ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ

Advt_Headding_Middle

 

ದ.ಕ.ಕ್ಷೇತ್ರದಿಂದ ಭಾಸ್ಕರ ಗೌಡ ದೇವಸ್ಯ ನಾಮಪತ್ರ ಹಿಂತೆಗೆತ

ಡಾ ಕೆ ವಿ ಚಿದಾನಂದ , ಡಾ.ರೇಣುಕಾಪ್ರಸಾದ್ ಕೆ.ವಿ. ಮತ್ತು ಹೇಮಾನಂದ ಹಲ್ದಡ್ಕ ಅಂತಿಮ ಕಣದಲ್ಲಿ

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೆ ಡಿಸೆಂಬರ್ 12 ರಂದು ಚುನಾವಣೆ ನಡೆಯಲಿದ್ದು, ದ ಕ , ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ನ್ನೊಳಗೊಂಡ ದ.ಕ. ಮತಕ್ಷೇತ್ರದಿಂದ ಮೂವರು ಅಂತಿಮ ಕಣದಲ್ಲುಳಿದಿದ್ದಾರೆ.

ನಾಮಪತ್ರ ಸಲ್ಲಿಸಿದವರಲ್ಲಿ ಭಾಸ್ಕರ ಗೌಡ ದೇವಸ್ಯ ರವರು ನಾಮಪತ್ರ ಹಿಂತೆಗೆದುಕೊಂಡಿದ್ದು, ಸಹೋದರರಾದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ. ಕೆ.ವಿ.ಚಿದಾನಂದ ಹಾಗೂ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಪ್ರಧಾನ ಕಾರ್ಯದರ್ಶಿ ಡಾ.ಕೆ.ವಿ.ರೇಣುಕಾಪ್ರಸಾದ್ ಮತ್ತು ಉಡುಪಿಯಲ್ಲಿ ನೆಲೆಸಿರುವ ಸುಳ್ಯದ ಹೇಮಾನಂದ ಹಲ್ದಡ್ಕ ಅಂತಿಮ ಕಣದಲ್ಲಿ ಉಳಿದಿದ್ದಾರೆ.

*ಸಹೋದರರ ಸವಾಲ್*
ಡಾ. ಕುರುಂಜಿ ವೆಂಕಟ್ರಮಣ ಗೌಡರ ಪುತ್ರರುಗಳಾದ ಡಾ.ಕೆ.ವಿ. ಚಿದಾನಂದ ಮತ್ತು ಡಾ. ರೇಣುಕಾಪ್ರಸಾದ್ ಅವರು ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ನೇರಾನೇರ ಸ್ಪರ್ಧೆಗಿಳಿದಿರುವುದರಿಂದ ಸಹೋದರರ ಸವಾಲ್ ಏರ್ಪಟ್ಟಿದೆ.
ಡಾ. ಚಿದಾನಂದರನ್ನು ಕಣದಿಂದ ಹಿಂತೆಗೆಸುವ ಗೌಡ ಸಮುದಾಯದ ನಾಯಕರ ಪ್ರಯತ್ನ ಯಶಸ್ವಿಯಾಗಿಲ್ಲ. ಆದಿಚುಂಚನಗಿರಿ ಮಠದ ಹಿರಿಯ ಸ್ವಾಮೀಜಿಗಳಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರ ಮೂಲಕ ಹೇಳಿಸಿ ನಾಮಪತ್ರ ಹಿಂತೆಗೆಸಲು ಪ್ರಮುಖರು ಪ್ರಯತ್ನಿಸಿದ್ದರು. ಆದರೆ ಹಿರಿಯ ಸ್ವಾಮೀಜಿಯವರು ಈ ವಿಚಾರದಲ್ಲಿ ಕೈ ಹಾಕಲು ನಿರಾಕರಿಸಿದರೆನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಅಣ್ಣ ಡಾ. ಕೆ ವಿ ಚಿದಾನಂದರು ಮತ್ತು ಡಾ.ಕೆ.ವಿ.ರೇಣುಕಾಪ್ರಸಾದರು ಪರಸ್ಪರ ಎದುರಾಳಿಗಳಾಗಿ ತೊಡೆ ತಟ್ಟುವಂತಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.