ಸರಕಾರದ ಯೋಜನೆಗಳು ಮನೆ ಮನೆಗೆ ತಲುಪಿಸೋಣ : ಪಕ್ಷ ಸಂಘಟನೆ ಮಾಡೋಣ

Advt_Headding_Middle

 

ಸುಳ್ಯದಲ್ಲಿ‌ ಮಹಿಳಾ ಮೋರ್ಚಾ ಜಿಲ್ಲಾ‌ ಕಾರ್ಯನಿರ್ವಹಣಾ ತಂಡದ ಸಭೆ

ಕೇಂದ್ರ ಹಾಗೂ ‌ರಾಜ್ಯ ಸರಕಾರಗಳು ಇಂದು ಹಲವು ಜನಪರ ಯೋಜನೆ ತರುತ್ತಿದ್ದು‌ ಅದನ್ನು ನಮ್ಮೆಲ್ಲ ಕಾರ್ಯಕರ್ತರು‌ ತಮ್ಮ ವ್ಯಾಪ್ತಿಯಲ್ಲಿ ‌ಮನೆ ಮನೆಗೆ ತಲುಪಿಸುವ ಜತೆಗೆ ಪಕ್ಷವನ್ನು ‌ಬಲಪಡಿಸೋಣ ಎಂದು‌ ಸುಳ್ಯ‌ ಬಿಜೆಪಿ ಮಂಡಲ ಸಮಿತಿ‌ ಅಧ್ಯಕ್ಷ ಹರೀಶ್ ಕಂಜಿಪಿಲಿ‌ ಹೇಳಿದರು.

ಸುಳ್ಯದ ಅಂಬಟೆಡ್ಕದ ಶ್ರೀನಿವಾಸ ಪದ್ಮಾವತಿ ಸಭಾ ಭವನದಲ್ಲಿ ನಡೆದ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಮೋದಿಯವರು ದಿನದ 24 ಗಂಟೆ ನಮಗಾಗಿ ದುಡಿಯುತ್ತಿದ್ದಾರೆ. ನಾವು ಕನಿಷ್ಠ 1 ಗಂಟೆಯಾದರೂ ಪಕ್ಷಕ್ಕಾಗಿ ಮೀಸಲಿಡೋಣ.‌ವಾರಕ್ಕೆ 1 ದಿನ ಪಕ್ಷಕ್ಕಾಗಿ ಇಡೋಣ ಎಂದು ಹೇಳಿದರು.

ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಧನಲಕ್ಷ್ಮೀ ಗಟ್ಟಿ ಪಕ್ಷ ಕೊಟ್ಟಿರುವ ಜವಾಬ್ದಾರಿ ಯನ್ನು ನಾವೆಲ್ಲರೂ ಯಶಸ್ವಿ ಯಾಗಿ ನಿರ್ವಹಿಸೋಣ ಎಂದು‌ ಹೇಳಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಪೂಜಾ ಪೈ, ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯದರ್ಶಿ ಜಯಂತಿ ನಾಯಕ್, ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಪುಷ್ಪಾವತಿ ಬಾಳಿಲ ವೇದಿಕೆಯಲ್ಲಿ ಇದ್ದರು. ಸುಳ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಶುಭದಾ ಎಸ್ ರೈ ಹಾಗೂ ಪದಾಧಿಕಾರಿಗಳು ಇದ್ದರು.


ಗ್ರಾ.ಪಂ.‌ಅಧ್ಯಕ್ಷರಾಗಿ ಆಯ್ಕೆಯಾದ ವಿಜಯ ಅರಂಬೋಡಿ, ಸುಳ್ಯ ಮಹಿಳಾ ಮೋರ್ಚಾ ಕೋಶಾಧಿಕಾರಿ, ಮಂಡೆಕೋಲು ಗ್ರಾ.ಪಂ. ಅಧ್ಯಕ್ಷೆ ವಿನುತಾ ಪಾತಿಕಲ್ಲು ರನ್ನು ಸನ್ಮಾನಿಸಲಾಯಿತು.

ಶ್ರೀಮತಿ ಸೇವಂತಿ ಶ್ರಿಯಾನ್ ಕಾರ್ಯಕ್ರಮ ನಿರೂಪಿಸಿದರು. ಪ್ರಭಾ ಆಚಾರ್ಯ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.