ಸುಬ್ರಹ್ಮಣ್ಯ: ಕೆ ಎಸ್ ಆರ್ ಟಿ ಸಿ ಬಸ್ ಕೊರತೆ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪ್ರತಿಭಟನೆ

Advt_Headding_Middle

 

 

 

 

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಕ್ಕೆ ಸುಬ್ರಹ್ಮಣ್ಯ ವತಿಯಿಂದ ಕೆ ಎಸ್ ಆರ್ ಟಿ ಸಿ ಬಸ್ ರೂಟ್ ಗಳಿಗೆ ಬೇಗ ಬರದಿರುವುದು ಮತ್ತು ರೂಟ್ ಗಳಿಗೆ ಬಸ್ ಸಂಚಾರ ಕೊರತೆ ಇರುವುದನ್ನು ಖಂಡಿಸಿ ಇಂದು ಸಂಜೆ ಪ್ರತಿಭಟನೆ ನಡೆಸಲಾಯಿತು.

ಸುಬ್ರಹ್ಮಣ್ಯ – ಉಪ್ಪಿನಂಗಡಿ, ಸುಬ್ರಹ್ಮಣ್ಯ – ಸುಳ್ಯ, ಇಚ್ಲಾಂಪಾಡಿ, ಧರ್ಮಸ್ಥಳ ಮಾರ್ಗದಲ್ಲಿ ಸರಿಯಾದ ವೇಳೆಗೆ ಬಸ್ ಬರದಿರುವುದು, ಕಡಿಮೆ ಬಸ್ ಗಳು ಸಂಚರಿಸುವುದರಿಂದ ವಿದ್ಯಾರ್ಥಿಗಳನ್ನು ಸ್ಥಳಾವಕಾಶ ಕೊರತೆಯಿಂದ ಬಿಟ್ಟು ಹೋಗುವುದರಿಂದ ವಿದ್ಯಾರ್ಥಿಗಳಿಗೆ ಶಾಲೆಗೆ, ಕಾಲೇಜಿಗೆ ಸರಿಯಾದ ಸಮಯದಲ್ಲಿ ಹಾಜರಾಗಲು ಸಾದ್ಯವಾಗುತ್ತಿಲ್ಲ. ಅಲ್ಲದೆ ಈ ಬಗ್ಗೆ ಕೆ ಎಸ್ ಆರ್ ಟಿ ಸಿ ಇಲಾಖೆಗೆ, ಶಾಸಕರಿಗೆ ಎ ಬಿ ವಿ ಪಿ ವತಿಯಿಂದ ಮನವಿ ನೀಡಲಾಗಿದ್ದರೂ ಸಮಸ್ಯೆ ಬಗೆಹರಿದಿಲ್ಲ.
ಆದುದರಿಂದ ಪ್ರತಿಭಟನೆ ನಡೆಸಲಾಗಿದ್ದು ಆರಂಭದಲ್ಲಿ ಸುಬ್ರಹ್ಮಣ್ಯದ ವನದುರ್ಗಾ ದೇವಸ್ಥಾನದಿಂದ ಜಾಥಾ ಹೊರಟು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಲಾಯಿತು. ನಿಕಟಪೂರ್ವ ನಗರ ಕಾರ್ಯದರ್ಶಿ ಪ್ರಕಾಶ್ ಬಾಳುಗೋಡು ಪ್ರತಿಭಟನೆಯ ಕುರಿತು ಮಾತಾನಾಡಿದರು. ಪುತ್ತೂರು ಜಿಲ್ಲಾ ಸಂಚಾಲಕರಾದ ಹಿತೇಶ್ ಕಟ್ರಮನೆ , ರಾಜ್ಯ ಕಾರ್ಯಕಾರಣಿ ಸದಸ್ಯೆಯಾದ ಮಂದಾರ ಬಾಳುಗೋಡು, ಹಿರಿಯ ಕಾರ್ಯಕರ್ತರಾದ ರಕ್ಷಿತ್ ಪರಮಲೆ ಹಾಗೂ ಎಲ್ಲಾ ಕಾರ್ಯಕರ್ತರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.