“ಹೆಜ್ಜೆ ಬದಲಾದಾಗ” ಕ್ಷಯರೋಗ ಜಾಗೃತಿಯ ಕಿರುಚಿತ್ರ ಯೂಟ್ಯೂಬ್ ಪ್ರಸಾರ

Advt_Headding_Middle

 

ಸುಳ್ಯ ಕ್ಷಯ ಚಿಕಿತ್ಸಾ ಘಟಕದ ಸಹಕಾರದಲ್ಲಿ, ಬೆಳ್ಳಾರೆ ಜೆಸಿಐ ನೇತೃತ್ವದಲ್ಲಿ ನಿರ್ಮಿಸಿರುವ ಚಿತ್ರ

ಭಾರತ ಸರಕಾರದ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನೆ ಕಾರ್ಯಕ್ರಮದಡಿಯಲ್ಲಿ ಕ್ಷಯರೋಗದ ಜಾಗೃತಿ ಮೂಡಿಸಲು “ಹೆಜ್ಜೆ ಬದಲಾದಾಗ” ಎನ್ನುವ ಕಿರುಚಿತ್ರವನ್ನು ನ.೨೫ ರಂದು ಸುಳ್ಯ ಸುದ್ದಿ ಸ್ಟುಡಿಯೊದಲ್ಲಿ ಸುದ್ದಿ ಚಾನೆಲ್ ಮೂಖಾಂತರ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಯಿತು.

ಜೆಸಿಐ ಬೆಳ್ಳಾರೆ ನೇತೃತ್ವದಲ್ಲಿ ನಿರ್ಮಿಸಿರುವ ಚಿತ್ರಕ್ಕೆ ಕ್ಷಯ ಚಿಕಿತ್ಸಾ ಘಟಕ ಸುಳ್ಯ ಸಹಕಾರ ನೀಡಿದ್ದು ಅದನ್ನು ಸುಳ್ಯ ತಾಲೂಕು ತಹಶೀಲ್ದಾರ್ ಅನಿತಾಲಕ್ಷ್ಮಿ ಯೂಟ್ಯೂಬ್ ನಲ್ಲಿ ಬಿಡುಗಡೆ ಗೊಳಿಸಿದರು.

ಈ ಸಂದರ್ಭ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ, ತಾಲೂಕು ಆರೋಗ್ಯಾಧಿಕಾರಿ ಡಾ. ನಂದಕುಮಾರ್, ನಗರ ಪಂಚಾಯತ್ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ, ತಾಲ್ಲೂಕು ಮಕ್ಕಳ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿ ರಶ್ಮಿ ಅಶೋಕ್ ನೆಕ್ರಾಜೆ, ಸುದ್ದಿ ಬಿಡುಗಡೆ ವಾರಪತ್ರಿಕೆಯ ಪ್ರಧಾನ ವರದಿಗಾರ ಹರೀಶ್ ಬಂಟ್ವಾಳ್, ಸುಳ್ಯ ಕ್ಷಯ ಚಿಕಿತ್ಸಾ ಘಟಕದ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಲೊಕೇಶ್ ತಂಟೆಪ್ಪಾಡಿ, ಹಿರಿಯ ಪ್ರಯೋಗ ಶಾಲಾ ಮೇಲ್ವಿಚಾರಕ ರಮೇಶ್, ಸುದ್ದಿ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ, ಕಿರು ಚಿತ್ರ ನಿರ್ದೇಶಕ ಕೃಷ್ಣಪ್ಪ ಬಂಬಿಲ, ಬೆಳ್ಳಾರೆ ಜೇಸಿಐ ಅಧ್ಯಕ್ಷ ಪದ್ಮನಾಭ ಕಲಾಸುಮಾ, ಬೆಳ್ಳಾರೆ ಜೇಸಿಸ್ ನ ಪೂರ್ವಾದ್ಯಕ್ಷ ಪ್ರಸಾದ್ ಸೇವಿತ, ಜೂನಿಯರ್ ಜೇಸಿ ಅಧ್ಯಕ್ಷೆ ಚಿರಶ್ರೀ, ಸದಸ್ಯರಾದ ಮಧುಶ್ರೀ, ಜೀವನ್, ಸಾಗರ್ ಮತ್ತಿತರರು ಉಪಸ್ಥಿತರಿದ್ದರು. ಲೋಕೇಶ್ ತಂಟೆಪ್ಪಾಡಿ ಸ್ವಾಗತಿಸಿ,. ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.