Breaking News

ಎನ್ನೆಂಸಿ: ಇತಿಹಾಸ ವಿಭಾಗದಿಂದ “ಅಮರ ಸುಳ್ಯ ದಂಗೆ 1835 – 37” ಉಪನ್ಯಾಸ ಕಾರ್ಯಕ್ರಮ

Advt_Headding_Middle

 

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಇತಿಹಾಸ ವಿಭಾಗದ ವತಿಯಿಂದ “ಅಮರ ಸುಳ್ಯ ದಂಗೆ 1935- 37” ವಿಷಯದ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಡಿ. 23ರಂದು ಕಾಲೇಜಿನಲ್ಲಿ ನಡೆಯಿತು. ನ್ಯಾಯವಾದಿ ವಿದ್ಯಾಧರ ಕುಡೆಕಲ್ಲು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಉಪನ್ಯಾಸ ನೀಡುತ್ತಾ 1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕಿಂತ 20 ವರ್ಷಗಳ ಹಿಂದೆಯೇ ವಸಾಹತುಶಾಹಿಗಳ ವಿರುದ್ಧ ನಡೆದ ಸಂಘಟಿತ ಸಂಗ್ರಾಮದ ಕುರಿತಂತೆ ಸುದೀರ್ಘವಾದ ಉಪನ್ಯಾಸವನ್ನು ನೀಡಿದರು.

ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ. ಎಂ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಬ್ರಿಟಿಷ್ ವಸಾಹತುಶಾಹಿ ವಿರುದ್ಧ ನಡೆದ ಅನೇಕ ಹೋರಾಟಗಳಲ್ಲಿ ಅಮರ ಸುಳ್ಯ ಮತ್ತು ಕೊಡಗಿನ ರೈತರ ಹೋರಾಟಗಳು ಬಹಳ ಪ್ರಮುಖವಾದವು. ಈ ಹೋರಾಟಗಳಲ್ಲಿ ಈ ಭಾಗದ ಅನೇಕ ಮಹಾನ್ ದೇಶಭಕ್ತರು ತಮ್ಮ ತ್ಯಾಗ-ಬಲಿದಾನ ಮಾಡಿದ್ದು ಪ್ರಸ್ತುತ ದಿನಗಳಲ್ಲಿ ಅವರ ಹೋರಾಟವನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

 ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ರತ್ನಾವತಿ ಡಿ. ಉಪಸ್ಥಿತರಿದ್ದರು.
ಇತಿಹಾಸ ವಿಭಾಗದ ಮುಖ್ಯಸ್ಥ ತಿಪ್ಪೇಸ್ವಾಮಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷದ ಆಚರಣೆಯಲ್ಲಿದ್ದೇವೆ. ಎಲ್ಲೆಡೆ ಸಂಭ್ರಮದ ಅಮೃತ ಮಹೋತ್ಸವ ಆಚರಣೆ ನಡೆದಯುತ್ತಿದೆ. ಇಂತಹ ಸಮಯದಲ್ಲಿ ನಮ್ಮ ಮಣ್ಣಿನಲ್ಲಿ ನಡೆದ ಮಹತ್ವದ ಘಟನೆಯನ್ನು ಸ್ಮರಿಸಿಕೊಳ್ಳುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ತೃತೀಯ ಬಿಎ ವಿದ್ಯಾರ್ಥಿಗಳಾದ ಅರ್ಪಿತಾ ಪ್ರಾರ್ಥಿಸಿ, ಪೂಜಿತಾ ವಂದಿಸಿ, ಚರಣ್ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.