ಸುಳ್ಯದ ಓಡಬಾಯಿ ಪರಿಸರದಲ್ಲಿ ಸಂತೋಷ್ ಕುಂಭಕ್ಕೋಡು, ಚಿದಾನಂದ ಕುಂಭಕ್ಕೋಡುರವರ ಮಾಲಕತ್ವದಲ್ಲಿ ಆಧುನಿಕ ಸೌಕರ್ಯಗಳೊಂದಿಗೆ ಹೋಟೆಲ್ ಲಿಕ್ವಿಡ್ ಕಾಂಟಿನೆಂಟ್ ಡಿ. 9 ರಂದು ಶುಭಾರಂಭಗೊಳ್ಳಲಿದೆ.
ನೂತನ ಸಂಸ್ಥೆಯನ್ನು ಸಚಿವ ಎಸ್.ಅಂಗಾರರವರು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಾಜಿ ವಿಧಾನಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರ ಕಿಲಂಗೋಡಿ ವಹಿಸಲಿದ್ದು, ರೆಸ್ಟೋರೆಂಟ್ ವಿಭಾಗವನ್ನು ಉದ್ಯಮಿ ಹಾಗೂ ಚಲನಚಿತ್ರ ನಟ ಬಿ.ಎಸ್.ಅವಿನಾಶ್ ಉದ್ಘಾಟಿಸಲಿದ್ದಾರೆ.
ಸವಿ ನುಡಿ ಹಾಗೂ ಲಾಡ್ಜಿಂಗ್ ಉದ್ಘಾಟನೆಯನ್ನು ಸುಳ್ಯ ನ.ಪಂ. ಅಧ್ಯಕ್ಷ ವಿನಯಕುಮಾರ್ ಕಂದಡ್ಕ ನೆರವೇರಿಸಲಿದ್ದು, ಬಾರ್ ಕೌಂಟರ್ ವಿಭಾಗವನ್ನು ವರ್ತಕ ಸಂಘದ ಅಧ್ಯಕ್ಷ ಪಿ.ಬಿ. ಸುಧಾಕರ ರೈ ನೆರವೇರಿಸಲಿದ್ದಾರೆ. ಸುಳ್ಯದಲ್ಲಿ ಪ್ರಪ್ರಥಮ ಬಾರಿಗೆ ವಾಣಿಜ್ಯ ಸಂಕೀರ್ಣದಲ್ಲಿ ಲಿಫ್ಟ್ ಇದ್ದು, ಇದರ ಉದ್ಘಾಟನೆಯನ್ನು ಮಂಗಳೂರಿನ ಕನ್ಸಲ್ಟೆಂಟ್ ಜಯರಾಮ ಪಡ್ಪು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆರ್ಎಸ್ಬಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಬೋರ್ಕರ್ ಕರೋಡಿ, ಸುಳ್ಯ ತಾ. ವೈನ್ಸ್ ಮರ್ಚೆಂಟ್ ಅಸೋಸಿಯೇಶನ್ ಅಧ್ಯಕ್ಷ ಸುಂದರ ರಾವ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿರುವರು.
ಇಲ್ಲಿ ರೂಫ್ ಟಾಪ್ ರೆಸ್ಟೋರೆಂಟ್, ಲಿಕ್ಕರ್, ಫೈನ್ ಡೈನ್, ತೂಗುಸೇತುವೆಯ ನೋಟವಿರುವ ಬಾಲ್ಕನಿ ಹೊಂದಿದ ಲಾಡ್ಜಿಂಗ್, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಸೌಲಭ್ಯಗಳು ಇರುವುದಾಗಿ ಮಾಲಕರು ತಿಳಿಸಿದ್ದಾರೆ.