ಬೆಳ್ಳಾರೆಯ ಮಂಡೇಪು ಕೆಸರುಮಯ ರಸ್ತೆ ಸ್ಥಳಕ್ಕೆ ನ್ಯಾಯಾಧೀಶರ ಭೇಟಿ

Advt_Headding_Middle

ಸಂಜೆಯ ಒಳಗೆ ದುರಸ್ತಿಗೆ ತಾಕೀತು

 

ಬೆಳ್ಳಾರೆಯಿಂದ ಮುಡಾಯಿ ತೋಟ ಕಡೆಗೆ ಹೋಗುವ ರಸ್ತೆ ಮಂಡೇಪು ಎಂಬಲ್ಲಿ ಕೆಸರುಮಯವಾಗಿರುವ ಬಗ್ಗೆ ಪತ್ರಿಕೆಗಳಲ್ಲಿ ಬಂದಿರುವ ವರದಿ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಜಾಗೃತಿಗೆ ಕಾರಣವಾಗಿದೆ. ಪಂಚಾಯತಿ ಅಧಿಕಾರಿಗಳಲ್ಲದೆ ಸುಳ್ಯದ ನ್ಯಾಯಾಧೀಶರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಜೆಯ ಒಳಗೆ ಈ ರಸ್ತೆಯು ಕೆಸರು ನಿವಾರಿಸಬೇಕೆಂದು ತಾಕೀತು ಮಾಡಿದ್ದಾರೆ.


ಬೆಳ್ಳಾರೆಯಿಂದ ಮುಡಾಯಿ ತೋಟದ ಕಡೆಗೆ ಹೋಗುವ ರಸ್ತೆ ಮಂಡೇಪು ಎಂಬಲ್ಲಿ ತೀರಾ ಕೆಸರುಮಯವಾಗಿತ್ತು. ಶಾಲೆ ಆರಂಭವಾಗುವ ಹಿನ್ನೆಲೆಯಲ್ಲಿ ಸ್ಥಳೀಯ ಇಬ್ಬರು ಮಕ್ಕಳು ಅವರ ಪೋಷಕರ ಜತೆ ಸೇರಿ ಈ ರಸ್ತೆಯ ಕೆಸರು ನಿವಾರಿಸುವ ಶ್ರಮದಾನದಲ್ಲಿ ಭಾಗಿಯಾಗಿದ್ದರು. ಮಕ್ಕಳ ಈ ಉತ್ತಮ ಕಾರ್ಯ ಫೋಟೊ ಸಹಿತ ಸುದ್ದಿ ಆನ್ ಲೈನ್ ನ್ಯೂಸ್ ನಲ್ಲಿ ಪ್ರಕಟವಾಗಿ ವೈರಲ್ ಆಯಿತು. ಮತ್ತು ಇಂದಿನ ಪತ್ರಿಕೆಗಳಲ್ಲಿ ವರದಿಯಾಯಿತು.


ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ನಿನ್ನೆ ರಾತ್ರಿಯೇ ಇದನ್ನು ಗಮನಿಸಿ ಸುಳ್ಯ ತಾಪಂ ಇ.ಒ. ರವರಿಗೆ ಸೂಚನೆ ನೀಡಿದ ಮೇರೆಗೆ ತಾಪಂ ಇಒ ಬೆಳ್ಳಾರೆ ಗ್ರಾ ಪಂ ಪಿಡಿಒ ರವರಿಗೆ ಫೋನಾಯಿಸಿ ದುರಸ್ತಿಗೆ ನಿರ್ದೇಶನ ನೀಡಿದ್ದರು. ಅದರಂತೆ ಪಿಡಿಒ ಸ್ಥಳ ಪರಿಶೀಲನೆ ನಡೆಸಿದ್ದರು.

