ಬೆಳ್ಳಾರೆ :ಜೆ.ಡಿ ಸೇವಾಕೇಂದ್ರದಲ್ಲಿ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ

Advt_Headding_Middle

ಸರ್ಕಾರದ ಸೇವೆಗಳು ಜನಸಾಮಾನ್ಯರ ಬಳಿಗೆ ತಲುಪಿಸುವ ಕೆಲಸ ಶ್ಲಾಘನೀಯ ಎಂದು ಕೊಡಿಯಾಲ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರದೀಪ್ ರೈ ಅಜ್ರಂಗಳ ಹೇಳಿದರು. ಜೆ.ಡಿ ಡಿಜಿಟಲ್ ಸೇವಾ ಕೇಂದ್ರ, ಇಂಟರ್ಯಾಕ್ಟ್ ಕ್ಲಬ್ ಜ್ಞಾನದೀಪ ಬೆಳ್ಳಾರೆ ಸಹಯೋಗದಲ್ಲಿ ಅಂಚೆ ಇಲಾಖೆ ಪುತ್ತೂರು ಅಂಚೆ ವಿಭಾಗ, ಸುಳ್ಯ ಉಪವಿಭಾಗದ ವತಿಯಿಂದ ನಡೆದ ಆಧಾರ್ ಕಾರ್ಡ್ ನೋಂದಣಿ ಮತ್ತು ತಿದ್ದುಪಡಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಜ್ಞಾನದೀಪ ಇಂಟರ್ಯಾಕ್ಟ್ ಕ್ಲಬ್ ಅಧ್ಯಕ್ಷೆ ಮೇಘನಾ ಅಧ್ಯಕ್ಷ ತೆ ವಹಿಸಿದ್ದರು. ಕೊಡಿಯಾಲ ಸುದೀಪ್ ,ಅಂಚೆ ನಿರೀಕ್ಷಕರು ಸುಳ್ಯ ವಿಭಾಗ ,ಜ್ಞಾನದೀಪ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಉಪಸ್ಥಿತರಿದ್ದರು. ಸುಳ್ಯ ಉಪ ವಿಭಾಗದ ಅಂಚೆ ನಿರೀಕ್ಷಕ ಸುದೀಪ್ ಪಿ.ಎಸ್ ಅಂಚೆ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಉಮೇಶ್ ಮಣಿಕ್ಕಾರ ಸ್ವಾಗತಿಸಿ,ಇಂಟರ್ಯಾಕ್ಟ್ ಕಾರ್ಯದರ್ಶಿ ವಿಘ್ನೇಶ್ ವಂದಿಸಿದರು . ಇಂಟರ್ಯಾಕ್ಟ್ ಕ್ಲಬ್ ನ ಶಿಕ್ಷಕ ಸಂಯೋಜಕ ಗಣೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು .

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.