ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ದುಸ್ತರ : ಎಂ ವೆಂಕಪ್ಪ ಗೌಡ

Advt_Headding_Middle

ಪೆಟ್ರೋಲ್, ಡೀಸೆಲ್ ಮತ್ತು ಅಗತ್ಯ ವಸ್ತುಗಳ ಬೆಲೆ ವಿಪರೀತ ಏರಿರುವುದರಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದೆ ” ಎಂದು ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿ ಹಾಗೂ ಸುಳ್ಯದ ಕಾಂಗ್ರೆಸ್ ಧುರೀಣ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ.
ಅವರು ಅ.19 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
” ಬೆಲೆಯೇರಿಕೆಯನ್ನು ನಿಯಂತ್ರಿಸಲು ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ವಿಫಲವಾಗಿವೆ. ಯು.ಪಿ.ಎ. ಸರ್ಕಾರದ ಅವಧಿ ಮತ್ತು ಬಿಜೆಪಿ ಆಡಳಿತದ ಅವಧಿಯ ಬೆಲೆ ಏರಿಕೆಯ ಗ್ರಾಫ್ ನ ವಿಮರ್ಶೆ ಮಾಡಬೇಕು. ಪರಿಸ್ಥಿತಿ ಎಷ್ಟು ಗಂಭೀರ ವಾಗಿದೆ ಎಂಬುದು ಆಗ ತಿಳಿಯುತ್ತದೆ” ಎಂದು ಹೇಳಿದರು.
” 2014 ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವಾಗ ಪೆಟ್ರೋಲ್ ದರ ಲೀಟರ್ ಗೆ 77 ರೂ ಇತ್ತು. ಈಗ 110 ರೂ. ಆಗಿದೆ. ಡೀಸೆಲ್ ದರ 60 ರೂ. ಇದ್ದುದು ಈಗ 101 ರೂ. ಆಗಿದೆ. ಗ್ಯಾಸ್ ದರ ರೂ.419 ಇದ್ದುದು ಈಗ 913 ಕ್ಕೆ ಏರಿದೆ. ಆಗ ಕ್ರೂಡ್ ಆಯಿಲ್ ಗೆ ಬ್ಯಾರಲ್ ಗೆ 108 ರೂ. ಇತ್ತು ಈಗ 80 ರೂ. ಗೆ ಇಳಿದಿದೆ. ಆದರೆ ಇಂಧನ ಬೆಲೆ ಏರುತ್ತಲೇ ಇದೆ ” ಎಂದು ಹೇಳಿದರು.
” ಪೆಟ್ರೋಲ್ ಗೆ ನಮ್ಮ ನೆರೆಯ ದೇಶಗಳಾದ ಶ್ರೀಲಂಕಾದಲ್ಲಿ 63 ರೂ., ಪಾಕಿಸ್ತಾನದಲ್ಲಿ 51 ರೂ. ಭೂತಾನ್ ನಲ್ಲಿ 57 ರೂ. , ಇಂಡೋನೇಷ್ಯಾದಲ್ಲಿನ 44 ರೂ., ಮಲೇಷ್ಯಾದಲ್ಲಿ 37 ರೂ. ಇದೆ. ಆದರೆ ನಮ್ಮ ಭಾರತ ಪ್ರಪಂಚದ ಭೂಪಟದಲ್ಲಿ ಯಾವ ಸ್ಥಾನದಲ್ಲಿದೆ ? ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳು ಕಳೆದ 7 ವರ್ಷಗಳಲ್ಲಿ 3 ಪಟ್ಟು ಏರಿಕೆಯಾಗಿದೆ. ರಸ ಗೊಬ್ಬರದ ಬೆಲೆಯೂ ದುಪ್ಪಟ್ಟಾಗಿದೆ. ಸಿಮೆಂಟು, ಕಬ್ಬಿಣದ ಬೆಲೆಯೂ ಗಗನಕ್ಕೇರಿದೆ ” ಎಂದು ಅವರು ಹೇಳಿದರು.
” ಬಿಜೆಪಿ ಸರಕಾರಗಳ ಈ ಅವಾಂತರವನ್ನು ವಿರೋಧಿಸಿ ಕಾಂಗ್ರೆಸ್ ಬೀದಿಗಿಳಿದು ಹೋರಾಟ ಮಾಡಲಿದೆ. ಎಂದು ಹೇಳಿದರು.

