ಪರಿಸರ ಸಂಕ್ಷಣೆ ಎಲ್ಲರ ಜವಾಬ್ದಾರಿಯಾಗಲಿ: ಪರಿಸರ ತಜ್ಞ ಡಾ.ಆರ್.ಕೆ.ನಾಯರ್ ಆಶಯ

Advt_Headding_Middle

 

 

 

ಪರಿಸರದಲ್ಲಿ ಉಂಟಾಗಿರುವ ಅಸಮತೋಲನದಿಂದ ಇಂದು ಭೂಮಿ ಮತ್ತು ಜೀವಜಾಲಗಳ ಮೇಲೆ ಗಂಭೀರ ಪರಿಣಾಮ ಉಂಟಾಗುತಿದೆ. ಈಗ ಅಕಾಲಿಕವಾಗಿ ನಿಯಂತ್ರಣವಿಲ್ಲದೆ ಸುರಿಯುವ ಮಳೆಯೇ ಅದಕ್ಕೆ ಉದಾಹರಣೆ.ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳದೇ ಹೋದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ಆದುದರಿಂದ ನಮ್ಮ ಪರಿಸರದಲ್ಲಿ ಮರ,ಗಿಡಗಳನ್ನು ನೆಟ್ಟು ಬೆಳೆಸುವುದು ಒಂದೇ ಇದಕ್ಕೆ ಪರಿಹಾರ ಎಂದು ಪರಿಸರ ತಜ್ಞ, ಗುಜರಾತಿನಲ್ಲಿ ಉದ್ಯಮಿಯಾಗಿರುವ ಡಾ.ಆರ್.ಕೆ.ನಾಯರ್ ಹೇಳಿದ್ದಾರೆ. ಸುಳ್ಯ ಪತ್ರಕರ್ತರ ಸಮುದಾಯ ಭವನ ನಿರ್ಮಾಣ‌ ಸ್ಥಳಕ್ಕೆ ಭೇಟಿ ನೀಡಿದ ಅವರು ಪತ್ರಕರ್ತರ ಜೊತೆ ಮಾತನಾಡಿದರು. ಪರಿಸರ ಉಳಿಸಿ, ಬೆಳೆಸಿ ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಆಗಬೇಕು.ಪ್ರತಿಯೊಂದು ಜೀವಿಗೂ ಈ ಭೂಮಿಯಲ್ಲಿ ಬದುಕುವ ಹಕ್ಕಿದೆ. ಆದುದರಿಂದ ಭೂಮಿಯನ್ನು, ಪರಿಸರವನ್ನು ಮರ, ಗಿಡಗಳನ್ನು ಬೆಳೆಸುವ ಮತ್ತು ಪರಿಸರವನ್ನು ಸಂರಕ್ಷಿಸುವ ಜಾಗೃತಿ, ಮಳೆ ನೀರನ್ನು ಭೂಮಿಗೆ ಇಂಗಿಸುವ ಪ್ರವೃತ್ತಿ ಪ್ರತಿಯೊಬ್ಬರಲ್ಲಿ ಮೂಡಬೇಕು ಎಂದು ಅವರು ಹೇಳಿದರು. ಭೂಮಿ, ಪರಿಸರ, ಮಳೆ, ಜಲ, ನೆಲದ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದೇ ಪರಿಸರ ಅಸಮತೋಲನಕ್ಕೆ ಕಾರಣ. ನಮ್ಮ ಪರಿಸರ ಹಾಳಾಗಲು, ಹವಾಮಾನ ವೈಪರೀತ್ಯಕ್ಕೆ ನಾವೇ ಕಾರಣರು ಎಂದು ಅವರು ಹೇಳಿದರು. ಜಪಾನ್ ನ ಮಿಯಾವಾಕಿ ಯೋಜನೆ ಪ್ರಕಾರ ಗುಜರಾತ್, ಆಂಧ್ರಪ್ರದೇಶ, ರಾಜಸ್ಥಾನ ಸೇರಿದಂತೆ ದೇಶದ 12 ರಾಜ್ಯಗಳಲ್ಲಿ ಲಕ್ಷಾಂತರ ಗಿಡಗಳನ್ನು ಬೆಳೆಸಿ ಅರಣ್ಯ ರೂಪಿಸುವ ಮೂಲಕ ಆರ್ ಕೆ ನಾಯರ್ ಪ್ರಸಿದ್ಧರಾಗಿದ್ದಾರೆ. ಅರಣ್ಯ ಬೆಳೆಸುವಿಕೆ, ಪರಿಸರ ಜಾಗೃತಿ ಮೂಡಿಸುವ ಕಾರ್ಯವನ್ನು ಅವರು ದೇಶದಾದ್ಯಂತ ನಡೆಸುತ್ತಾ ಬಂದಿದ್ದಾರೆ. ಕಡಿಮೆ ಸ್ಥಳದಲ್ಲಿ ಹೆಚ್ಚು ಗಿಡಗಳನ್ನು ಬೆಳೆಸುವ ಮಿಯಾವಾಕಿ ಯೋಜನೆಯನ್ನು ಇವರು ದೇಶದ ವಿವಿಧ ರಾಜ್ಯಗಳಲ್ಲಿ ಅವರು ಜನಪ್ರಿಯಗೊಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.