ಐವರ್ನಾಡಿನಲ್ಲಿ ಉಚಿತ ಇ- ಶ್ರಮ್ ಕಾರ್ಡ್ ನೋಂದಣಿ ಕಾರ್ಯಕ್ರಮ

Advt_Headding_Middle

 

ಸುದ್ದಿ ಡಿಜಿಟಲ್ ಸೇವಾ ಕೇಂದ್ರ ಸುಳ್ಯ , ಐವರ್ನಾಡು ಗ್ರಾಮ ಪಂಚಾಯತ್ ಹಾಗೂ ಐವರ್ನಾಡು ಸಹಕಾರಿ ಸಂಘದ ಆಶ್ರಯದಲ್ಲಿ ಸರಕಾರದಿಂದ ಅಸಂಘಟಿತ ಕಾರ್ಮಿಕರಿಗೆ ನೀಡಲ್ಪಡುವ ಇ-ಶ್ರಮ್ ಕಾರ್ಡ್ ನ ಉಚಿತ ನೋಂದಣಿ ಕಾರ್ಯಕ್ರಮವು ಡಿ.04 ರಂದು ಐವರ್ನಾಡು ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.

ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ, ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿಪ್ರಸಾದ್ ಸಿ.ಕೆ,ನಿರ್ದೇಶಕರಾದ ಶ್ರೀಮತಿ ಸರಸ್ವತಿ,ಶ್ರೀಮತಿ ಭವಾನಿ,ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಶ್ಯಾಮ್ ಪ್ರಸಾದ್ ,ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಶಾಂತರಾಮ‌ ಕಣಿಲೆಗುಂಡಿ, ನವೀನ ಚಾತುಬಾಯಿ ,ಸತೀಶ್ ಕತ್ಲಡ್ಕ ,ಸುದ್ದಿ ಡಿಜಿಟಲ್ ಸೇವಾ ಕೇಂದ್ರದ ಮಂಜುನಾಥ ಪೈ ಅರಂಬೂರು, ದೀಪ್ತಿ ಮುಚ್ಚಾರ,ಶ್ರೀಮತಿ ಮಧುಶ್ರೀ ಉಪಸ್ಥಿತರಿದ್ದರು.
ಸುದ್ದಿ ಪತ್ರಿಕೆಯ ವರದಿಗಾರ ಗಣೇಶ್ ಕುಕ್ಕುದಡಿ ಸ್ವಾಗತಿಸಿ , ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.