ಕೋವಿಡ್ ಲಸಿಕೆ 100 ಕೋಟಿ ಸಾಧನೆ : ಸುಳ್ಯದಲ್ಲಿ ಆರೋಗ್ಯ ಇಲಾಖೆ, ಅಧಿಕಾರಿಗಳಿಗೆ ಅಭಿನಂದನೆ

Advt_Headding_Middle

 

ಮೋದಿಯವರ ನಾಯಕತ್ವದಿಂದ ದೇಶದಲ್ಲಿ ಕೋವಿಡ್ ಯಶಸ್ವಿ ನಿರ್ವಹಣೆ : ಸಚಿವ ಅಂಗಾರ

 

ದೇಶದ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಿಂದಾಗಿ ದೇಶದಲ್ಲಿ ಕೊರೊನಾ ಯಶಸ್ವಿ ನಿರ್ವಹಣೆಯಾಗಿದೆ. ಅದೇ ರೀತಿ ವ್ಯಾಕ್ಸಿನೇಷನ್‌ ಕೂಡಾ 100 ಕೋಟಿ ಗುರಿ ತಲುಪಲಾಗಿದೆ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ ಹೇಳಿದ್ದಾರೆ.

ಕೋವಿಡ್ 19 ರಲ್ಲಿ ಭಾರತ 100 ಕೋಟಿ ಲಸಿಕೆ ವಿತರಿಸಿ ಸಾಧನೆಗೈದ ಸಂಭ್ರಮಕ್ಕಾಗಿ ಮತ್ತು ಇದಕ್ಕೆ ಕಾರಣಕರ್ತರಾದ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಮತ್ತು ಇತರ ಇಲಾಖೆಯ ಅಧಿಕಾರಿಗಳನ್ನು ಸಚಿವರ ನೇತೃತ್ವದಲ್ಲಿ ಇಂದು ತಾಲೂಕು ಆಸ್ಪತ್ರೆಯಲ್ಲಿ ಸನ್ಮಾನಿಸಲಾಯಿತು.
ಬಳಿಕ ಮಾತನಾಡಿದ ಸಚಿವರು, ದೇಶದಲ್ಲಿ 100 ಕೋಟಿ ಗೂ ಮಿಕ್ಕಿ ವ್ಯಾಕ್ಸಿನೇಷನ್‌ ಆಗಿರುವುದು ಅತ್ಯಂತ ಸಂತೋಷವಾಗಿದೆ. ಆರಂಭದಲ್ಲಿ ಇದ್ದ ಎಲ್ಲ ತೊಂದರೆಗಳನ್ನು ಎದುರಿಸಿಕೊಂಡು ಈ ಗುರಿ ಸಾಧಿಸಲಾಗಿದೆ. ಅಪಹಾಸ್ಯ ಮಾಡಿದವರೂ ಕೂಡಾ ಇಂದು‌ ಸಾಧನೆಯನ್ನು ಹೊಗಳುತ್ತಿದ್ದಾರೆ ಎಂದು ಹೇಳಿದರು.

ಸುಳ್ಯ ತಾಲೂಕಿನಲ್ಲಿ ಶೇ.98 ಪ್ರಥಮ ಡೋಸ್ ವ್ಯಾಕ್ಸಿನೇಷನ್‌ ಆಗಿದೆ. ಎರಡನೇ ಡೋಸ್ ಲಸಿಕೆ ಪ್ರಗತಿಯಲ್ಲಿದೆ.‌ ಇಲ್ಲಿಯ ವೈದ್ಯಾಧಿಕಾರಿ ಗಳು, ಸಿಬ್ಬಂದಿಗಳ ಹಾಗೂ ಎಲ್ಲ ಇಲಾಖಾಧಿಕಾರಿಗಳ ಪ್ರಯತ್ನದಿಂದ ಈ ಸಾಧನೆ ಮಾಡಲಾಗಿದೆ. ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಉತ್ತಮ ಸೇವೆಗಳು ದೊರೆಯುತ್ತದೆ.‌ ರೋಗಿಗಳಿಗೆ ಸೇವೆ ನೀಡಲು ಏನು‌ ವ್ಯವಸ್ಥೆ ಬೇಕೋ‌ ಅವೆಲ್ಲವನ್ನೂ ಮಾಡಲಾಗಿದೆ. ತಾಲೂಕು ಆಸ್ಪತ್ರೆಯ ಸೇವೆಯನ್ನು ಜಿಲ್ಲೆಯಲ್ಲಿ‌ ಎಲ್ಲರೂ ಕೊಂಡಾಡುತ್ತಿದ್ದಾರೆ ಎಂದು‌ ಸಚಿವರು ಹೇಳಿದರು.

