಿರೂಪಿಸಿ ನೂತನ ಕಾರ್ಯದರ್ಶಿ ಕುಸುಮಾಧರ ಕುತ್ಯಾಳ ವಂದಿಸಿದರು. ಸಭೆಯಲ್ಲಿ ಮಂಜುನಾಥ ಮಡ್ತಿಲ ಹಾಗೂ ಮಡಪ್ಪಾಡಿ ಗ್ರಾಮದ ಹಲವಾರು ರೈತರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.