ಓದುವುದನ್ನು ಹೆಚ್ಚುಗೊಳಿಸಲು ಸರಕಾರದಿಂದ ‘ಪುಸ್ತಕ ಗೂಡು’ ಯೋಜನೆ

Advt_Headding_Middle

 

ಮಂಡೆಕೋಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಉದ್ಘಾಟನೆ

 

ಜನರಲ್ಲಿ ಓದುವ ಆಸಕ್ತಿಯನ್ನು ಹೆಚ್ಚುಗೊಳಿಸುವುದು‌ ಮತ್ತು ಸರಕಾರದ ಯೋಜನೆಯ ಪುಸ್ತಕಗಳನ್ನು ಓದಿ ಸವಲತ್ತುಗಳನ್ನು ತಿಳಿಸುವುದಕ್ಕಾಗಿ ಪುಸ್ತಕ ಗೂಡು ಯೋಜನೆಯನ್ನು ಸರಕಾರ ಜಾರಿಗೆ ತಂದಿದ್ದು ಮಂಡೆಕೋಲು ಗ್ರಾ.ಪಂ. ನಲ್ಲಿ ಇಂದು ಯೋಜನೆಗೆ ಚಾಲನೆ ನೀಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯತಿ ಸುಳ್ಯ, ಕೇಂದ್ರ ಗ್ರಂಥಾಲಯ ಮಂಗಳೂರು, ಗ್ರಾಮ ಪಂಚಾಯತ್ ಮಂಡೆಕೋಲು ಇದರ ಆಶ್ರಯದಲ್ಲಿ ಮಂಡೆಕೋಲು ಪಂಚಾಯತ್ ನ ಮುಖ್ಯ ರಸ್ತೆಯ‌ ಬದಿಯಲ್ಲಿರುವ ಬಸ್ ನಿಲ್ದಾಣದಲ್ಲಿ ಕಪಾಟು ತಯಾರಿಸಿ ಅದರೊಳಗೆ ಪುಸ್ತಕಗಳನ್ನು ಇಡಲಾಗಿದೆ. ಅದನ್ನು ಜನರೇ ತೆಗೆದು ಓದಿ ಅಲ್ಲೆ ಇಡುವ ಯೋಜನೆ ಇದು

ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷೆ ವಿನುತಾ ಪಾತಿಕಲ್ಲು ವಹಿಸಿದ್ದರು. ತಹಶೀಲ್ದಾರ್ ಅನಿತಾಲಕ್ಷ್ಮೀ ಪುಸ್ತಕ ಗೂಡು ಯೋಜನೆ ಗೆ ಚಾಲನೆ ನೀಡಿದರು. ಇ.ಒ. ಭವಾನಿಶಂಕರ್, ಪುತ್ತೂರು ಬಾಲವನದ ವಿಶೇಷ ಕರ್ತವ್ಯ ಅಧಿಕಾರಿ ಡಾ. ಸುಂದರ ಕೇನಾಜೆ, ಗ್ರಾ.ಪಂ. ಉಪಾಧ್ಯಕ್ಷ ಅನಿಲ್ ತೋಟಪ್ಪಾಡಿ‌, ಮಂಡೆಕೋಲು ಸಹಕಾರಿ ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಪೇರಾಲುಗುತ್ತು ಮುಖ್ಯ ಅತಿಥಿಗಳಾಗಿದ್ದರು.

ಪಂಚಾಯತ್ ಸದಸ್ಯರುಗಳಾದ ಬಾಲಚಂದ್ರ ದೇವರಗುಂಡ, ಪ್ರತಿಮಾ ಭಟ್, ದಿನೇಶ್, ಪ್ರಶಾಂತಿ, ಕುಶಲ, ನಾರಾಯಣ ಕೆದ್ಕಾರ್, ಪಿ.ಡಿ.ಒ. ರಮೇಶ್ ಇದ್ದರು.

ಸಂಧ್ಯಾ ಮಂಡೆಕೋಲು ಪ್ರಾರ್ಥಿಸಿದರು. ಶಿವಪ್ರಸಾದ್ ಉಗ್ರಾಣಿಮನೆ ಕಾರ್ಯಕ್ರಮ ನಿರೂಪಿಸಿದರು. ಬಾಲಚಂದ್ರ ಡಿ.ಸಿ. ವಂದಿಸಿದರು.

ಮಂಡೆಕೋಲು ಗ್ರಾ.ಪಂ. ವತಿಯಿಂದ ಮಂಡೆಕೋಲು ಪೇಟೆಯಲ್ಲಿ ನಿರ್ಮಾಣ ಗೊಂಡಿರುವ ಹಸಿಮೀನು ಮಾರುಕಟ್ಟೆ ಉದ್ಘಾಟನೆಯೂ ನಡೆಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.