ಸುಳ್ಯ‌ ನ.ಪಂ. ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಮಾತನಾಡಿ, ಆರಂಭದ ದಿನದಲ್ಲಿ ವ್ಯಾಕ್ಸಿನೇಷನ್‌ ಬಗ್ಗೆ ಜನರಲ್ಲಿ ಇದ್ದ ಭಾವನೆ ಬದಲಾಗಿ ಇಂದು‌ ಭಾರತ ಮಹತ್ತರ ಮೈಲಿಗಲ್ಲು ದಾಟಿದೆ. ದೇಶ ಮನಸ್ಸು‌ ಮಾಡಿದರೆ ಏನನ್ನೂ ಮಾಡಬಹುದೆಂದು ಜಗತ್ತಿಗೇ ತೋರಿಸಿಕೊಟ್ಟಿದೆ.‌ ಎಲ್ಲ ಅಡೆತಡೆಗಳನ್ನು ಮೀರಿದ್ದರಿಂದ ಈ ಸಾಧನೆ ಸಾಧ್ಯವಾಗಿದೆ. ಆರೋಗ್ಯ ಇಲಾಖೆಯ ಎಲ್ಲರ ಪ್ರಯತ್ನ ದ ಫಲವಾಗಿ ಕೋವಿಡ್ ಹೋರಾಟದಲ್ಲಿ ನಾವು ಗೆದ್ದಂತಾಗಿದೆ ಎಂದು ಹೇಳಿದರು.

ತಾಲೂಕು ಆರೋಗ್ಯಾಧಿಕಾರಿ ಡಾ. ನಂದಕುಮಾರ್ ಮಾತನಾಡಿ, ಕೊರೊನಾ ದಿನಗಳನ್ನು ಸವಾಲಾಗಿ‌ ಸ್ವೀಕರಿಸಿದ್ದೇವೆ. ಹಲವು ತೊಂದರೆಗಳನ್ನು ಎದುರಿಸಿದ್ದೇವೆ. ಇಂದು ವ್ಯಾಕ್ಸಿನೇಷನ್‌ ನಲ್ಲಿ 100 ಕೋಟಿ ದಾಖಲೆ ಆಗಿರುವುದು ಖುಷಿ ಕೊಟ್ಟಿದೆ” ಎಂದು ಹೇಳಿದರಲ್ಲದೆ, ಸಹಕಾರ ನೀಡಿದವರನ್ನು ನೆನಪಿಸಿಕೊಂಡರು.

