ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೆಳಗಿದ ಲಕ್ಷದೀಪ

Advt_Headding_Middle

 

ಲಕ್ಷದೀಪೋತ್ಸವಕ್ಕೆ ಮೆರುಗು ತಂದ ಭಜಕರ ಕುಣಿತ ಭಜನೆ

ಬೀದಿ ಮಡಸ್ತಾನವೂ ಆರಂಭ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ.3 ರ ರಾತ್ರಿ ವೈಭವ ಯುತವಾಗಿ ದೀಪಗಳು ಬೆಳಗಿ ಲಕ್ಷದೀಪೋತ್ಸವ ನಡೆಯಿತು. ಮೊದಲ ಭಾರಿ ಭಜನೆ, ಕುಣಿತ ಭಜನೆ ನಡೆದು ದೀಪೋತ್ಸವ ವಿಜ್ರಂಭಿಸಿತು.

ದೇವಸ್ಥಾನದ ಗೋಪುರದಿಂದ, ರಥಬೀದಿ, ಸುಬ್ರಹ್ಮಣ್ಯ ಪೇಟೆ, ಹನುಮಂತಗುಡಿ, ಕಾಶಿಕಟ್ಟೆ, ಆದಿ ಸುಬ್ರಹ್ಮಣ್ಯ, ಬೈಪಾಸ್, ಸವಾರಿ ಮಂಟಪ, ಕುಮಾರಧಾರ, ಮುಂತಾದೆಡೆ ದೀಪ ಪ್ರಜ್ವಲಿಸಲಾಗಿದ್ದು, ದೇವಸ್ಥಾನದ ಸಿಬ್ಬಂದಿಗಳು, ಸಂಘಟನೆಗಳು, ಸಂಸ್ಥೆಗಳು, ಸಾಥ್ ನೀಡಿವೆ.

ಮಹಾಪೂಜೆ ಬಳಿಕ ಚಂದ್ರಮಂಡಲ ರಥದಲ್ಲಿ ಸುಬ್ರಹ್ಮಣ್ಯ ದೇವರ ಉತ್ಸವ ನಡೆಯಿತು. ದೇವಸ್ಥಾನದಿಂದ ಹೊರಟ ರಥ ದೀಪಗಳ ಮಧ್ಯೆ ಕಾಶಿಕಟ್ಟೆವರೆಗೆ ಸಾಗಿತು. ಅಲ್ಲದೆ ದೇವಸ್ಥಾನದಲ್ಲಿ ಶೇಷವಾಹನಯುಕ್ತ ಬಂಡಿ ಉತ್ಸವ ಮತ್ತು ಪಾಲಕಿ ಉತ್ಸವ ನಡೆಯಿತು. ಸಂಜೆ ಆದಿ ಸುಬ್ರಹ್ಮಣ್ಯದಲ್ಲಿ ದೀಪಾಲಂಕೃತ ರಂಗಪೂಜೆ ನಡೆಯಿತು. ಬಳಿಕ ಅಂಕುರಾರ್ಪಣೆ ನಡೆಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ ರಾಮ್ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ. ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.


ಮೊದಲ ಭಾರಿ ಕುಣಿತ ಭಜನೆಯ ಮೆರುಗು
ಲಕ್ಷ ದೀಪೋತ್ಸವ ಹಿನ್ನೆಲೆಯಲ್ಲಿ ಈ ಭಾರಿ ವಿವಿಧ ಸಂಘ ಸಂಸ್ಥೆಗಳ, ಭಜನಾ ತಂಡಗಳ, ಸಹಕಾರದಲ್ಲಿ ರಥಬೀದಿಯ ಉದ್ದಕ್ಕೂ ಭಜನೆ ಹಾಗೂ ಕುಣಿತ ಭಜನೆ ನಡೆಯಿತು.

ದೈವದ ಭಂಡಾರ ಆಗಮನ, ನರ್ತನ ಸೇವೆ, ಗುರ್ಜಿಪೂಜೆ: ಮುಂಜಾನೆ ದೇವರಗದ್ದೆಯ ಹೊಸಳಿಗಮ್ಮನ ಗುಡಿಯಿಂದ ದೈವಗಳ ಭಂಡಾರ ತರಲಾಗಿದ್ದು ರಾತ್ರಿ ಕಾಚುಕುಜುಂಬ ದೈವವು ಶ್ರೀ ದೇವರನ್ನು ಎದುರಾಗಿ ನುಡಿಗಟ್ಟು ನುಡಿಯಿತು. ಬಳಿಕ ನರ್ತನ ಸೇವೆ ನಡೆದು ರಥ ಕಾಶಿಕಟ್ಟೆಗೆ ತೆರಳುವಾಗ ಸವಾರಿ ಮಂಟಪದ ಬಳಿ ಕ್ಷೇತ್ರ ದೈವ ಹೊಸಳಿಗಮ್ಮಣ ದರ್ಶನ ನಡೆದು ನರ್ತನ ಸೇವೆ ನಡೆಯಿತು. ರಾತ್ರಿ ಕಾಶಿಕಟ್ಟೆ ಮಹಾ ಗಣಪತಿ ದೇವರಿಗೆ ದೀಪಾರಾಧನೆಯುಕ್ತ ರಂಗಪೂಜೆ ನಡೆದು ಚಂದ್ರಮಂಡಲದಲ್ಲಿ ಬಂದ ಶ್ರೀ ದೇವರಿಗೆ ಗುರ್ಜಿಯಲ್ಲಿ ಪೂಜೆ ನೆರವೇರಿತು.

ಬೀದಿ ಮಡಸ್ತಾನ ಆರಂಭ:

ನಿನ್ನೆಯಿಂದ ಬೀದಿ ಮಡೆಸ್ತಾನ ಆರಂಭವಾಗಿದ್ದು ಕುಮಾರಧಾರ ದಿಂದ ಬೀದಿಯಲ್ಲಿ ಉರುಳುತ್ತಾ ದೇವರ ಬಳಿ ಬಂದು ತಮ್ಮ ಸೇವೆ ಪೂರೈಸುತ್ತಿದ್ದು ಅದಕ್ಕಾಗಿ ರಸ್ತೆಯ ಒಂದು ಭಾಗವನ್ನು ಬಿಟ್ಟುಕೊಡಲಾಗಿದೆ.

ಪೋಟೋ: ಶಾಂತಲಾ ಸ್ಟುಡಿಯೋ ಸುಬ್ರಹ್ಮಣ್ಯ ಮತ್ತು ಪ್ರತಿರೂಪ ಸ್ಟುಡಿಯೋ ಸುಬ್ರಹ್ಮಣ್ಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.