ಗುತ್ತಿಗಾರು : ಶ್ರೀಕೃಷ್ಣ ಯಕ್ಷಸಭಾ ತಿಂಗಳ ಅಭ್ಯಾಸ ವರ್ಗ ಉದ್ಘಾಟನೆ

Advt_Headding_Middle

 

ಗುತ್ತಿಗಾರಿನಲ್ಲಿ ಶ್ರೀಕೃಷ್ಣ ಯಕ್ಷಸಭಾ ತಿಂಗಳ ಅಭ್ಯಾಸವರ್ಗದ ಉದ್ಘಾಟನಾ ಸಮಾರಂಭ ಶ್ರೀಕೃಷ್ಣ ಭಜನಾ ಮಂದಿರ ಗುತ್ತಿಗಾರಿನಲ್ಲಿ ನಡೆಯಿತು. ಡಾ ಮಹಾಲಿಂಗೇಶ್ವರ ಭಟ್ ದೇವಸ್ಯ ಉದ್ಘಾಟಿಸಿ ಶುಭ ಹಾರೈಸಿದರು. ಶ್ರೀಕೃಷ್ಣ ಭಜನಾ ಮಂದಿರ ಇದರ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಜನಾ ಮಂದಿರದ ಅಧ್ಯಕ್ಷ ಕಿಶೋರ್ ಕುಮಾರ್ ವಹಿಸಿದ್ದರು.
ವೇದಿಕೆಯಲ್ಲಿ ಹಿರಿಯ ಚೆಂಡೆವಾದಕ ಕುಮಾರ ಸುಬ್ರಹ್ಮಣ್ಯ ಭಟ್ ವಳಕ್ಕುಂಜ, ಖ್ಯಾತ ತಾಳಮದ್ದಳೆ ಅರ್ಥದಾರಿ ರಾಮಾ ಜೋಯಿಸ ಬೆಳ್ಳಾರೆ, ಗ್ರಾಮ ಪಂಚಾಯತ್ ಅಧ್ಯಕ್ಷೆ ರೇವತಿ ಆಚಳ್ಳಿ, ಭಜನಾ ಮಂದಿರದ ಗೌರವಾಧ್ಯಕ್ಷ ಬಿ. ಕೆ. ಶ್ರೀಧರ್, ವಳಲಂಬೆ ಯಕ್ಷಗಾನ ಕಲಿಕಾ ಕೇಂದ್ರದ ಅಧ್ಯಕ್ಷ ಕೇಶವ ಹೊಸೋಳಿಕೆ, ಯಕ್ಷ ಸಭಾದ ಸಂಘಟಕ ಗೋಪಾಲಕೃಷ್ಣ ಭಟ್ ದೇವಸ್ಯ ಉಪಸ್ಥಿತರಿದ್ದರು. ಗೋಪಾಲಕೃಷ್ಣ ಭಟ್ ಸ್ವಾಗತಿಸಿ, ಶಿವಸುಬ್ರಹ್ಮಣ್ಯ ಕರುವಜೆ ವಂದಿಸಿದರು. ಶಿವಕುಮಾರ ಭಟ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ವೀರವೈಷ್ಣವ ಎಂಬ ತಾಳಮದ್ದಳೆ ಸಂಪನ್ನಗೊಂಡಿತು. ಕಲಾವಿದರಾಗಿ ಗೋಪಾಲಕೃಷ್ಣ ಭಟ್ ದೇವಸ್ಯ, ಪ್ರತೀಕ್ ಆಚಾರ್ಯ ಕಂದ್ರಪ್ಪಾಡಿ, ವೆಂಕಟೇಶ್ ಭಟ್ ದೇವಸ್ಯ, ಬಾಲಸುಬ್ರಹ್ಮಣ್ಯ ಭಟ್ ದೇವಸ್ಯ, ಕುಶಾಲಪ್ಪ ಮಾಸ್ತರ್ ರುದ್ರಚಾಮುಂಡಿ, ತಾರನಾಥ ಅಂಬೆಕಲ್ಲು, ಅನಂತಕೃಷ್ಣ ಭಟ್, ಲಕ್ಷ್ಮೀಶ ಗಬ್ಬಲಡ್ಕ, ಶಿವಕುಮಾರ ಭಟ್, ಶಿವಸುಬ್ರಹ್ಮಣ್ಯ ಭಟ್, ಪ್ರಶಾಂತ್ ರೈ ಪಂಜ ಮತ್ತು ಕುಮಾರ ಸುಬ್ರಹ್ಮಣ್ಯ ಭಟ್ ವಳಕುಂಜ ಭಾಗವಹಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.