ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘದ ವಾರ್ಷಿಕ ಮಹಾ ಸಭೆ ಡಿ. 18 ರಂದು ನಡೆಯಿತು. ಸಂಘದ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಉಪಾಧ್ಯಕ್ಷೆ ಸರೋಜಿನಿ ಯಂ., ನಿರ್ದೇಶಕರುಗಳಾದ ಶಶಿಕಲಾ ಡಿ.ಪಿ., ಹೊನ್ನಪ್ಪ ಗೌಡ ಚಿರೆಕಲ್ಲು, ಮಹಾಲಿಂಗ ಬಳ್ಳಕ್ಕ, ನಾಗೇಶ ಪಾರೆಪ್ಪಾಡಿ, ಮಹೇಶ್ ಮುತ್ಲಾಜೆ, ಹರೀಶ್ ಚಿಲ್ತಡ್ಕ, ಲೋಕೇಶ್ವರ ಡಿ.ಆರ್., ರಘುರಾಮ ಬಾಕಿಲ, ಕರುಣಾಕರ ಹೊಸಹಳ್ಳಿ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿ ಕೆ. ವರದಿ ವಾಚಿಸಿದರು. ಸಂಘದ ಸಿಬ್ಬಂದಿಯಾದ ಶಿವಪ್ರಸಾದ ಹಾಲೆಮಜಲು ಸ್ವಾಗತಿಸಿ, ಲೋಕೇಶ್ವರ ಡಿ.ಆರ್. ವಂದಿಸಿದರು.