ದೇವಚಳ್ಳ ಗ್ರಂಥಾಲಯಕ್ಕೆ ನ್ಯಾಯಾಧೀಶರ ಭೇಟಿ

Advt_Headding_Middle

 

 

ತಾಲೂಕು ಕಾನೂನು ಸೇವೆಗಳ ಹಿರಿಯ ಸಿವಿಲ್ ನ್ಯಾಯಾಧೀಶರಾದ‌ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಸೋಮಶೇಖರ ಎ. ಹಾಗು ಸಹಾಯಕ ಸರಕಾರಿ ಅಭಿಯೋಜಕ ಜನಾರ್ಧನ ಬಿ. ಭೇಟಿ ನೀಡಿದರು. ದೇವಚಳ್ಳದಲ್ಲಿ ನಡೆದ ಕಾನೂನು ಮಾಹಿತಿ ಕಾರ್ಯಕ್ರಮದ ಬಳಿಕ ಗ್ರಂಥಾಲಯಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೇ ಉಚಿತ ಕಾನೂನು ಸಲಹೆ ಪುಸ್ತಕ ನೀಡುವುದಾಗಿಯೂ ತಿಳಿಸಿದರು. ಇವರೊಂದಿಗೆ
ವಕೀಲರ ಸಂಘದ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ಎಂ.ಎಂ. ಪ್ಯಾನಲ್ ನ್ಯಾಯವಾದಿಗಳಾದ ಬೆಳ್ಳಪ್ಪ, ನಾರಾಯಣ ಜಟ್ಟಿಪಳ್ಳ, ವಿನಯಕುಮಾರ್ ಮುಳುಗಾಡು, ವಕೀಲರ ಸಂಘದ ಜೊತೆ ಕಾರ್ಯದರ್ಶಿ ಶ್ರೀಮತಿ ನಿರ್ಮಲ, ದೇವಚಳ್ಳ ಗ್ರಾಮದ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಸೀತಮ್ಮರವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಪಿಡಿಓ ಗುರುಪ್ರಸಾದ್, ಗ್ರಾಮ ಪಂಚಾಯತ್ ಸದಸ್ಯರಾದ ರಮೇಶ್ ಪಡ್ಪು, ಭವಾನಿಶಂಕರ್ ಮುಂಡೋಡಿ, ಪ್ರೇಮಲತಾ ದಿನೇಶ ಕೇರ, ಮಾಜಿ ಗ್ರಾಮ ಅಧ್ಯಕ್ಷ ದಿವಾಕರ ಮುಂಡೋಡಿ, ಮಾಜಿ ಸದಸ್ಯ ಕೃಷ್ಣಯ್ಯ ಮೂಲೆತೋಟ, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿರಾಂ ಕಣೆಮರಡ್ಕ ಸ್ವಾಗತಿಸಿ, ಗ್ರಂಥಾಲಯದ ವಿಶೇಷತೆ ಬಗ್ಗೆ ತಿಳಿಸಿದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.