ಎಂ.ಜಿ.ಎಂ. ಪ್ರೌಢಶಾಲಾ ಮುಖ್ಯೋಪಾಧ್ಯಾಯ ಚಿದಾನಂದ ಕೇನಾಜೆಯವರಿಗೆ ಹಳೆವಿದ್ಯಾರ್ಥಿಗಳು ಮತ್ತು ಊರವರಿಂದ ಸನ್ಮಾನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಸುಳ್ಯದ ಮಹಾತ್ಮಾ ಗಾಂಧಿ ಮಲ್ನಾಡ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿ 20 ವರ್ಷ ಸೇವೆ ಸಲ್ಲಿಸಿ, ಪ್ರೌಢಶಾಲಾ ವಿಭಾಗವನ್ನು ಮುಚ್ಚಿದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ ಚಿದಾನಂದ ಕೇನಾಜೆಯವರಿಗೆ ಸನ್ಮಾನ ಕಾರ್ಯಕ್ರಮ ಶಾಲಾ ಹಳೆ ವಿದ್ಯಾರ್ಥಿ ಸಂಘ ಹಾಗೂ ಊರವರ ವತಿಯಿಂದ ಇಂದು ಅವರ ಮನೆಯಲ್ಲಿ ನಡೆಯಿತು.
ಹಳೆವಿದ್ಯಾರ್ಥಿಗಳಾದ ಆಶಿಕಾ, ಸುಷ್ಮಾ, ಮಧುಕಿರಣ್, ಶ್ರೇಷ್ಠಿತ್, ಪುನೀತ್ ಮತ್ತು ತನುದೀಪ್ ಪೆಲತಡ್ಕ , ಗ್ರಾ.ಪಂ.ಸದಸ್ಯ ಹರೀಶ್ ಉಬರಡ್ಕ, ಊರವರಾದ ಪುರುಷೋತ್ತಮ ಅಮೈ, ಪೋಷಕರ ಪರವಾಗಿ ಸೀತಾನಂದ ಬೇರ್ಪಡ್ಕ, ಮಲ್ನಾಡ್ ಹಿ.ಪ್ರಾ.ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶ್ರುತಿ ರೈ, ಎಂ.ಜಿ.ಎಂ.ಪ್ರೌಢಶಾಲೆಯ ಶಿಕ್ಷಕಿ ಶ್ರೀಮತಿ ಚಿತ್ರಲೇಖ ಮಡಪ್ಪಾಡಿ ಯವರು ಮಾತನಾಡಿ ಚಿದಾನಂದರ ವ್ಯಕ್ತಿತ್ವವನ್ನು ಶಾಲೆಗಾಗಿ ಅವರು ಮಾಡಿದ ಸೇವೆ ಮತ್ತು ತ್ಯಾಗವನ್ನು ವಿವರಿಸಿದರು.
ಬಳಿಕ ಎಲ್ಲರೂ ಸೇರಿ ಚಿದಾನಂದರು ಹಾಗೂ ಅವರ ಪತ್ನಿ ಮೋಹಿನಿ ಟೀಚರನ್ನು ಗೌರವಪೂರ್ವಕವಾಗಿ ಸನ್ಮಾನಿಸಿದರು.
ಬಳಿಕ ಚಿದಾನಂದರು ಮಾತನಾಡಿ, ಶಾಲೆಯ ಆರಂಭದ ದಿನಗಳು, ವಿದ್ಯಾರ್ಥಿಗಳೊಂದಿಗಿನ ಅನುಭವ, ಗೌಡ ಸಂಘ ಮತ್ತು ಊರವರ ಸಹಕಾರದ ಕುರಿತು ಹೇಳಿದರು.
ಮಧುಕಿರಣ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದ ವಿಜೇತ್ ಸುವರ್ಣ ವಂದಿಸಿದರು.
ಅನೇಕ ಮಂದಿ ಹಳೆವಿದ್ಯಾರ್ಥಿಗಳು, ಹತ್ತಾರು ಮಂದಿ ಊರವರು, ಕೊಡಿಯಾಲಬೈಲಿನ ಯುವಕ ಮಂಡಲ- ಯುವತಿ ಮಂಡಲದ ಸದಸ್ಯರು ಅಭಿನಂದನಾ ಕಾರ್ಯಕ್ರಮಕ್ಕಾಗಿ ಚಿದಾನಂದ ಕೇನಾಜೆಯವರ ಮನೆಗೆ ಬಂದಿದ್ದರು. ಮನೆಯ ಮಹಡಿಯಲ್ಲಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಲಾಗಿತ್ತು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.