ಅಡ್ಯಡ್ಕ ಕೃಷ್ಣಪ್ಪ ನಾಯ್ಕ ನಿಧನ

Advt_Headding_Middle

 

 

ತೊಡಿಕಾನ ಗ್ರಾಮದ ಅಡ್ಯಡ್ಕ ಕೃಷ್ಣಪ್ಪ ನಾಯ್ಕ ಎಂಬವರು ಅಲ್ಪಕಾಲದ ಅಸೌಖ್ಯದಿಂದ ಡಿ.3 ರಂದು ನಿಧನರಾದರು.
ಡಿ. 3 ರಂದು ಸಂಜೆ ಮನೆಯಲ್ಲಿ ಅಸೌಖ್ಯಕ್ಕೆ ಒಳಗಾದ ಅವರನ್ನು ಮನೆಯವರು ಕೂಡಲೇ ಸುಳ್ಯಕ್ಕೆ ಚಿಕಿತ್ಸೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ದರು. ರಾತ್ರಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು. ಅವರಿಗೆ 48 ವರ್ಷ ವಯಸ್ಸಾಗಿತ್ತು.
ಮೃತರು ಸಹೋದರರಾದ ಮೋನಪ್ಪ ನಾಯ್ಕ ,ಶೇಷಪ್ಪ ನಾಯ್ಕ , ಸಹೋದರಿಯರಾದ ಕಮಲಾಕ್ಷಿ, ಬಾಲಕಿ, ಸರಸ್ವತಿ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ . ಕೃಷ್ಣಪ್ಪ ಅವರು ಅಯೋದ್ಯೆ ಕರಸೇವೆಯಲ್ಲಿ ಭಾಗಿಯಾಗಿದ್ದರು. ಆರ್ .ಎಸ್.ಎಸ್. ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಭಜರಂಗದಳದ ಕಾರ್ಯಕರ್ತರೂ ಆಗಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.