ಆಲೆಟ್ಟಿ ಗ್ರಾಮ ಪಂಚಾಯತ್ ನರೇಗಾ ವಿಶೇಷ ಗ್ರಾಮ ಸಭೆ

Advt_Headding_Middle

 

ಆಲೆಟ್ಟಿ ಗ್ರಾಮ ಪಂಚಾಯತ್ ನಲ್ಲಿ 14 ಮತ್ತು 15 ನೇ ಹಣಕಾಸು ಯೋಜನೆಯ ಹಾಗೂ ಮಹಾತ್ಮ ಗಾಂಧಿ ‌ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಪರಿಶೋಧನಾ ವಿಶೇಷ ಗ್ರಾಮ ಸಭೆಯು ಡಿ.22 ರಂದು ಪಂಚಾಯತ್ ಸಭಾಭವನದಲ್ಲಿ ನಡೆಯಿತು.


ನೊಡೆಲ್ ಅಧಿಕಾರಿ ಯಾಗಿ ಶಿಕ್ಷಣ ಸಂಯೋಜಕಿ ಶ್ರೀಮತಿ ನಳಿನಿ ಕೆ.ಎನ್ ರವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ‌ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪುಷ್ಪಾವತಿ ಕುಡೆಕಲ್ಲು, ಉಪಾಧ್ಯಕ್ಷ ದಿನೇಶ್ ಕಣಕ್ಕೂರು, ತಾಲೂಕು ಸಂಯೋಜಕ ಚಂದ್ರಶೇಖರ, ಪಿ.ಡಿ.ಒ.ಕೀರ್ತಿಪ್ರಸಾದ್,‌ ತೋಟಗಾರಿಕಾ ಇಲಾಖೆಯ ತಾಂತ್ರಿಕ ಸಹಾಯಕಿ ಆಕಾಂಕ್ಷ ಉಪಸ್ಥಿತರಿದ್ದರು.
ಸಭೆಯ ಆರಂಭದಲ್ಲಿ ಮಾಹಿತಿ ಕಣಜ ಕುರಿತು ಪ್ರಾತ್ಯಕ್ಷಿತೆ ಹಾಗೂ ಮಾಹಿತಿಯನ್ನು ಕಾರ್ಯದರ್ಶಿ ಸೃಜನ್ ಎ.ಜಿ.ಯವರು ನೀಡಿದರು.
ಪ್ರಸ್ತುತ ವರ್ಷದಲ್ಲಿ 14 ನೇ ಹಣಕಾಸು ಯೋಜನೆಯಲ್ಲಿ 35 ಕಾಮಗಾರಿ ರೂ.33.99ಲಕ್ಷದಲ್ಲಿ ವಿವಿಧ ಕಾಮಗಾರಿ ಮಾಡಲಾಗಿದೆ. ರೂ.25.30 ಲಕ್ಷದಲ್ಲಿ ಬೀದಿ ದೀಪ ದುರಸ್ತಿ ಮತ್ತು ವಿದ್ಯುತ್ ಬಿಲ್ಲು ,ಸ್ವಚ್ಚತಾ ಕಾರ್ಯಕ್ರಮಗಳಿಗೆ‌ ವಿನಿಯೋಗಿಸಲಾಗಿದೆ.
15ನೇ ಹಣಕಾಸು ಯೋಜನೆಯಲ್ಲಿ 12 ವಿವಿಧ ಕಾಮಗಾರಿಯು ರೂ.11.80 ಲಕ್ಷ , ನರೇಗಾ ಯೋಜನೆಯಡಿಯಲ್ಲಿ ಆರ್ಥಿಕ ವರ್ಷದಲ್ಲಿ ರೂ. 36.96 ಲಕ್ಷ 168 ಕಾಮಗಾರಿ ಕೆಲಸ 244 ಫಲಾನುಭವಿಗಳು‌ ಪ್ರಯೋಜನ ಪಡೆದಿರುತ್ತಾರೆ. ಸಭೆಯಲ್ಲಿ
ಬೆರಳೆಣಿಕೆಯ‌ ಸದಸ್ಯರು ‌ಹಾಗೂ ಫಲಾನುಭವಿಗಳು ಹಾಜರಿದ್ದರು. ವಾರ್ಷಿಕ ವರದಿಯ ಪಟ್ಟಿ ಯನ್ನು ವಾಚಿಸಲಾಯಿತು.
ವಿಶೇಷ ಗ್ರಾಮ ಸಭೆಗೆ ಫಲಾನುಭವಿಗಳ ಹಾಜರಾತಿ ಬೆರಳೆಣಿಕೆಯಷ್ಟು ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯರು. ವರದಿ ಪ್ರತಿಗಳನ್ನು ಸದಸ್ಯ ರಿಗೆ ನೀಡಬೇಕು. ಇಲ್ಲವಾದಲ್ಲಿ ಯಾವ ವಾರ್ಡ್ ನಲ್ಲಿ ಎಷ್ಟು ಮೊತ್ತದಲ್ಲಿ ಕೆಲಸ ನಡೆದಿದೆ ಎಂದು ತಿಳಿದು ಕೊಳ್ಳಲು ಸಾಧ್ಯವಾಗುವುದಿಲ್ಲ. ಸಾಮಾಜಿಕ ಲೆಕ್ಕ ಪರಿಶೋಧನೆಯ ಅಯವ್ಯಯಗಳ ಬಗ್ಗೆ ವರದಿ ಮಂಡಿಸಿರುತ್ತೀರಿ. ಆದರೆ ಸದಸ್ಯರ ಸಂಖ್ಯೆ ಕಡಿಮೆ ಇರುವುದರಿಂದ ವರದಿ ಮಂಜೂರು ಮಾಡುವ ಬಗ್ಗೆ ಅಸಮಾಧಾನ ವ್ಯಕ್ತವಾಯಿತು.