ಡಿ.8: ಜಾಲ್ಸೂರು ಗ್ರಾ.ಪಂ.ನಲ್ಲಿ ಇ- ಶ್ರಮ್ ಕಾರ್ಡ್ ಉಚಿತ‌ ನೋಂದಣಿ ಕಾರ್ಯಕ್ರಮ

Advt_Headding_Middle

 

ಸುದ್ದಿ ಡಿಜಿಟಲ್ ಸೇವಾ ಕೇಂದ್ರದ ವತಿಯಿಂದ ಸರಕಾರದಿಂದ ಅಸಂಘಟಿತ ಕಾರ್ಮಿಕರಿಗೆ ನೀಡಲ್ಪಡುವ ಇ-ಶ್ರಮ್ ಕಾರ್ಡ್ ನ ಉಚಿತ ನೋಂದಣಿ ಕಾರ್ಯಕ್ರಮವು ಡಿ.8ರಂದು ಜಾಲ್ಸೂರು ಗ್ರಾಮ ಪಂಚಾಯತಿ ಸಭಾಭವನದಲ್ಲಿ ನಡೆಯಲಿದೆ.
ಇ- ಶ್ರಮ್ ನೋಂದಾವಣೆಗೆ ಬರುವ ವರು ತಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್, ನಾಮಿನಿ ಆಧಾರ್ ಕಾರ್ಡನ್ನು ತರತಕ್ಕದ್ದು.

ಸರಕಾರದ ಇ.ಶ್ರಮ್ ಕಾರ್ಡನ್ನು
ಸಣ್ಣ ಮತ್ತು ಕನಿಷ್ಠ ರೈತರು, ಕೃಷಿ ಕಾರ್ಮಿಕರು, ಮೀನುಗಾರರು, ಪಶು ಸಂಗೋಪನೆಯಲ್ಲಿ ತೊಡಗಿರುವವರು, ಕಟ್ಟಡ ಮತ್ತು ಕಟ್ಟಡ ನಿರ್ಮಾಣಕ್ಕೆ‌ ಸಂಬಂದಿಸಿದ ಕಾರ್ಮಿಕರು, ಬಡಗಿ ಕೆಲಸಗಾರರು, ಶುಶ್ರೂಷಕಿಯರು,ಗೃಹ ಕಾರ್ಮಿಕರು, ಕ್ಷೌರಿಕರು, ತರಕಾರಿ ಮತ್ತು ಹಣ್ಣು ಮಾರಾಟಗಾರರು, ಸುದ್ದಿ ಪತ್ರಿಕೆ ಮಾರಾಟಗಾರರು, ಆಟೋ, ಟ್ಯಾಕ್ಸಿ , ಲಾರಿ,ವ್ಯಾನ್ ಚಾಲಕರು, ಬೀದಿ ವ್ಯಾಪಾರಿಗಳು, ವಲಸೆ ಕಾರ್ಮಿಕರು,ಎಲೆಕ್ಟ್ರಿಷಿಯನ್ , ಪೈಟಂರ್ಸ್ , ಟೈಲರ್ ಗಳು, ಆಶಾಕಾರ್ತೆಯರು, ಪೋಟೊಗ್ರಾಫರ್ಸ್ , ಮ್ಯಾಕೆನಿಕ್ಸ್
,ಮೋಟಾರು ವೆಹಿಕಲ್ ಮ್ಯಾಕೆನಿಕ್ಸ್ ಮತ್ತು ರೀಪೇರಿ‌ ಮಾಡುವರು, ಪ್ಲಂಬರ್‌ಗಳು ಮತ್ತು ಪೈಪ್ ಫಿಟ್ಟರ್‌ಗಳು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು, ಬೀಡಿ ವರ್ಕರ್ಸ್, ಖಾಸಗಿ ಬಸ್ ಕಂಡಕ್ಟರ್, ಡ್ರೈವರ್ ,
ಹೋಟೆಲ್ ಕಾರ್ಮಿಕರು, ಪ್ರಿಂಟಿಂಗ್ ಅಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ
16 ರಿಂದ 59 ವಯಸ್ಸಿನ ಅಸಂಘಟಿತ ವಲಯದ ಕಾರ್ಮಿಕರು ಈ ನೋಂದಣಿಗೆ ಅರ್ಹರಾಗಿರುತ್ತಾರೆ. ಹಾಗೂ EPFO ​​ಅಥವಾ ESIC ನ ಸದಸ್ಯರಾಗಿರಬಾರದು ಮತ್ತು ಆದಾಯ ತೆರಿಗೆ ಪಾವತಿಸುವವರಾಗಿರಬಾರದು.
ಈ ಇ- ಶ್ರಮ್ ಕಾರ್ಡ್ ನೋಂದಣಿ ಮಾಡಿಸುವುದರಿಂದ
ನೋಂದಾಯಿತ ಕಾರ್ಮಿಕರಿಗೆ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್ಬಿವೈ) ಅಡಿಯಲ್ಲಿ 2 ಲಕ್ಷ ರೂ. ಅಪಘಾತ ವಿಮಾ ಕವರೇಜ್ ಪಡೆಯುತ್ತಾರೆ. ಕಾರ್ಮಿಕ ಆಕಸ್ಮಿಕವಾಗಿ ಮರಣ ಹೊಂದಿದ್ರೆ ಅಥವಾ ಶಾಶ್ವತ ಅಂಗವೈಕಲ್ಯಕ್ಕೊಳಗಾದ್ರೆ 2 ಲಕ್ಷ ರೂ. ಸಿಗಲಿದೆ. ಅಸಂಘಟಿತ ಕಾರ್ಮಿಕರಿಗೆ ಲಭ್ಯವಿರೋ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಎಲ್ಲಾ ಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನ ಪಡೆಯಲು ನೋಂದಾಯಿತ ಕಾರ್ಮಿಕರು ಅರ್ಹನಾಗಿರುತ್ತಾರೆ. ತುರ್ತು ಸಂದರ್ಭ ಹಾಗೂ ರಾಷ್ಟ್ರೀಯ ವಿಪತ್ತಿನ ಸಮಯದಲ್ಲಿ ಇ-ಶ್ರಮ ಕಾರ್ಡ್ ಹೊಂದಿರೋರು ಎಲ್ಲ ರೀತಿಯ ನೆರವನ್ನು ಪಡೆಯಲು ಅರ್ಹರಾಗಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.