ಸುಳ್ಯ ಶುಭಶ್ರೀ ಮಹಿಳಾ ಮಂಡಲದ ವತಿಯಿಂದ ದಿವ್ಯಾಂಗ ವಿಕಲಚೇತನ ದಿನಾಚರಣೆ

Advt_Headding_Middle

 

ಸುಳ್ಯದ ಶುಭಶ್ರೀ ಮಹಿಳಾ ಮಂಡಲದ ವತಿಯಿಂದ ದಿವ್ಯಾಂಗ ವಿಕಲಚೇತನ ದಿನಾಚರಣೆಯನ್ನು ಡಿ. 3ರಂದು ಮುಳ್ಯ ಅಟ್ಲೂರಿನ ಶಾಲಾ ವಿದ್ಯಾರ್ಥಿನಿಯ ಮನೆಯಲ್ಲಿ ಆಚರಿಸಲಾಯಿತು.
ದಿವ್ಯಾಂಗ ವಿಕಲಚೇತನ ವಿದ್ಯಾರ್ಥಿನಿ ಕು. ನಿಶ್ಮಿತಾ ಡಿ. ಒಂದನೇ ತರಗತಿಯಲ್ಲಿ ಕಲಿಯುತ್ತಿದ್ದು, ಕಲಿಕೆಯಲ್ಲಿ ತುಂಬಾ ಚುರುಕಾಗಿದ್ದಾಳೆ. ಶುಭಶ್ರೀ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಹರಪ್ರಸಾದ್ ರವರ ನೇತೃತ್ವದಲ್ಲಿ ವಿದ್ಯಾರ್ಥಿನಿಯ ಭವಿಷ್ಯಕ್ಕೆ ಉತ್ತೇಜನ ನೀಡುವ ಭರವಸೆ ನೀಡಲಾಯಿತು. ಉಡುಪು ಮತ್ತು ಲೇಖನ ಸಾಮಗ್ರಿಗಳನ್ನು ನೀಡುವುದರೊಂದಿಗೆ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಹಿಳಾ ಮಂಡಲದ ಸದಸ್ಯರಾದ ಶ್ರೀಮತಿ ಗಿರಿಜಾ ,ಶ್ರೀಮತಿ ಸುಮಂಗಲಾ ರವಿರಾಜ್, ಶ್ರೀಮತಿ ಸುಜಾತಾ, ಶ್ರೀಮತಿ ಉಷಾ ಹಾಗೂ ಶ್ರೀಮತಿ ಧನಲಕ್ಷ್ಮಿ ಕುದ್ಪಾಜೆ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.