ಸುಳ್ಯದಲ್ಲಿ ವಿನೂತನ ಯಕ್ಷ ಕಥಾ ಗಾನ- ಅಗಲಿದ ಭಾಗವತಧ್ವಯರಿಗೆ ಯಕ್ಷ ಭಾಗವತ ನಮನ

Advt_Headding_Middle

 

 

ಪ್ರಜ್ಞಾ ಯಕ್ಷಗಾನ ಕಲಾ ಶಾಲೆ ಸುಳ್ಯ ಹಾಗು ಶಿವಳ್ಳಿ ಸಂಪನ್ನ ಸುಳ್ಯ ಇದರ ವತಿಯಿಂದ ಇತ್ತೀಚೆಗೆ ನಮ್ಮನ್ನಗಲಿದ ಭಾಗವತ ದ್ವಯರಾದ ಪದ್ಯಾಣ ಗಣಪತಿ ಭಟ್ ಹಾಗು ರಾಮಚಂದ್ರ ಅರ್ಬಿತ್ತಾಯರ ಸ್ಮರಣಾರ್ಥ ಯಕ್ಷ ಬಾಗವತ ನಮನ – 2 ಶ್ರೀ ರಾಘವೇಂದ್ರ ಮಠ ಸುಳ್ಯದಲ್ಲಿ ನಡೆಯಿತು. ಪಾರ್ತಿಸುಬ್ಬನ ಪ್ರಸಿದ್ಧ ಕೃತಿ ಪಂಚವಟಿಯ ಆಯ್ದ ಶೂರ್ಪನಖಾ ಮಾನಭಂಗ ಎಂಬ ಕಥಾಭಾಗವನ್ನು ಯಕ್ಷಗಾನದ ಹಿಮ್ಮೇಳದೊಂದಿಗೆ ನಿರೂಪಿಸಲಾಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶರಣ್ಯಾ ಕಲ್ಮಡ್ಕ, ರಚನಾ ಚಿದ್ಗಲ್, ಅಭಿಜ್ಞಾ ನಾಟಿಕೇರಿ, ಚೆಂಡೆ ಮದ್ದಳೆಯಲ್ಲಿ ಅಂಬಾ ತನಯ ಅರ್ನಾಡಿ, ಪ್ರಥಮ ಮೂಡಿತ್ತಾಯ ಭಾಗವಹಿಸಿದರು. ಪ್ರಕಾಶ ಮೂಡಿತ್ತಾಯ ಇವರು ಈ ಕಾರ್ಯಕ್ರಮ ನಿರ್ದೇಶಿಸಿ ಕಥಾ ನಿರೂಪಣೆ ಮಾಡಿದರು. ಡಾ. ವೀಣಾ ಸುಳ್ಯ ಭಾಗವತದ್ವಯರ ಬಗ್ಗೆ ನುಡಿನಮನ ಸಲ್ಲಿಸಿದರು. ವಿದ್ಯಾರ್ಥಿಗಳಿಂದಲೇ ಪ್ರಸ್ತುತಗೊಂಡ ಹಿಮ್ಮೇಳ ಹಾಗು ಕಥೆಯ ಪ್ರಸ್ತುತಿಗಳ ನಡುವೆ ಉತ್ತಮ ಸಾಂಗತ್ಯ, ಶೂರ್ಪನಖಿಯ ಮನದ ತಳದ ತುಮುಲಗಳು ಹಾಗು ಮಹಿಳಾ ಪರವಾದ ಧ್ವನಿಯನ್ನು ಸರಳ ಹಾಗು ಮನೋಜ್ಞವಾಗಿ ನಿರೂಪಿಸಿದ ರೀತಿ ಈ ವಿನೂತನ ಯಕ್ಷ ಕಥಾ ಗಾನದ ವಿಶೇಷತೆಯಾಗಿತ್ತು. ಮುಂದಿನ ಒಂದು ವರ್ಷ ಕಾಲ ಪ್ರತಿ ತಿಂಗಳ ಕೊನೆಯ ಶನಿವಾರ ಈ ಯಕ್ಷ ಭಾಗವತ ನಮನ ಕಾರ್ಯಕ್ರಮ ಜಿಲ್ಲೆಯ ವಿವಿಧ ಕಡೆ ನಡೆಯಲಿದೆ ಎಂದು ಕಲಾ ಶಾಲೆಯ ನಿರ್ದೇಶಕರ ರಲ್ಲಿ ಓರ್ವರಾದ ಮಮತಾ ಮೂಡಿತ್ತಾಯ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಬೃಂದಾವನ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀಕೃಷ್ಣ ಸೋಮಯಾಗಿ, ಶಿವಳ್ಳಿ ಸಂಪನ್ನದ ಅಧ್ಯಕ್ಷರಾದ ಪ್ರವೀಣ ರಾವ್, ಕಾರ್ಯದರ್ಶಿ ನವೀನ ಸೋಮಯಾಗಿ, ಗಿರೀಶ ಕೇಕುಣ್ಣಾಯ, ಶಶಿಧರ ಕೇಕಣ್ಣಾಯ, ಮುರಳೀಕೃಷ್ಣ, ರಮೇಶ್ ಎನ್, ಮಹೇಶ್ ಎನ್, ಗಂಗಾಧರ ಮಟ್ಟಿ ಹಾಗು ಸರ್ವ ಸದಸ್ಯರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.