ತಹಶೀಲ್ದಾರ್ ಅನಿತಾಲಕ್ಷ್ಮೀ ಮಾತನಾಡಿ, ಆರಂಭದ ದಿನದಲ್ಲಿ ವ್ಯಾಕ್ಸಿನೇಷನ್‌ ಕುರಿತು ನಾವು ಜಾಗೃತಿ ಮೂಡಿಸಿದ್ದೇವೆ. ಇಂದಿನ ದಿನವನ್ನು ನೋಡಿದರೆ ಕೋವಿಡ್ ಗೆದ್ದಂತೆ ಕಾಣುತ್ತಿದೆ. ವ್ಯಾಕ್ಸಿನೇಷನ್‌ ನ ಸಾಧನೆಯನ್ನು ನೋಡಿದರೆ ಖುಷಿ ಆಗುತ್ತಿದೆ” ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ‌ ಅನಿಸಿಕೆ ವ್ಯಕ್ತಪಡಿಸಿದ ವೈದ್ಯಾಧಿಕಾರಿ ಡಾ. ಹಿಮಕರ ಕೆ.ಎಸ್. “ಕೊರೊನಾ ದಿನದ ಸಂದರ್ಭ ಮತ್ತು ಇವತ್ತಿನ ದಿನವನ್ನು ನೋಡಿದರೆ ಕೊರೊನಾವನ್ನು ಗೆದ್ದಂತಾಗಿದೆ. ಅಂದಿನ ದಿನಗಳನ್ನು ನಾವು ನೆನಪಿಸುತ್ತೇವೆ. ನಮ್ಮ ಕೆಲಸಕ್ಕೆ ಗುರುತಿಸಿ ಇಂದು ಸನ್ಮಾನಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಹೇಳಿದರು.

ನ.ಪಂ. ಉಪಾಧ್ಯಕ್ಷೆ ಸರೋಜಿನಿ ಪೆಲತಡ್ಕ, ತಾ.ಪಂ. ಮ್ಯಾನೇಜರ್ ಹರೀಶ್, ಸಿಡಿಪಿಒ ರಶ್ಮಿ ಅಶೋಕ್ ನೆಕ್ರಾಜೆ ವೇದಿಕೆಯಲ್ಲಿದ್ದರು.

ತಾಲೂಕು ಆಸ್ಪತ್ರೆ ಯ ವೈದ್ಯಾಧಿಕಾರಿ ಡಾ.ಕರುಣಾಕರ ಕೆ.ವಿ.‌ ಸ್ವಾಗತಿಸಿದರು. ಆರೋಗ್ಯ ಮಿತ್ರ ಮುರಳಿ ನಳಿಯಾರು ಕಾರ್ಯಕ್ರಮ ನಿರೂಪಿಸಿದರು.

ಸಮಾರಂಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ನಂದಕುಮಾರ್, ತಹಶೀಲ್ದಾರ್ ಅನಿತಾ ಲಕ್ಷ್ಮೀ, ತಾ.ಪಂ. ಮ್ಯಾನೇಜರ್ ಹರೀಶ್, ಸಿಡಿಪಿಒ ರಶ್ಮಿ ಅಶೋಕ್, ಆಸ್ಪತ್ರೆಯ ವೈದ್ಯಾಧಿಕಾರಿ ಗಳು ಎಲ್ಲ ಸಿಬ್ಬಂದಿಗಳನ್ನು ಸಚಿವರು ಸನ್ಮಾನಿಸಿದರು.

ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ತಾ.ಪಂ.‌ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಬಿಜೆಪಿ‌ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಬಿಜೆಪಿ ಪ್ರಧಾಮ ಕಾರ್ಯದರ್ಶಿಗಳಾದ ಸುಭೋದ್‌ ಶೆಟ್ಟಿ ಮೇನಾಲ, ರಾಕೇಶ್ ರೈ‌ ಕೆಡೆಂಜಿ, ನ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಬುದ್ದ ನಾಯ್ಕ, ಸುಧಾಕರ ಕುರುಂಜಿಭಾಗ್, ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಸುನಿಲ್ ಕೇರ್ಪಳ, ಪುಷ್ಪಾವತಿ ಬಾಳಿಲ, ಗೀತಾ ಶೇಖರ್, ಭಾಗೀರಥಿ ಮುರುಳ್ಯ, ಶಿವಾನಂದ ಕುಕ್ಕುಂಬಳ, ಮಹೇಶ್ ರೈ ಮೇನಾಲ ಮೊದಲಾದವರು ಇದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.