ಸಾಮಾಜಿಕ ಜಾಲತಾಣ ಮತ್ತು ಇಂದಿನ ಪತ್ರಿಕೆಯಲ್ಲಿ ರಸ್ತೆಯನ್ನು ಮಕ್ಕಳು ದುರಸ್ತಿ ಪಡಿಸುತ್ತಿರುವ ವರದಿಯನ್ನು ಗಮನಿಸಿದ ಸುಳ್ಯದ ಹಿರಿಯ ಸಿವಿಲ್ ನ್ಯಾಯಾಲಯ ನ್ಯಾಯಾಧೀಶರಾದ ಸೋಮಶೇಖರ್ ಅವರು, ಎಪಿಪಿ ಮತ್ತು ಬೆಳ್ಳಾರೆ ಎಸ್ಸೈಯವರ ಜತೆಗೆ ಸ್ಥಳಕ್ಕೆ ಭೇಟಿ ನೀಡಿದರು.
ರಸ್ತೆಯ ಪರಿಸ್ಥಿತಿಯನ್ನು ಅವಲೋಕಿಸಿದ ಅವರು ವಿದ್ಯಾರ್ಥಿಗಳ ಕೈಯಲ್ಲಿ ಹಾರೆ ನೀಡಿದುದಕ್ಕಾಗಿ ಪೋಷಕರನ್ನು ಪ್ರಶ್ನಿಸಿದರು. ” ಇದು ನಮ್ಮದೇ ರಸ್ತೆಯಾಗಿರುವುದರಿಂದ ಪಂಚಾಯತಿಗೆ ಮನವಿ ನೀಡಿದ್ದರೂ, ಅವರು ಮಾಡದಿದ್ದ ಕಾರಣದಿಂದಾಗಿ ನಾವು ಶ್ರಮದಾನ ಮಾಡಿದೆವು. ಆ ವೇಳೆ ಮಕ್ಕಳು ಬಂದು ಶ್ರಮದಾನದಲ್ಲಿ ಭಾಗಿಯಾಗಿದ್ದಾರೆ ” ಎಂದು ಪೋಷಕರು ತಿಳಿಸಿದರು ಎನ್ನಲಾಗಿದೆ.
ಬಳಿಕ ಗ್ರಾಮ ಪಂಚಾಯತಿಗೆ ಬಂದ ನ್ಯಾಯಾಧೀಶರು ಪಂಚಾಯತ್ ಅಧ್ಯಕ್ಷರು ಮತ್ತು ಪಿಡಿಒ ರವರನ್ನು ಪ್ರಶ್ನಿಸಿ ಆ ರಸ್ತೆಯನ್ನು ದುರಸ್ತಿಪಡಿಸದ ಬಗ್ಗೆ ಕೇಸು ದಾಖಲಿಸುವುದಾಗಿ ಹೇಳಿದರೆನ್ನಲಾಗಿದೆ. ಬಳಿಕ ಬೆಳ್ಳಾರೆ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿಯೂ ಮಕ್ಕಳೊಡನೆ ಕೆಲಸ ಮಾಡಿಸಿದುದಕ್ಕಾಗಿ ಆಕ್ಷೇಪದ ಮಾತನ್ನು ಹೇಳಿದರೆನ್ನಲಾಗಿದೆ.

ಮಕ್ಕಳಿಗೆ ಹಾರೆ ನೀಡಿ ಕೆಲಸ ಮಾಡಿಸಿದ ಪೋಷಕರ ಮೇಲೆ, ರಸ್ತೆಯ ದುರಸ್ತಿ ಮಾಡಿಸದ ಪಂಚಾಯತ್ ಸದಸ್ಯ, ಅಧ್ಯಕ್ಷ ಮತ್ತು ಪಿಡಿಒ ಮೇಲೆ ಹಾಗೂ ಮಕ್ಕಳ ಬಗ್ಗೆ ನಿಗಾ ವಹಿಸದ ಶಾಲಾ ಶಿಕ್ಷಕರ ಮೇಲೆ ಎಫ್ಐಆರ್ ದಾಖಲಿಸುವಂತೆ ನ್ಯಾಯಾಧೀಶರು ಎಸ್ಸೈ ಯವರಿಗೆ ಸೂಚನೆ ನೀಡಿದರೆಂದೂ, ಆಗ ಎಸ್. ಐ.ಯವರು ” ಕೇಸ್ ಮಾಡೋದು ಬೇಡ. ರಸ್ತೆ ರಿಪೇರಿ ಮಾಡಿಸುವ ಕೆಲಸ ಮಾಡಿಸೋಣ” ಎಂದು ಹೇಳಿದಾಗ ಅದಕ್ಕೆ ಒಪ್ಪಿದ ನ್ಯಾಯಾಧೀಶರು ” ಇಂದು ಸಂಜೆಯೊಳಗೆ ಆ ರಸ್ತೆಯ ಕೆಸರು ನಿವಾರಿಸುವ ಕೆಲಸ ಮಾಡಿ ಅದರ ಫೋಟೋ ಸಹಿತ ವರದಿಯನ್ನು ನಮಗೆ ಸಲ್ಲಿಸಬೇಕು” ಎಂದು ನಿರ್ದೇಶನ ನೀಡಿದರು.
ಒಟ್ಟಿನಲ್ಲಿ ಎರಡನೇ ತರಗತಿಯ ಓದುವ ಇಬ್ಬರು ಮಕ್ಕಳು ಮಾಡಿದ ಶ್ರಮದಾನದ ಕಾರ್ಯ ಇಲಾಖಾಧಿಕಾರಿಗಳನ್ನು ಮತ್ತು ಜನಪ್ರತಿನಿಧಿಗಳನ್ನು ಎಚ್ಚರಿಸುವ ಕೆಲಸ ಮಾಡಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.