ಕೇನ್ಯ: ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಸುವರ್ಣ ಮಹೋತ್ಸವ ಪೂರ್ವಭಾವಿ ಸಭೆ

Advt_Headding_Middle

 

ಕೇನ್ಯ ಗ್ರಾಮದ ಕೇನ್ಯ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಒತ್ತೆಕೋಲ ಆರಂಭವಾಗಿ 50 ವರ್ಷ ಸಂದಿರುವ ಅಂಗವಾಗಿ ಒತ್ತೆಕೋಲದ ಸುವರ್ಣಮಹೋತ್ಸವ ಕಾರ್ಯಕ್ರಮ 2022ರ ಫೆ. 12ರಂದು ನಡೆಯಲಿದೆ.
ಫೆ. 12ರಂದು ಬೆಳಿಗ್ಗೆ ಭಜನಾ ಕಾರ್ಯಕ್ರಮ, ಮಧ್ಯಾಹ್ನ 2.00 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ, ಬಳಿಕ ವಿವಿಧ ಕಾರ್ಯಕ್ರಮಗಳೊಂದಿಗೆ ಒತ್ತೆಕೋಲ ನಡೆಯಲಿದೆ. ಈ ಬಗ್ಗೆ ಈಗಾಗಲೇ ಸುವರ್ಣಮಹೋತ್ಸವ ಸಮಿತಿ ರಚನೆಗೊಂಡಿದ್ದು, ಗೌರವಾಧ್ಯಕ್ಷರಾಗಿ ರಾಮಚಂದ್ರಯ್ಯ ಬೆಂಗಳೂರು, ಸಂಚಾಲಕರಾಗಿ ಕೇನ್ಯ ರವೀಂದ್ರನಾಥ ಶೆಟ್ಟಿ, ಅಧ್ಯಕ್ಷರಾಗಿ ಗಿರಿನಾಥ ಶೆಟ್ಟಿ ಕೇನ್ಯಗುತ್ತು, ಕಾರ್ಯಾಧ್ಯಕ್ಷರಾಗಿ ನಿವೃತ್ತ ತಹಶಿಲ್ದಾರ್ ತಮ್ಮಯ್ಯ ಗೌಡ ಗೆಜ್ಜೆ, ಪ್ರಧಾನ ಕಾರ್ಯದರ್ಶಿಯಾಗಿ ವಿಶ್ವನಾಥ ರೈ ಅರ್ಗುಡಿ, ಕೋಶಾಧಿಕಾರಿಯಾಗಿ ರಾಮಕೃಷ್ಣ ರೈ ಅಗಲ್ತ, ಉಪಾಧ್ಯಕ್ಷರಾಗಿ ಸದಾನಂದ ರೈ ಅರ್ಗುಡಿ, ಮಮತಾ ಎಸ್. ಶೆಟ್ಟಿ ಸೇರಿದಂತೆ ವಿವಿಧ ಸಮಿತಿಗಳಿಗೆ ಪದಾಧಿಕಾರಿಗಳನ್ನು ಆಯ್ಕೆಮಾಡಲಾಗಿದೆ.
ನ. 28ರಂದು ನಡೆದ ಪೂರ್ವಭಾವಿ ಸಭೆಯಲ್ಲಿ ಕೇನ್ಯ ರವೀಂದ್ರನಾಥ ಶೆಟ್ಟಿ, ತಮ್ಮಯ್ಯ ಗೌಡ ಗೆಜ್ಜೆ, ಯಶವಂತ ರೈ, ವಿಶ್ವನಾಥ ರೈ ಅರ್ಗುಡಿ, ಶ್ರೀಮತಿ ನಿರಂಜಿನಿ ಆರ್ ಶೆಟ್ಟಿ, ಶ್ರೀಮತಿ ವಿಮಲಾ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಸಮಿತಿಗಳ ಸಂಚಾಲಕರು, ಭಕ್ತಾದಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದು, ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.