ಗ್ರಾಮಸ್ಥರ ಪರವಾಗಿ ಒಟ್ಟು ಫಲಾನುಭವಿಗಳ ಮತ್ತು ಬಳಕೆಯಾದ ಮೊತ್ತದ ಕುರಿತು ಕೇಳಿದಾಗ ತಾಲೂಕು ಸಂಯೋಜಕ ಚಂದ್ರಶೇಖರ ರವರು ಸಮರ್ಪಕವಾದ ಉತ್ತರ ನೀಡದೆ ಅದರ ಲೆಕ್ಕಾಚಾರ ಆಮೇಲೆ ನೀಡುತ್ತವೆ ಎಂದು ಹಾರಿಕೆಯ ಉತ್ತರ ನೀಡಿದರು.
ಆಯಾಯ ವಾರ್ಡ್ ನಲ್ಲಿ ಕಾಮಗಾರಿ ನಡೆಯುವ ಮುಂಚಿತವಾಗಿ ಸದಸ್ಯರ ಗಮನಕ್ಕೆ ತರಬೇಕು. ಅಲ್ಲದೆ ಕೆಲಸ ಪೂರ್ತಿಯಾಗದೆ ಬಿಲ್ಲು ಮಾಡಬಾರದು ಎಂದು ಸದಸ್ಯೆ ಗೀತಾ ಕೋಲ್ಚಾರು ರವರು ಹೇಳಿದರು. ಗ್ರಾಮ ಸಭೆಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಇಂಜಿನಿಯರ್ ರವರು ಬರಬೇಕು ಎಂದು ಪಂ.ಸದಸ್ಯ ‌ಸತ್ಯಕುಮಾರ್ ಆಡಿಂಜ ರವರು ಒತ್ತಾಯಿಸಿದರು.
ಸಭೆಯ ಮಾಹಿತಿ ಮುಂಚಿತವಾಗಿ ಎಲ್ಲಾ ಫಲಾನುಭವಿಗಳಿಗೆ ತಿಳಿಸಿಲ್ಲ ಯಾಕೆ ? ಇದು ತುರ್ತು ಸಭೆಯೇ ಎಂದು ತವೀದ್ ಅರಂಬೂರು ಪ್ರಶ್ನಿಸಿದರು.
ಒಟ್ಟು 147 ಫಲಾನುಭವಿಗಳಿಗೆ ಪತ್ರ ಕಳುಹಿಸಲಾಗಿದೆ. ಪತ್ರಿಕೆಯಲ್ಲಿ ಗ್ರಾಮ ಸಭೆಯ ಪ್ರಕಟಣೆ ಜಾಹೀರಾತು ನೀಡಿದ್ದೇವೆ. ಸದಸ್ಯರಿಗೆ ಸಾಮಾಜಿಕ ಜಾಲತಾಣದಲ್ಲಿ ಮೆಸೆಜ್ ಕಳುಹಿಸಲಾಗಿದೆ‌ ಎಂದು ಪಿಡಿಒ ಕೀರ್ತಿಪ್ರಸಾದ್ ಸ್ಪಷ್ಟಪಡಿಸಿದರು.
ಶಿಕ್ಷಣಾಧಿಕಾರಿಯವರು ತುರ್ತು ಕಾರ್ಯಕ್ರಮ ದಲ್ಲಿ ಭಾಗವಹಿಬೇಕಾಗಿರುವುದರಿಂದ ನೊಡೆಲ್ ಅಧಿಕಾರಿಯಾಗಿ ಹಾಜರಾಗಲು ಸೂಚಿಸಿದ ಮೇರೆಗೆ ನಾನು ಬಂದಿರುತ್ತೇನೆ. ಇಂದಿನ ಗ್ರಾಮ ಸಭೆಯ ಹೆಚ್ಚಿನ ಮಾಹಿತಿ ನನಗೆ ಇಲ್ಲವಾಯಿತು. ಸದಸ್ಯರ ಸಂಖ್ಯೆ ಕಡಿಮೆ ಇರುವುದಲ್ಲದೆ ಸಂಬಂಧ ಪಟ್ಟ ಫಲಾನುಭವಿಗಳು‌ ಇಲ್ಲದೆ ಇರುವುದರಿಂದ ಇಲ್ಲಿ ಮಂಡಿಸಿದ ವರದಿಯ ಬಗ್ಗೆ ಗೊಂದಲವಿದೆ. ಸದಸ್ಯರ ಅಭಿಪ್ರಾಯದಂತೆ ಫಲಾನುಭವಿಗಳ ಹಾಜರಾತಿ ಇರಬೇಕು. ಆಗ ಯಾವ ಕೆಲಸ ಎಲ್ಲಿ ಮಾಡಲಾಗಿದೆ ಎಂದು ಸ್ಪಷ್ಟ ಚಿತ್ರಣ ಸಿಗಬೇಕು ಎಂದು ಅಧ್ಯಕ್ಷತೆ ವಹಿಸಿದ ನಳಿನಿ ಕೆ.ಎನ್. ತಿಳಿಸಿದರು.
ಪಿಡಿಒ ಸ್ವಾಗತಿಸಿದರು. ಗ್ರಾಮ ಸಂಪನ್ಮೂಲ ವ್ಯಕ್ತಿ ‌ಸವಿತಾ ಕಾರ್ಯಕ್ರಮ ನಿರೂಪಿಸಿದರು.
ಪಂಚಾಯತ್ ಸಿಬ್ಬಂದಿ ವರ್ಗದವರು ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.