 

ಡಬಲ್ ಇಂಜನ್ ಸರಕಾರ ಇದ್ದರೂ ಹಳದಿ ಎಲೆ ರೋಗಕ್ಕೆ ಪರಿಹಾರ ಇಲ್ಲ

ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರಗಳು ಇದ್ದರೂ ಹಳದಿ ಎಲೆ ರೋಗದಿಂದ ನಾಶವಾದ ಅಡಿಕೆ ತೋಟದ ಮಾಲಕರಿಗೆ ಯಾವುದೇ ಪರಿಹಾರ ನೀಡಲಾಗಿಲ್ಲ. ಬಜೆಟ್ ನಲ್ಲಿ ಘೋಷಿಸಿರುವ 25 ಕೋಟಿ ರೂ.ಗಳನ್ನು ಸಂಶೋಧನೆ ಬಳಸುವುದಾಗಿ ಹೇಳುತ್ತಿದ್ದಾರೆ. ಇಷ್ಟು ವರ್ಷ ಸಂಶೋಧನೆ ನಡೆಸಿ ಮಾಡಿದ್ದಾದರೂ ಏನು ? ಹಳದಿ ಎಲೆ ರೋಗದಿಂದ ಕಷ್ಟಕ್ಕೊಳಗಾಗಿರುವ ಅಡಿಕೆ ಕೃಷಿಕರಿಗೆ ಸೂಕ್ತ ಪರಿಹಾರ ನೀಡಬೇಕು ” ಎಂದು ವೆಂಕಪ್ಪ ಗೌಡರು ಒತ್ತಾಯಿಸಿದರು.
ನ.ಪಂ. ವಿರುದ್ಧ ಎಸ್ ಡಿಪಿಐ ಮಾಡಿರುವ ಆರೋಪ ಸರಿಯಿದೆ.
ಸುಳ್ಯ
ನಗರ ಪಂಚಾಯತ್ ನಲ್ಲಿ ಹಣ ಇದ್ದವರ ಕೆಲಸ ಆಗುತ್ತದೆ. ಬಡವರ ಯಾವುದೇ ಕೆಲಸ ಆಗುವುದಿಲ್ಲ.ಈ ಬಗ್ಗೆ ಎಸ್ ಡಿಪಿಐ ಮಾಡಿರುವ ಆರೋಪ ಸರಿ ಇದೆ. ವಿಪಕ್ಷ ಸದಸ್ಯರಾಗಿ ನಾವು ಕೈಕಟ್ಟಿ ಕೂರುವುದಿಲ್ಲ. ಹೋರಾಡುತ್ತೇವೆ. ಮುಂದಿನ ನ.ಪಂ. ಸಭೆಗೆ ವಿಪಕ್ಷ ಸದಸ್ಯರುಗಳಾದ ನಾವು ಗಾಂಧಿನಗರದಿಂದ ನ.ಪಂ.ವರೆಗೆ ಸೈಕಲಲ್ಲಿ ಹೋಗಿ ಪ್ರತಿಭಟಿಸುತ್ತೇವೆ”ಎಂದು ವೆಂಕಪ್ಪ ಗೌಡರು ಹೇಳಿದರು. 

ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ ಎಸ್ ಗಂಗಾಧರ್ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಎಂ.ಎಚ್., ನ.ಪಂ. ಸದಸ್ಯ ಶರೀಫ್ ಕಂಠಿ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸಿದ್ದೀಕ್ ಕೊಕ್ಕೋ, ಅಲ್ಪಸಂಖ್ಯಾತರ ಕಾಂಗ್ರೆಸ್ ಉಪಾಧ್ಯಕ್ಷ ಹನೀಫ್ ಬೀಜದಕೊಚ್ಚಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.