ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶಾಶ್ವತ ಚಪ್ಪರಕ್ಕೆ ಗುದ್ದಲಿಪೂಜೆ

Advt_Headding_Middle

 

ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇಗುಲದ ಬಡಗು ಮತ್ತು ತೆಂಕು ಅಂಗಣಕ್ಕೆ ಶಾಶ್ವತ ಚಪ್ಪರ ನಿರ್ಮಾಣಕ್ಕೆ ಗುದ್ದಲಿ ಪೂಜೆ ನ. 23ರಂದು ನೆರವೇರಿತು. ಬಡಗು ಅಂಗಣದ ಗುದ್ದಲಿ ಪೂಜೆಯನ್ನು ನಿವೃತ್ತ ವಲಯ ಅರಣ್ಯಾಧಿಕಾರಿ ಸುರೇಶ್ ಕಾರ್ಜ, ಪುತ್ತೂರು ಮತ್ತು ತೆಂಕು ಅಂಗಣದ ಗುದ್ದಲಿ ಪೂಜೆಯನ್ನು ಪುರುಷೋತ್ತಮ ಆಲ್ಕಬೆ ಇವರ ಪರವಾಗಿ ಗಗನ್ ನೆರವೇರಿಸಿದರು. ಸುಮಾರು 12 ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ನಡೆಯಲಿರುವ ಶಾಶ್ವತ ಚಪ್ಪರ ನಿರ್ಮಾಣದ ಗುದ್ದಲಿ ಪೂಜೆಯಲ್ಲಿ ದೇವಳದ ಅನುವಂಶಿಕ ಆಡಳಿತ ಮೊಕ್ತೇಸರರಾದ ಎಂ.ವಿ. ಶ್ರೀವತ್ಸ ಕಾಂಜಿ, ಧಾರ್ಮಿಕ ಉತ್ಸವ ಸಮಿತಿ ಗೌರವಾಧ್ಯಕ್ಷ ಭಾಸ್ಕರ ಗೌಡ ಪಂಡಿ ಸಂಘಟನಾ ಕಾರ್ಯದರ್ಶಿ ಅರ್ಗುಡಿ ವಿಶ್ವನಾಥ ರೈ, ಬೈಲುವಾರು ಸಮಿತಿ ಅಧ್ಯಕ್ಷ ಪುಟ್ಟಣ್ಣ ದೊಡ್ಮಮನೆ, ಗಣೇಶ್ ಕೊಠಾರಿ, ಹೊನ್ನಪ್ಪ ಎಂರ್ಬಿಲ ಸೇರಿದಂತೆ ಬೈಲುವಾರು ಸಮಿತಿಗಳ ಸಂಚಾಲಕರು, ಸದಸ್ಯರು, ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.