ಸುಳ್ಯ ಪೊಲೀಸ್ ಠಾಣೆಯಲ್ಲಿ ಎಸ್‌ಸಿ, ಎಸ್‌ಟಿ ಕುಂದುಕೊರತೆ ಸಭೆ

Advt_Headding_Middle


ಸುಳ್ಯ ಪೊಲೀಸ್ ಠಾಣೆಯಲ್ಲಿ ಎಸ್‌ಸಿ, ಎಸ್‌ಟಿ ಕುಂದುಕೊರತೆ ಸಭೆ ಡಿಸೆಂಬರ್ ೫ರಂದು ಸುಳ್ಯ ಪೊಲೀಸ್ ಉಪ ನಿರೀಕ್ಷಕ ದಿಲೀಪ್‌ರವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಸ್ ಐ ದಿಲೀಪ್, ಪೋಸ್ಕೋ ಪ್ರಕರಣ ಜಾಸ್ತಿಯಾಗುವ ನಿಟ್ಟಿನಲ್ಲಿ ಮಕ್ಕಳ ಪೋಷಕರು ಇದರ ಬಗ್ಗೆ ಅತ್ಯಂತ ಕಾಳಜಿ ವಹಿಸಬೇಕು. ಮಕ್ಕಳು ಏನು ಮಾಡುತ್ತಾರೆ ಎಲ್ಲಿಗೆ ಹೋಗುತ್ತಾರೆ ಎಂದು ಅವರ ಮೇಲೆ ನಿಗಾ ವಹಿಸಬೇಕು. ಇದರ ಬಗ್ಗೆ ಮಕ್ಕಳ ಪೋಷಕರು ಇಂತಹ ಪ್ರಕರಣಗಳು ನಡೆಯದಂತೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು, ಹಾಗೂ ಯಾವುದೇ ಆಮಿಷಗಳಿಗೆ ಒಳಗಾಗದೆ ಮಕ್ಕಳ ಬಗ್ಗೆ ಜಾಗೃತಿ ವಹಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು. ವೇದಿಕೆಯಲ್ಲಿಎ ಎಸ್ ಐ ರತ್ನಕುಮಾರ್, ಪೊಲೀಸ್ ಹೆಡ್ ಕಾನ್ಸ್ಟೇಬಲ್ ಸತೀಶ್ ಉಪಸ್ಥಿತರಿದ್ದರು.

.ಸಭೆಯಲ್ಲಿ ಸಂಪಾಜೆ ಭಾಗದ ನದಿಗೆ ಮಲೀನ ನೀರು ಸೇರುತ್ತಿದ್ದು ಈ ಭಾಗದ ಜನರು ಕುಡಿಯುವ ನೀರಿನಲ್ಲಿ ಕಲುಷಿತಗೊಂಡು ತೊಂದರೆಯಾಗುತ್ತಿದೆ. ಮಲಿನ ನೀರನ್ನು ನದಿಗೆ ಬಿಡದಂತೆ ಇಲಾಖೆಯಿಂದ ಎಚ್ಚರಿಕೆ ನೀಡಬೇಕು, ಅದೇ ರೀತಿ ಮಂಡೆಕೋಲು ಭಾಗದಲ್ಲಿ ರಸ್ತೆಗಳು ಅಸಮರ್ಪಕವಾಗಿದ್ದು ಅದನ್ನು ಸರಿಪಡಿಸಿ ಕೊಡಬೇಕೆಂದು ಸಭೆಯಲ್ಲಿ ದಲಿತ ಮುಖಂಡರು. ಆಗ್ರಹಿಸಿದರು. ಠಾಣೆಯಲ್ಲಿ ನಡೆಯುವ ಎಸ್‌ಸಿ ಎಸ್‌ಟಿ ಕುಂದು ಕೊರತೆಯ ಸಭೆ ನಡೆಸುವ ಬಗ್ಗೆ ಸಂಘಟನೆಯವರಿಗೆ ಒಂದು ವಾರಕ್ಕೆ ಮೊದಲೇ ತಿಳಿಸಬೇಕು ಎಂದು ವಿನಂತಿಸಿಕೊಂಡರು. ಆಗ ಠಾಣಾಧಿಕಾರಿಯವರು ಪ್ರತಿ ತಿಂಗಳ ಎರಡನೇ ವಾರದ ಆದಿತ್ಯವಾರದಂದು ಎಸ್‌ಸಿ ಎಸ್‌ಟಿ ಕುಂದುಕೊರತೆ ಸಭೆ ನಡೆಸುತ್ತೇವೆ ಹಾಗಾಗಿ ಯಾರಿಗೂ ಕರೆಯ ಮುಖಾಂತರ ಕರೆಯುವುದಿಲ್ಲ ನೇರವಾಗಿ ಪ್ರತಿ ತಿಂಗಳ ಎರಡನೇ ಆದಿತ್ಯವಾರ ೧೦.೩೦ ಕ್ಕೆ ಸರಿಯಾಗಿ ದಲಿತ ಸಮುದಾಯದ ಎಲ್ಲಾ ಮುಖಂಡರು ಸಭೆಗೆ ಹಾಜರಾಗುವಂತೆ ತಿಳಿಸಿದರು.
ಸಭೆಯಲ್ಲಿ ದಲಿತ ಮುಖಂಡರುಗಳಾದ ಸತೀಶ್ ಬೂಡುಮಕ್ಕಿ, ಸರಸ್ವತಿ ಬೊಳಿಯಮಜಲು, ಆನಂದ್ ರಂಗತಮಲೆ, ಕೃಷ್ಣ ಮಂಡೆಕೋಲು, ಜಾಲ್ಸೂರು ಪಂಚಾಯತ್ ಅಧ್ಯಕ್ಷ ಬಾಬು ಹಾಗೂ ಇನ್ನೂ ಹಲವಾರು ದಲಿತ ಮುಖಂಡರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.