ಸಮಾಜ ಕಲ್ಯಾಣ ಇಲಾಖೆಯಲ್ಲಿ ಚಂದ್ರಶೇಖರ ಪೇರಾಲುರಿಗೆ ವಿದಾಯಕೂಟ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಪೇರಾಲು ಇಲಾಖೆಗಳ ಪಾಲಿಗೆ ಆಸ್ತಿ : ಭವಾನಿಶಂಕರ್

ಸಂವೇದನಾಶೀಲ ವಾತಾವರಣ ಸೃಷ್ಟಿಸಿದ ಅಧಿಕಾರಿ : ನಾಯರ್‌ಕೆರೆ
ಸರಕಾರಿ ಸೇವೆಯಿಂದ ನಿವೃತ್ತರಾದ, ಸಮಾಜ ಕಲ್ಯಾಣ ಇಲಾಖೆಯ ಸುಳ್ಯದ ಪ್ರಭಾರ ಸಹಾಯಕ ನಿರ್ದೇಶಕರೂ ಆಗಿದ್ದ ಚಂದ್ರಶೇಖರ ಪೇರಾಲು ಅವರಿಗೆ ವಿದಾಯಕೂಟ ಸಮಾರಂಭವು ಇಂದು ಕಚೇರಿಯಲ್ಲಿ ನಡೆಯಿತು.
ಸಮಾಜ ಕಲ್ಯಾಣ ಇಲಾಖೆಯ ಸುಳ್ಯದ ನೂತನ ಪ್ರಭಾರ ಸಹಾಯಕ ನಿರ್ದೇಶಕ ಹೇಮಚಂದ್ರ ಬಿ. ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿದ್ದ ಸುಳ್ಯದ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಎನ್. ಮಾತನಾಡಿ, ಚಂದ್ರಶೇಖರ ಪೇರಾಲುರವರು ಯಾವುದೇ ಇಲಾಖೆಯ ಪಾಲಿಗೆ ದೊಡ್ಡ ಆಸ್ತಿ. ಅವರ ಕಾರ್ಯನಿರ್ವಹಣೆಯಿಂದ ನಮ್ಮ ಕಾರ್ಯ ಚಟುವಟಿಕೆಗಳು ಸುಲಭವಾಗಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಸುಳ್ಯ ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್‌ಕೆರೆ ಮಾತನಾಡಿ, ತಾನು ಕೆಲಸ ಮಾಡಿದ ಕಡೆಗಳಲ್ಲೆಲ್ಲಾ ಸಂವೇದನಾಶೀಲ ವಾತಾವರಣವೊಂದನ್ನು ಚಂದ್ರಶೇಖರ ಪೇರಾಲು ಸೃಷ್ಟಿಸಿದ್ದಾರೆ. ಹಾಗಾಗಿ ಅವರಿಗೆ ಕ್ರಿಯಾಶೀಲವಾಗಿ ಮತ್ತು ಸಮಾಜಮುಖಿಯಾಗಿ ಕೆಲಸ ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು.
ಚಂದ್ರಶೇಖರ ಪೇರಾಲು ಮತ್ತು ಉಷಾ ಪೇರಾಲು ದಂಪತಿಯನ್ನು ಸನ್ಮಾನಿಸಲಾಯಿತು. ಇಲಾಖೆಯೊಳಗೆ ಎಲ್ಲರೂ ಕುಟುಂಬದಂತೆ ಪ್ರೀತಿ ವಿಶ್ವಾಸದಿಂದ ಕರ್ತವ್ಯ ನಿರ್ವಹಿಸಬೇಕು. ಆಗ ಸಾರ್ವಜನಿಕ ಸೇವೆಯ ಉದ್ಧೇಶ ಸಫಲವಾಗುತ್ತದೆ. ಈ ಇಲಾಖೆಯಲ್ಲಿ ಅದೇ ರೀತಿಯಲ್ಲಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಿದೆ ಎಂದು ಚಂದ್ರಶೇಖರ ಪೇರಾಲು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಪುತ್ತೂರು ತಾಲೂಕು ಸಹಾಯಕ ನಿರ್ದೇಶಕಿ ಶ್ರೀಮತಿ ಗಾಯತ್ರಿ ಮಾತನಾಡಿದರು. ವಸತಿ ನಿಲಯಗಳ ಮೇಲ್ವಿಚಾರಕ ಕೃಷ್ಣಪ್ಪ ಗೌಡ ಸ್ವಾಗತಿಸಿ, ಸಹಶಿಕ್ಷಕಿ ಕಾವ್ಯ ವಂದಿಸಿದರು. ಮೇಲ್ವಿಚಾರಕಿ ಆಶ್ರಿಯಾ ಕಾರ್ಯಕ್ರಮ ನಿರೂಪಿಸಿದರು.

 

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.