ಸಂಪಾಜೆಯ ಅಶ್ವಥ್ ಎಂ. ಎನ್.ರಿಗೆ ಎಂ.ಎಸ್ಸಿ. ಯಲ್ಲಿ ಚಿನ್ನದ ಪದಕ

Advt_Headding_Middle

2019  -20 ನೇ ಸಾಲಿನಲ್ಲಿ ನಡೆದ ಅರಣ್ಯ ಜೀವಶಾಸ್ತ್ರ ಮತ್ತು ವೃಕ್ಷಾಭಿವೃದ್ಧಿ ಶಾಸ್ತ್ರ ಎಂ.ಎಸ್ಸಿ (ಅರಣ್ಯ )ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಅಶ್ವಥ್ ಎಂ.ಎನ್ ಅವರು 1೦.೦೦ಅಂಕಗಳಿಗೆ ಸರಾಸರಿ 9.೦1 ಅತೀ ಹೆಚ್ಚು ಅಂಕ ಗಳಿಸಿ ವಿಶ್ವ ವಿದ್ಯಾನಿಲಯ ಮಟ್ಟದಲ್ಲಿ ಪ್ರಥಮ ರಾಂಕ್ ಪಡೆದಿದ್ದು ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾನಿಲಯ ಶಿವಮೊಗ್ಗದಲ್ಲಿ ನಡೆದ ೬ನೇ ಘಟಿಕೋತ್ಸವದಲ್ಲಿ ವಿ.ವಿ. ಕುಲಾಧಿಪತಿ ಗವರ್ನರ್ ಥಾವರ ಚಂದ್ ಗೆಹಲೋತ್ ಅವರು ಚಿನ್ನದ ಪದಕ, ಪ್ರಶಸ್ತಿ ಪತ್ರ ಪ್ರದಾನ ಮಾಡಿದರು.
ಇವರು 2019-20 ನೇ ಸಾಲಿನ ಭಾರತೀಯ ಕೃಷಿ ಸಂಶೋಧನೆ ಅನುಸಂಧಾನ ನಡೆಸಿದ ಅಖಿಲ ಭಾರತೀಯ ಪ್ರವೇಶ ಪರೀಕ್ಷೆಯಲ್ಲಿ ರಾಂಕ್ ಗಳಿಸಿರುತ್ತಾರೆ. ಅಲ್ಲದೇ 2020 ಆಗಸ್ಟ್ ತಿಂಗಳಲ್ಲಿ ನಡೆದ ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿ ನಡೆಸಿದ  ICAR -NET ಯಲ್ಲಿ ಉತ್ತೀರ್ಣಗೊಂಡಿರುತ್ತಾರೆ.
ಇವರು ಪ್ರಾಥಮಿಕ ಶಿಕ್ಷಣವನ್ನು ಸ.ಹಿ.ಪ್ರಾ. ಶಾಲೆ ಸಂಪಾಜೆ, ಪ್ರೌಢ ಶಿಕ್ಷಣವನ್ನು ಸಂಯುಕ್ತ ಪ.ಪೂ ಕಾಲೇಜು ಸಂಪಾಜೆ, ಪಿಯುಸಿ ವ್ಯಾಸಂಗವನ್ನು ಎನ್ನೆoಪಿಯುಸಿ ಆರಂತೋಡು ಇಲ್ಲಿ ಪೂರೈಸಿದ್ದು ಬಿ.ಎಸ್ಸಿ (ಅರಣ್ಯ )&ಎಂ.ಎಸ್ಸಿ (ಅರಣ್ಯ )ಪದವಿಯನ್ನು ಕೃಷಿ ಮತ್ತು ತೋಟಗಾರಿಕೆ ವಿ. ವಿ. ಶಿವಮೊಗ್ಗದ ಅಧೀನಕ್ಕೆ ಒಳಪಟ್ಟ ಅರಣ್ಯ ಮಹಾವಿದ್ಯಾಲಯ ಪೊನ್ನಂಪೇಟೆಯಲ್ಲಿ ಪಡೆದಿದ್ದಾರೆ. ಪ್ರಸ್ತುತ ಕೇರಳ ವಿಶ್ವ ವಿದ್ಯಾನಿಲಯ ತ್ರಿಶೂರ್ ಇಲ್ಲಿ ಪಿ.ಹೆಚ್.ಡಿ. ವ್ಯಾಸಂಗ ಮಾಡುತ್ತಿದ್ದಾರೆ. ಇವರು ಕೊಡಗು ಜಿಲ್ಲೆಯ ಸಂಪಾಜೆ ಗ್ರಾಮದ ಮಂಗಳಪಾರೆ ನಾರಾಯಣ ಮತ್ತು ಶ್ರೀಮತಿ ಶೋಭಾ ದಂಪತಿಯ ಪುತ್ರ.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.