ಸುಳ್ಯ ಗಾಂಧಿನಗರದಲ್ಲಿ ಆದಿ ತರಕಾರಿ ಮತ್ತು ಹಣ್ಣು ಹಂಪಲು ಮಳಿಗೆ ಶುಭಾರಂಭ

Advt_Headding_Middle
Advt_Headding_Middle

ಸುಳ್ಯ ಗಾಂಧಿನಗರದ ಜನತಾ ಸ್ಟೋರ್ ಮುಂಭಾಗ ಕಲ್ಲಪಳ್ಳಿ ಕಾಂಪ್ಲೆಕ್ಸ್ ನಲ್ಲಿ ದುಗ್ಗಲಡ್ಕದ ಮಣಿಕಂಠ ಮತ್ತು ಸಹೋದರರ ಮಾಲಕತ್ವದ ಆದಿ ತರಕಾರಿ ಮತ್ತು ಹಣ್ಣು ಹಂಪಲು ಮಳಿಗೆ ಇಂದು ಶುಭಾರಂಭಗೊಂಡಿತು.
ಮಳಿಗೆಯನ್ನು ಸುಳ್ಯ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಹರಪ್ರಸಾದ್ ತುದಿಯಡ್ಕ, ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಉದ್ಘಾಟಿಸಿದರು.


ನ.ಪಂ.ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ, ಸುಳ್ಯ ವೆಂಕಟರಮಣ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ, ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ,ನ.ಪಂ.ಸದಸ್ಯ ಉಮ್ಮರ್ ಬಿ., ಸುಳ್ಯಉಡುಪಿ ಗಾರ್ಡನ್ ನ ಶಂಕರ ಪೂಜಾರಿ,ಸುಳ್ಯ ತಾಲೂಕು ಯಾದವ ಸಭಾದ ಅಧ್ಯಕ್ಷ ಜನಾರ್ದನ ಕಣಕ್ಕೂರು, ತಾಂತ್ರಿಕ ಕೃಷಿ ಅಧಿಕಾರಿ ಮೋಹನ ನಂಗಾರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.

ಮಾಲಕರಾದ ಮಣಿಕಂಠ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಯರ್ತೋಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪಿ.ಕೆ.ಉಮೇಶ್, ಜನತಾ ಹಮೀದ್, ನ.ಪಂ.ಸದಸ್ಯರುಗಳಾದ ಬಾಲಕೃಷ್ಣ ರೈ, ಶಶಿಕಲಾ ನೀರಬಿದಿರೆ, ಮಾಜಿ ಅಧ್ಯಕ್ಷೆ ಶೀಲಾವತಿ ಮಾಧವ, ಸೋಮನಾಥ ಪೂಜಾರಿ, ಕಾರ್ಯನಿರತ ಪತ್ರಕರ್ತರ ಸಂಘದ ನಿಕಟ ಪೂರ್ವಾಧ್ಯಕ್ಷ ಕೃಷ್ಣ ಬೆಟ್ಟ, ಮಾಲಕರ ಸಹೋದರ ದಿನೇಶ್ ಡಿ.ಕೆ. ಮೊದಲಾದವರು,ಮನೆಯವರು,ಬಂಧು ಮಿತ್ರರು ಉಪಸ್ಥಿತರಿದ್ದರು. ಸುದ್ದಿ ವರದಿಗಾರ ರಮೇಶ್ ನೀರಬಿದಿರೆ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.