ಆಲೆಟ್ಟಿ : ರಾಜ್ಯ ರೈತ ಸಂಘದ ಗ್ರಾಮ ಘಟಕದ ಪುನರ್ ರಚನೆ

Advt_Headding_Middle

ಅಧ್ಯಕ್ಷ : ಹರಿಶ್ ಕೊಯಿಂಗಾಜೆ, ಕಾರ್ಯ ದರ್ಶಿ : ದಿನೇಶ್ ಕೋಲ್ಚಾರು,‌ ಖಜಾಂಜಿ : ಗೋವಿಂದ ಭಟ್

ಕರ್ನಾಟಕ ರಾಜ್ಯ ರೈತ ಸಂಘದ ಆಲೆಟ್ಟಿ ಗ್ರಾಮ ಘಟಕದ ಪುನರ್ ರಚನೆಯು ಆಲೆಟ್ಟಿ ಸೊಸೈಟಿಯ ವಜ್ರಮಹೋತ್ಸವ ಸಭಾಂಗಣದಲ್ಲಿ ಅ.೨೦ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ತಾಲ್ಲೂಕು ಘಟಕದ ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು ವಹಿಸಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ ಪುಣಚ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಫರ್ನಾಂಡಿಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮನಾಥ ಶೆಟ್ಟಿ, ಹರೀಶ್ ಕೊಯಿಂಗಾಜೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಆಲೆಟ್ಟಿ ಗ್ರಾಮ ಘಟಕವನ್ನು ಪುನರ್ ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಹರೀಶ್ ಕೊಯಿಂಗಾಜೆ, ಪ್ರಧಾನ ಕಾರ್ಯದರ್ಶಿಯಾಗಿ ದಿನೇಶ್ ಕೋಲ್ಚಾರ್, ಉಪಾಧ್ಯಕ್ಷರಾಗಿ ಜನಾರ್ದನಗೌಡ ನಾರ್ಕೋಡು, ಸಂಜೀವ ನಾಯ್ಕ ,ಸಂಘಟನಾ ಕಾರ್ಯದರ್ಶಿ ಕುಸುಮಾಧರ ಭೂತಕಲ್ಲು, ಕೋಶಾಧಿಕಾರಿ ಗೋವಿಂದ ಭಟ್ ರವರನ್ನು ಆಯ್ಕೆ ಮಾಡಲಾಯಿತು. ಓಸ್ವಾಲ್ಡ್ ಪ್ರಕಾಶ್ ಫರ್ನಾಂಡಿಸ್ ನೂತನ ಪದಾಧಿಕಾರಿಗಳಿಗೆ ಧ್ವಜ ನೀಡಿದರು. ಕಾರ್ಯದರ್ಶಿ ಪ್ರಮಾಣ ವಚನ ಬೋಧಿಸಿದರು. ತಾಲೂಕು ಕಾರ್ಯದರ್ಶಿ ಭರತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ದಿನೇಶ್ ಕೋಲ್ಚಾರ್ ವಂದಿಸಿದರು. ತಾಲೂಕು ಉಪಾಧ್ಯಕ್ಷ ತೀರ್ಥರಾಮ ಉಳುವಾರು, ಜಿಲ್ಲಾ ಉಪಾಧ್ಯಕ್ಷ ದಿವಾಕರ ಪೈ‌ ಮಜಿಗುಂಡಿ, ಸೆಬಾಸ್ಟಿನ್ ಮಡಪ್ಪಾಡಿ, ಮಂಜುನಾಥ ಮಡ್ತಿಲ ಹಾಗೂ ಆಲೆಟ್ಟಿ ಗ್ರಾಮದ ರೈತರು ಭಾಗವಹಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.